ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಬಹುದಿನದ ನಿವೇಶನ ಕೊಳ್ಳುವ ಕನಸು ನನಸಾಗಲಿದೆ
Published 19 ಜೂನ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ನೇಹಿತರಲ್ಲಿ ಹಣಕಾಸಿನ ವಿಚಾರಕ್ಕೆ ಮನಸ್ತಾಪ ಬರದಂತೆ ಜಾಗರೂಕರಾಗಿರಿ. ದನ ಕರುಗಳ ಅಥವಾ ಮನೆಯಲ್ಲಿ ಸಾಕಿರುವ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿಸುವಿರಿ. ವಿರೋಧಿಗಳು ರಾಜಿಯಾಗುವ ಸಾಧ್ಯತೆ.
ವೃಷಭ
ಹಳೆಯ ಶಾಲೆಗೆ ಭೇಟಿ ನೀಡುವುದರ ಜತೆಗೆ ಈಗಿನ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವ ಮೂಲಕ ಅವರಿಗೆ ಮಾರ್ಗದರ್ಶನ ಮಾಡುವಿರಿ. ಕೆಲವು ಮೂಲಭೂತ ಬದಲಾವಣೆಗಳಾಗುವ ಸಾಧ್ಯತೆ ಇದೆ.
ಮಿಥುನ
ವಿದೇಶ ಪ್ರಯಾಣ ಕೈಗೊಳ್ಳುವ ಕಾರ್ಯಕ್ರಮವಿರುವುದರಿಂದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳುವಿರಿ. ಮನೆಯಲ್ಲಿ ಶುಭ ಕಾರ್ಯಗಳ ತಯಾರಿ ಉತ್ತಮವಾಗಿ ನಡೆಯುವುದು. ಸಂಸಾರ ನಿರ್ವಹಣೆ ಸುಲಭವೆನಿಸುವುದಿಲ್ಲ.
ಕರ್ಕಾಟಕ
ಕಟ್ಟಡ ನಿರ್ಮಾಣದವರು ಹೊರ ಊರಿನಲ್ಲಿ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗುವಿರಿ. ಮಕ್ಕಳ ಮಾತುಗಳು ಗೊಂದಲಗಳನ್ನು ಸೃಷ್ಟಿಸಬಹುದು. ವಿದ್ಯಾರ್ಥಿಗಳಿಗೆ ಉತ್ತಮ ನೆನಪಿನಶಕ್ತಿ, ಜ್ಞಾನ ದೊರೆತು ಆನಂದವಾಗಲಿದೆ.
ಸಿಂಹ
ಮಾಡುವ ತಪ್ಪಿನಿಂದಾಗಿ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠವನ್ನು ಕಲಿಯುವಂತಾಗಲಿದೆ. ವ್ಯವಹಾರಸ್ಥರಿಗೆ ಲಾಭ ಸಿಗಲಾರದು ಹಾಗೆಯೇ ನಷ್ಟವೂ ಇರಲಾರದು. ಸಂಗಾತಿಯ ಸಲಹೆಗಳಿಗೆ ಗಮನ ಕೊಡಿ.
ಕನ್ಯಾ
ಮನೆಯ ಹಿರಿಯರ ಆಶೀರ್ವಾದದ ಮೇರೆಗೆ ವೈದ್ಯ ವೃತ್ತಿಯನ್ನು ಆರಂಭಿಸುವ ಸಲುವಾಗಿ ಸ್ನೇಹಿತರೊಂದಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ಬಹುದಿನದ ನಿವೇಶನ ಕೊಳ್ಳುವ ಕನಸು ನನಸಾಗಲಿದೆ.
ತುಲಾ
ಬಿಡುವಿಲ್ಲದ ದಿನಚರಿಯ ನಂತರ ಸ್ವಲ್ಪ ಬಿಡುವಿನ ದಿನ ಇಂದಾಗುವುದು. ಕಡೆಯ ಸಮಯದಲ್ಲಿ ಅಪಾಯದಿಂದ ಪಾರಾಗುವುದು ದೊಡ್ಡ ನಿರಾಳತೆ ಆಗುತ್ತದೆ. ವಿವಾಹ ಅಪೇಕ್ಷಿಗಳಿಗೆ ಶುಭ.
ವೃಶ್ಚಿಕ
ಮುಜುಗರವನ್ನು ಮೀರಿ ಭಾವಿ ಜೀವನ ಸಂಗಾತಿಯಲ್ಲಿ ನಿಮ್ಮ ಮನಸ್ಸಿನ ಮಾತನ್ನು ಆಡುವುದರಿಂದ ಉತ್ತಮ ಜೀವನದ ಅಡಿಪಾಯ ನಿಮ್ಮದಾಗುವುದು. ಔಷಧಿ ಮಾರಾಟಗಾರರಿಗೆ ಹೆಚ್ಚಿನ ಲಾಭ.
ಧನು
ಸ್ತ್ರೀ ಸಂಬಂಧಿ ಕೋರ್ಟು ಕಚೇರಿಗಳ ಮೆಟ್ಟಿಲನ್ನು ಹತ್ತುವಂತೆ ಮಾಡುವುದು. ಸಂತುಷ್ಟವಾಗಿ ಜೀವಿಸುತ್ತಿರುವ ನೀವು ಬೇರೆಯವರ ಮಾತಿಗೆ ಬೆಲೆ ಕೊಡದಿರಿ. ನರಸಿಂಹ ದೇವರ ಸೇವೆಯಿಂದ ಉತ್ತಮ ಫಲ.
ಮಕರ
ಸಣ್ಣ ಮಗುವಿನ ಜತೆಗೆ ದೂರದ ಪ್ರಯಾಣವನ್ನು ಯೋಚಿಸಿದ್ದರೆ ಆದಷ್ಟು ಅದನ್ನು ಬಿಡುವ ಪ್ರಯತ್ನ ಮಾಡಿ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸ ಬೇಕಾಗುವುದು. ಮನೆ ದೇವರ ದರ್ಶನ ಶುಭ ತರುತ್ತದೆ.
ಕುಂಭ
ಕಣ್ಣೆದುರೇ ದುಷ್ಕರ್ಮಗಳು ನಡೆಯುತ್ತಿದ್ದರೂ ಎನೂ ಮಾಡಲಾಗದ ದುಃಸ್ಥಿತಿ ನಿಮ್ಮದಾಗಬಹುದು. ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಹೆಚ್ಚು ಆನಂದ ಸಿಗಬಹುದು.
ಮೀನ
ಸಂಗೀತಗಾರರಿಗೆ ಕಂಠ ಸಿರಿಗೆ ಉತ್ತಮ ಪ್ರಶಂಸೆಗಳು ಕೇಳಿಬರುತ್ತವೆ. ನಡೆಯಲಿರುವ ಮದುವೆಯ ಪ್ರಯುಕ್ತ ವಿಲಾಸಿ ಸಾಮಗ್ರಿಗಳನ್ನು ಖರೀದಿಸುವಿರಿ. ಮನೆಯ ಖರ್ಚಿನ ಮೇಲೆ ಹಿಡಿತವಿರಲಿ.
ADVERTISEMENT
ADVERTISEMENT