ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜೂನ್ 25 ಮಂಗಳವಾರ 2024- ಪರಿಶ್ರಮಕ್ಕೆ ತಕ್ಕ ಯಶಸ್ಸು
Published 24 ಜೂನ್ 2024, 18:37 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಹಜೀವನದಲ್ಲಿ ದೊರೆಯುವ ಸಹಕಾರ ಹಾಗೂ ಖುಷಿಯನ್ನು ಒಬ್ಬಂಟಿಯಾಗಿ ಜೀವಿಸುತ್ತಿರುವ ನೀವು ಬಹಳವಾಗಿ ನೆನೆಸಿಕೊಳ್ಳುವಿರಿ. ಏಕ ಕಾಲದಲ್ಲಿ ಹತ್ತಾರು ಕೆಲಸಗಳನ್ನು ಮಾಡುವ ಉತ್ಸಾಹ ನಿಮ್ಮಲ್ಲುಂಟಾಗುವುದು.
ವೃಷಭ
ವಿದ್ಯಾಧಿದೇವತೆಯ ಕೃಪಾಕಟಾಕ್ಷದಿಂದ ಬೌದ್ಧಿಕ ಸ್ಪರ್ಧೆಯಲ್ಲಿ ಉತ್ತಮ ಸ್ಥಾನವನ್ನು ಪಡೆಯುವಿರಿ. ದಿನನಿತ್ಯದ ಕೆಲಸಗಳಲ್ಲಿ ಅನಪೇಕ್ಷಿತವಾದ ತೊಡಕುಗಳು ಉಂಟಾಗುತ್ತವೆ.
ಮಿಥುನ
ಮನೆಯಲ್ಲಿ ನಿಮ್ಮ ಶಕ್ತಿಗೂ ಮೀರಿ ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದರೂ ನಿಮ್ಮ ಬಗ್ಗೆ ಲಘುವಾಗಿ ಮಾತನಾಡಿದಾಗ ಕೋಪ ಬಂದರೂ ಸುಮ್ಮನಿರಬೇಕಾದ ಪರಿಸ್ಥಿತಿ ಇರುತ್ತದೆ.
ಕರ್ಕಾಟಕ
ಪ್ರತಿದಿನವು ಗಣಕಯಂತ್ರದ ಮುಂದೆ ನಡೆಯುವ ಕೆಲಸದ ಮೇಲೆ ಬೇಸರ ಬರಬಹುದು. ತನು, ಮನ, ಧನವನ್ನು ಅರ್ಪಿಸಿ ಮಾಡಿದಂಥ ಸಮಾಜಕಾರ್ಯವು ಜನಮನ್ನಣೆಗೊಳಗಾಗುವುದು.
ಸಿಂಹ
ಅತಿಯಾಗಿ ಆಸೆಪಟ್ಟು ಇತರರೊಂದಿಗೆ ವಾಗ್ವಾದ ನಡೆಸಿ ಪಡೆದ ವಸ್ತುವನ್ನು ಬೇಜವಾಬ್ದಾರಿಯಿಂದ ಹಾಳು ಮಾಡಿಕೊಳ್ಳುವಿರಿ. ವಕೀಲೀ ವೃತ್ತಿಯವರಿಗೆ ಗೆಲುವು ಸಾಧಿಸಲು ಬೇಕಾದ ಅವಕಾಶ ಸಿಗಲಿದೆ.
ಕನ್ಯಾ
ಈವರೆಗೂ ನೀವು ಗಳಿಸಿದ ಒಳ್ಳೆಯ ಹೆಸರಿಗೆ ಕುತಂತ್ರಿಗಳು ಮಸಿ ಬಳಿಯುವ ಉಪಾಯವನ್ನು ಮಾಡುವರು. ವೃತ್ತಿರಂಗದಲ್ಲಿ ಅನಿಶ್ಚಿತ ಸ್ಥಾನವು ಉತ್ತಮ ನಡೆಯಿಂದಾಗಿ ನಿಶ್ಚಯವಾಗುತ್ತದೆ.
ತುಲಾ
ಆತುರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮಗನಿಗೆ ತಿಳಿಸುವುದು ಉತ್ತಮ. ವದಂತಿಗಳಿಗೆ ಬೆಲೆಕೊಟ್ಟು ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಲ್ಲ. ವೃತ್ತಿರಂಗದಲ್ಲಿ ಪರಿಶ್ರಮಕ್ಕೆ ತಕ್ಕ ಯಶಸ್ಸು ಸಿಗಲಿದೆ.
ವೃಶ್ಚಿಕ
ದುಷ್ಟರ ಸಹವಾಸದಿಂದಾಗಿ ಹಾದಿ ತಪ್ಪುತ್ತಿರುವ ಮಕ್ಕಳ ಬಗ್ಗೆ ಎಷ್ಟು ಮೇಲ್ವಿಚಾರಣೆ ನಡೆಸಿದರೂ ಕಡಿಮೆಯೇ. ಕಠಿಣ ಪರಿಶ್ರಮದ ಮೂಲಕ ಮೇಲಧಿಕಾರಿಗಳ ಮನವನ್ನು ಗೆಲ್ಲಲು ಪ್ರಯತ್ನಿಸಿ.
ಧನು
ಅನ್ಯರ ಸಮಸ್ಯೆಗಳಿಗೆ ನಿಮ್ಮ ಮಾತುಗಳಿಂದಾಗಿ ಪರಿಹಾರ ದೊರೆಯುತ್ತದೆ. ಉತ್ಪ್ರೇಕ್ಷೆ ಎನ್ನಿಸುವ ಕೆಲವು ಹೊಗಳಿಕೆಯ ಮಾತುಗಳಿಗೆ ಮರುಳಾಗದಿರಿ. ರಾಜೇಶ್ವರಿಯನ್ನು ಆರಾಧಿಸಿ.
ಮಕರ
ಕಾರ್ಯಸಾಧನೆಗೆ ನಿಮ್ಮ ಪ್ರಯತ್ನದ ಹೊರತಾಗಿ ದೈವಬಲವು ಇರಬೇಕಾಗುತ್ತದೆ ಎಂದು ಅರಿತುಕೊಂಡು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿ. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಇದು ಸಕಾಲವಾಗಿದೆ.
ಕುಂಭ
ಸಭೆಯಲ್ಲಿ ನಿಮ್ಮ ಸ್ಥಾನ ಹಾಗೂ ಇತಿಮಿತಿಗಳನ್ನು ಅರಿಯದ ಹೊರತು ಕನಿಷ್ಠ ಗೌರವ ಸಿಗದು. ಕಾರ್ಮಿಕ ವರ್ಗದವರ ಹೆಚ್ಚಿನ ಬೇಡಿಕೆಗಳು ವ್ಯವಸ್ಥಾಪಕರಿಂದ ಈಡೇರಲಿವೆ. ವ್ಯಾಪಾರಿಗಳಿಗೆ ಉತ್ತಮ ದಿನ.
ಮೀನ
ಬಹುಕಾಲದ ಬಳಿಕ ವೃತ್ತಿ ಕ್ಷೇತ್ರದಿಂದ ಮರಳಿ ಬಂದು ಪಾಲಕ, ಪೋಷಕ ಹಾಗು ಸಂಬಂಧಿಗಳನ್ನು ಭೇಟಿಯಾಗುವ ಭಾಗ್ಯ ನಿಮ್ಮದಾಗುತ್ತದೆ. ಕೈಗಾರಿಕಾ ಕ್ಷೇತ್ರದಲ್ಲಿ ಲಾಭವನ್ನು ಪಡೆಯುವಿರಿ.