ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜೂನ್ 28 ಶುಕ್ರವಾರ 2024– ಧನಲಾಭ ಹೊಂದುವಿರಿ
Published 27 ಜೂನ್ 2024, 18:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸ ಆರಂಭಿಸುವ ಮುನ್ನ ಪ್ರಾಜ್ಞರಲ್ಲಿ ಸಮಯವು ಸರಿಯೇ ಎಂದು ವಿಚಾರಿಸಿ. ಮಕ್ಕಳ ಜವಾಬ್ದಾರಿಯನ್ನು ಅಪ್ಪಿತಪ್ಪಿ ಬೇರೆಯವರಿಗೆ ಒಪ್ಪಿಸಲು ಹೋಗದಿರಿ. ನೆರೆ ಹೊರೆಯವರೊಡನೆ ಉತ್ತಮ ಬಾಂಧವ್ಯ ಹೊಂದುವಿರಿ.
ವೃಷಭ
ಎದುರಾಗುವ ಸನ್ನಿವೇಶಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಗೊಂದಲಗಳು ಕಾಡಲಿದೆ. ಕೇಟರಿಂಗ್ ಮತ್ತು ಹೊಟೆಲ್ ಉದ್ಯಮ ನಡೆಸುವವರಿಗೆ ಶುಭದಿನ. ಮಧುರ ಖಾದ್ಯಗಳ ಭೋಜನ ನಿಮ್ಮದಾಗುವುದು.
ಮಿಥುನ
ಧಾರ್ಮಿಕ ಪ್ರವಚನದಂಥ ಕಾರ್ಯದ ಸಂಕಲ್ಪ ಹೊಂದಿದವರಿಗೆ ದೇವರ ಅನುಗ್ರಹದಿಂದ ಜನ ಹಾಗು ಧನ ಸಹಾಯ ದೊರೆಯುವುದು. ರಚನಾತ್ಮಕ ಕೆಲಸಗಳಿಗೆ ಪ್ರಾಶಸ್ತ್ಯ ಕೊಡುವುದರಿಂದ ಸಂತಸ ಹೊಂದುವಿರಿ.
ಕರ್ಕಾಟಕ
ನ್ಯಾಯಾಲಯದಲ್ಲಿರುವ ಪ್ರಕರಣಗಳು ನಿಮ್ಮ ವಿರುದ್ಧವಾಗಿ ತಿರುಗುವಂತೆ ಷಡ್ಯಂತ್ರ ನಡೆಯಬಹುದು. ವಿದ್ಯಾರ್ಥಿಗಳು ಪೈಪೋಟಿ ಎದುರಿಸುವ ದಿನವಾಗುವುದು. ವ್ಯಾಪಾರದ ವಿಚಾರದಲ್ಲಿ ಚರ್ಚೆ ನಡೆಯಲಿದೆ.
ಸಿಂಹ
ವರಿಷ್ಠ ಅಧಿಕಾರಿಗಳಿಗೆ ವಿಶೇಷ ಸ್ಥಾನಮಾನ, ಅಧಿಕಾರಗಳು ಪ್ರಾಪ್ತವಾಗಲಿದೆ. ರಫ್ತು ವ್ಯವಹಾರದಲ್ಲಿ ಹೇರಳ ಲಾಭ– ತಲೆಬಿಸಿಯ ವಾತಾವರಣಗಳೆರಡೂ ಇರುವುದು. ತಂಗಿಯ ದುಃಖಕ್ಕೆ ಹೆಗಲಾಗಿ ನಿಲ್ಲುವಿರಿ.
ಕನ್ಯಾ
ನಿರೀಕ್ಷೆಯ ಫಲಿತಾಂಶವು ವೃತ್ತಿ ಜೀವನದಲ್ಲಿ ದೊರೆಯಲು ಹರ ಸಾಹಸ ಪಡಬೇಕಾದ ಸಂದರ್ಭ ಬರುತ್ತದೆ. ಪಾಲಕರಾಗುವ ಸುದ್ದಿ ತಿಳಿದು ಅತೀವ ಸಂತಸ. ಬಂಗಾರದ ವ್ಯಾಪಾರಿಗಳಿಗೆ ಸಾಧಾರಣ ಲಾಭವಿರುವುದು.
ತುಲಾ
ಮನೆಯಲ್ಲಿ ನಡೆದ ಕಾರ್ಯಕ್ರಮದ ಫಲವಾಗಿ ದೈನಂದಿನ ವೇಳಾಪಟ್ಟಿ ಬದಲಾವಣೆಯಾಗಲಿದೆ. ಗೃಹ ಕೈಗಾರಿಕೆ ಕೆಲಸಗಳಲ್ಲಿ ಮನೆಯವರ ಪರಿಶ್ರಮ ಸಾರ್ಥಕವೆನಿಸುವುದು. ಹಣ ಖರ್ಚು ಮಾಡುವ ಪರಿಸ್ಥಿತಿ ಬರುವುದು.
ವೃಶ್ಚಿಕ
ಸುತ್ತಮುತ್ತಲಿನ ವಾತಾವರಣವು ಶಾಂತಿಯನ್ನು ಕೆಡಿಸುವ ಕೆಲಸವನ್ನು ಮಾಡುವುದು. ಯೋಜನೆಗಳು ಕಾರ್ಯಗತಗೊಳ್ಳಲು ಪ್ರಯತ್ನ ನಡೆಸಬೇಕಾಗುವುದು. ಉದ್ರೇಕಕ್ಕೆ ಒಳಗಾಗದೆ ಕೆಲಸವನ್ನು ಮಾಡಿ.
ಧನು
ರಂಗಿನ ಲೋಕದ ಕನಸನ್ನು ನನಸು ಮಾಡಿಕೊಳ್ಳುವ ಭರದಲ್ಲಿ ಹಣ ಹಾಳು ಮಾಡಿಕೊಳ್ಳದಿರಿ. ರಕ್ತ ಅಥವಾ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಔಷಧಿಯಿಂದ ಚೇತರಿಕೆ ಸಿಗಲಿದೆ.
ಮಕರ
ಪರಪೀಡನೆಯನ್ನೇ ತನ್ನ ವೃತ್ತಿ ಎಂದು ತಿಳಿಯುವ ವ್ಯಕ್ತಿಗಳ ಜತೆ ಸಂಭಾಷಣೆ ನಡೆಸಿ ಪ್ರಯೋಜನವಿಲ್ಲ. ತಕ್ಷಣದಲ್ಲಿ ನಡೆಯಬೇಕೆಂಬ ಅಗತ್ಯ ಕಾರ್ಯಗಳಲ್ಲಿ ವಿಳಂಬ ತೋರಿಬಂದೀತು.
ಕುಂಭ
ಏನಾದರೂ ಸಾಧಿಸಲೇಬೇಕೆಂಬ ಆಸೆ-ಆಕಾಂಕ್ಷೆಗೆ ಆತ್ಮವಿಶ್ವಾಸದ ಕೊರತೆಯಂತೂ ಕಾಣಿಸದು. ಕರ್ತವ್ಯದ ಕೊರತೆ ಮೇಲಧಿಕಾರಿಗಳಿಗೆ ಎದ್ದು ಕಾಣಲಿದೆ. ಸಂಸಾರ ನಿರ್ವಹಣೆಗಾಗಿ ಅಧಿಕ ಹಣ ವ್ಯಯಿಸುವಿರಿ.
ಮೀನ
ಕೆಲಸದಲ್ಲಿ ಗುಣಮಟ್ಟದ ಕೊರತೆಯಿಂದಾಗಿ ಸಮಾಧಾನ ಇಲ್ಲದಂತೆ ಆಗುತ್ತದೆ. ಕ್ರೀಡಾಕ್ಷೇತ್ರದಲ್ಲಿನ ಹೆಸರು ನಿರಂತರ ಪ್ರಯತ್ನದಿಂದಾಗಿ ಉತ್ತಮ ಸ್ಥಾನ ತಲುಪುತ್ತದೆ. ಆಕಸ್ಮಿಕವಾಗಿ ಧನಲಾಭ ಹೊಂದುವಿರಿ.