ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲಗಳು ಪ್ರಾಪ್ತಿ
Published 30 ಜೂನ್ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಾರ್ಯ ಸಾಧನೆಗೆ ಅಧಿಕ ತಿರುಗಾಟದಿಂದ ಆಯಾಸ ಮತ್ತು ಆಹಾರ ದಲ್ಲಿ ವಿಷದ ಅಂಶವು ಸೇರಿ ಆರೋಗ್ಯ ಹದಗೆಡುವ ಸಾಧ್ಯತೆ. ಪ್ರಾರಂಭಿಸಿದ ಕೆಲಸ ನಾಳೆಗೆ ಎನ್ನದೆ ವೃತ್ತಿಯಲ್ಲಿ ಪಾದರಸದಂತೆ ಇರಲು ಪ್ರಯತ್ನಿಸಿ.
ವೃಷಭ
ದಿನವೂ ಮಾಡುವ ಕೆಲಸಗಳನ್ನೇ ಅಧಿಕಾರಿಗಳ ಕಣ್ಣೆದುರಿಗೆ ಮಾಡಬೇಕಾದ ಸಂದರ್ಭ ಬಂದಾಗ ಗುಣಮಟ್ಟದ ಬದಲಾವಣೆಯಾಗುವುದು. ಮಕ್ಕಳಿಗಾಗಿ ಇಷ್ಟದ ವಿಚಾರಗಳನ್ನು ತ್ಯಾಗ ಮಾಡಬೇಕಾಗಿ ಬರುತ್ತದೆ.
ಮಿಥುನ
ಅತಿ ಪುತ್ರವ್ಯಾಮೋಹವು ತಪ್ಪು ಹೆಜ್ಜೆ ಇಡುವಂತೆ ಮಾಡಬಹುದು. ಸಣ್ಣ ವಿದ್ಯುತ್ ಉಪಕರಣಗಳ ಮಾರಾಟವು ಲಾಭದಾಯಕ. ಮನೆಯಲ್ಲಿನ ಗೋಸಂಪತ್ತಿನಲ್ಲಿ ತೊಂದರೆಗಳು ಉಂಟಾಗಬಹುದು.
ಕರ್ಕಾಟಕ
ಯಶಸ್ಸಿಗೆ ಏಕಾಗ್ರತೆ ಮತ್ತು ಪ್ರಯತ್ನ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಅದರಿಂದಾಗಿ ಎಲ್ಲ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಬರುವುದು. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲಗಳು ಪ್ರಾಪ್ತಿ.
ಸಿಂಹ
ಹಿರಿಯ ಅಧಿಕಾರಿಗಳು ಪರಿಶ್ರಮ ಹಾಗೂ ಜವಾಬ್ದಾರಿಯುತ ನಡವಳಿಕೆಗಳನ್ನು ಗಮನಿಸಿ ಆರ್ಥಿಕ ಮಟ್ಟವನ್ನು ಮೇಲಕ್ಕೆತ್ತುವರು. ಹಿಂದಿನ ದಿನಗಳಿಗೆ ಹೋಲಿಸಿದರೆ ಈ ದಿನ ಸಂಸಾರ ನಿರ್ವಹಣೆ ಸುಲಭವೆನಿಸುವುದು.
ಕನ್ಯಾ
ಹಿತ ಶತ್ರುಗಳು ನಾವಿದ್ದೇವೆ ಎಂದು ಹೇಳುವುದು ಅನುಭವಕ್ಕೆ ಬರಲಿದೆ. ಹಳೆಯ ತ‍ಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವಿರಿ. ಮಗನಿಗೆ ಉದ್ಯೋಗ ದೊರೆತು ಸಂತೋಷವಾಗುತ್ತದೆ.
ತುಲಾ
ನಿವೃತ್ತ ಜೀವನವನ್ನು ಮೊಮ್ಮಕ್ಕಳ ಜೊತೆ ಸಂತೋಷದಿಂದ ಕಳೆಯುವ ಕನಸು ಅಕ್ಷರಶಃ ಸತ್ಯವಾಗುತ್ತದೆ. ನೌಕರಿಯಲ್ಲಿ ಅಭಿಪ್ರಾಯಕ್ಕೆ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಸಿಗುವುದು.
ವೃಶ್ಚಿಕ
ಎಲ್ಲಾ ಕಾರ್ಯಗಳು ಅಂದುಕೊಂಡ ರೀತಿಯಲ್ಲೇ ಆಗಲು ಸಾಧ್ಯವಾಗದಿರಬಹುದು. ವೃತ್ತಿಗೆ ನೀವು ನೀಡುವಷ್ಟೇ ಪ್ರಾಶಸ್ತ್ಯವನ್ನು ಸಾಂಸಾರಿಕ ಜೀವನಕ್ಕೂ ನೀಡಿ.
ಧನು
ಇಂದಿನ ಬದುಕಲ್ಲಿ ನಡೆಯುವ ಕೆಲವು ವಿಷಯಗಳು ಬೇಸರ ಹುಟ್ಟಿಸಬಹುದು. ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವವರು ಯಾವುದೇ ಕಾರಣಕ್ಕೂ ರಕ್ಷಾಕವಚವನ್ನು ಮರೆಯದಿರಿ. ಸಂಗೀತ ಕೇಳಿ.
ಮಕರ
ಅಧಿಕಾರಿ ವರ್ಗದವರಲ್ಲಿ ಹಾಗೂ ಸಹಚರರಲ್ಲಿ ವೈಮನಸ್ಸನ್ನು ದೂರಪಡಿಸಿಕೊಂಡು ಉತ್ತಮ ಕೆಲಸಗಳನ್ನು ನಿರ್ವಹಿಸುವುದರಲ್ಲಿ ತಲೆತಗ್ಗಿಸುವಂತಾಗಬಹುದು. ಮಕ್ಕಳ ಒತ್ತಾಯಕ್ಕೆ ಮಣಿದು ಪ್ರವಾಸ ಒಪ್ಪಿಕೊಳ್ಳುವಿರಿ.
ಕುಂಭ
ಸಹೋದರರ ನಡವಳಿಕೆ ಅನೇಕ ಬಗೆಯ ಚಿಂತೆಗೆ ,ಅನುಮಾನಗಳಿಗೆ ಕಾರಣವಾದೀತು. ನೆಂಟರಿಷ್ಟರ ಸಲಹೆ-ಸೂಚನೆಗಳನ್ನು ಆಲಿಸಿ ನಂತರದಲ್ಲಿ ಸನ್ಮಾರ್ಗದಲ್ಲಿ ನಡೆಯಿರಿ. ಸಂಸಾರದ ಜವಾಬ್ದಾರಿ ಹೆಚ್ಚಲಿದೆ.
ಮೀನ
ವ್ಯಸನಕ್ಕೆ ತುತ್ತಾಗಿರುವವರಿಂದ ತೊಂದರೆಯನ್ನು ಅನುಭವಿಸಬೇಕಾದೀತು. ಸ್ವಂತ ಪ್ರಯತ್ನದಿಂದ ಆಸ್ತಿ ಸಂಪಾದನೆ ಮಾಡಬಹುದು. ಒಂಟಿತನ ಹೋಗಲಾಡಿಸಿಕೊಳ್ಳಲು ಕೆಲಸಗಳತ್ತ ಮನಸ್ಸು ಹರಿಸುವಿರಿ.