ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತವಾಗಿ ಧನ ಲಾಭವಾಗಲಿದೆ
Published 4 ಜುಲೈ 2024, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಲ್ಲ ಸಲ್ಲದ ಕಾರಣಗಳನ್ನು ಕೊಟ್ಟು ಸಹೋದ್ಯೋಗಿಗಳು ಕೆಲಸವನ್ನು ಮುಂದೆ ಹಾಕುತ್ತಿರುವುದು ಗೊಂದಲವನ್ನು ಸೃಷ್ಟಿಸುತ್ತದೆ. ರಾಜಕೀಯ ರಂಗದವರಿಗೆ ವರಿಷ್ಠರೊಂದಿಗಿನ ಮಾತುಕತೆ ಅನುಕೂಲ ಉಂಟುಮಾಡಲಿದೆ.
ವೃಷಭ
ಬಟ್ಟೆಯ ವ್ಯಾಪಾರ ನಡೆಸುವವರು ಉದ್ಯೋಗದಲ್ಲಿ ಬಂಡವಾಳ ಹೂಡುವಂಥ ಕೆಲಸವನ್ನು ಮಾಡುವುದು ಸಮಂಜಸವಲ್ಲ. ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ವ್ಯವಹರಿಸಿದರೆ ಹಾದಿ ಸುಗಮವಾಗಿ ಸಾಗುತ್ತದೆ.
ಮಿಥುನ
ಮೇಲಿರುವ ಜವಾಬ್ದಾರಿಗಳನ್ನು ಇತರರ ಮೇಲೆ ದಾಟಿಸುವಂತಹ ಪ್ರಯತ್ನಗಳನ್ನು ಮಾಡಲು ಹೋಗದಿರಿ. ಬಹುದಿನಗಳಿಂದ ನಿರೀಕ್ಷಿಸಿದಂತೆ ಪುತ್ರನಿಗೆ ಕೆಲಸ ಪ್ರಾಪ್ತಿ.
ಕರ್ಕಾಟಕ
ವಿದೇಶದಲ್ಲಿರುವ ಸ್ನೇಹಿತನನ್ನು ಮೊದಲ ಬಾರಿ ಮುಖತಃ ಭೇಟಿಯಾಗುವ ಅವಕಾಶ ದೊರಕಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆ ಕಾಣಿಸಬಹುದು. ಅನಿರೀಕ್ಷಿತವಾಗಿ ಧನಲಾಭವಾಗಲಿದೆ.
ಸಿಂಹ
ಆರ್ಥಿಕತೆ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ಅಪೇಕ್ಷಿಸಬಹುದು. ಕೌಟುಂಬಿಕ ಕಲಹಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ. ನೃತ್ಯಗಾರರು ಹೆಚ್ಚಿನ ಸಾಧನೆ ಮಾಡುವಿರಿ.
ಕನ್ಯಾ
ಒಂದು ಮಾತನಾಡಿದರೆ ಕಡಿಮೆ ಎರಡು ಮಾತನಾಡಿದರೆ ಹೆಚ್ಚು ಎಂಬ ಪರಿಸ್ಥಿತಿ ಉಂಟಾಗುವುದು. ಹೂವು, ಹಣ್ಣು ವ್ಯಾಪಾರವನ್ನು ಮಾಡುವವರಿಗೆ ಲಾಭ ಹಾಗೂ ನಷ್ಟಗಳೆರೆಡರ ಮಿಶ್ರಫಲವು ಅನುಭವಕ್ಕೆ ಬರುವುದು.
ತುಲಾ
ಚಟುವಟಿಕೆಗಳ ಒತ್ತಡದ ನಡುವೆ ಇತರರಿಗೆ ಸಹಾಯ ಮಾಡುವ ನಿಮ್ಮ ಪರೋಪಕಾರ ಮನೋಭಾವದಿಂದ ಯಶಸ್ಸು ಲಭಿಸಲಿದೆ. ಕುಶಲಕರ್ಮಿಗಳಿಗೆ ಉತ್ತಮ ದಿನ. ದೇಹಾಲಸ್ಯ ಉಂಟಾಗಬಹುದು.
ವೃಶ್ಚಿಕ
ಒಂದಾದ ಮೇಲೆ ಒಂದರಂತೆ ತೊಂದರೆಗಳೇ ಬರುವ ಕಾರಣ ಕಚೇರಿಯಲ್ಲಿ ಆಯಾಸಗೊಳ್ಳುವಿರಿ. ಪತ್ತೇದಾರಿ ಕೆಲಸದಲ್ಲಿರುವವರಿಗೆ ಗುರುತು ಹಿಡಿದು ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುವರು.
ಧನು
ವ್ಯವಹಾರದಲ್ಲಿ ಹೊರರಾಜ್ಯದ ಮುಖ್ಯ ವ್ಯಕ್ತಿಯೊಬ್ಬರ ಪರಿಚಯವು ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು. ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಬಂಡವಾಳ ತೊಡಗಿಸುವುದು ಸರಿಯಲ್ಲ.
ಮಕರ
ಮಗಳ ಮದುವೆಯ ಮಾತುಕತೆಯಲ್ಲಿ ಮಾತನಾಡುವಾಗ ಬುದ್ಧಿವಂತಿಕೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ. ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ನಿಮ್ಮ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ.
ಕುಂಭ
ಕುಟುಂಬದಲ್ಲಿ ನಡೆಯುತ್ತಿದ್ದ ದೇವತಾರಾಧನೆಯು ನಿಂತಿರುವ ಕಾರಣದಿಂದಾಗಿ ತೊಂದರೆ ಉಂಟಾಗುತ್ತಿದ್ದು, ಅದನ್ನು ಪರಿಹರಿಸುವ ಮಾರ್ಗ ಕಂಡುಕೊಳ್ಳಿ. ಶಿವನನ್ನು ಆರಾಧಿಸಿ.
ಮೀನ
ಓಡುತ್ತಿರುವಂಥ ಕಾಲದ ಜತೆಯಲ್ಲಿ ಚಲಿಸುವ ಗುಣವನ್ನು ಹೊಂದಿದರಷ್ಟೇ ಉದ್ಯೋಗದಲ್ಲಿ ಪ್ರಶಂಸೆಗೊಳಗಾಗುವಿರಿ. ಉದ್ಯೋಗದಲ್ಲಿ ಬದಲಾವಣೆ ಬಯಸಿದರೆ ಸ್ವಲ್ಪ ದಿನಗಳ ಕಾಲ ಕಾಯುವುದು ಅವಶ್ಯವಾಗಲಿದೆ.