ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಯಾರ ಮೇಲೂ ಅಗತ್ಯಕ್ಕಿಂತ ಹೆಚ್ಚಿನ ಕೋಪ ಬೇಡ
Published 6 ಜುಲೈ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯಿಂದ ಹೊರಗೆ ಕೃತಕ ಸಂತೋಷ ಹುಡುಕುವ ಬದಲು ಮನೆಯವರೊಂದಿಗೇ ಖುಷಿಯಾಗಿ ಇರಲು ಪ್ರಯತ್ನಿಸಿ. ಈ ದಿನ ಆರಂಭಿಸಿದ ಕಾರ್ಯಗಳು ಸೂಕ್ತ ಸಮಯದಲ್ಲಿ ಪೂರ್ಣಗೊಳ್ಳಲಿವೆ.
ವೃಷಭ
ನೂತನ ಮನೆ ನಿರ್ಮಾಣ ಅಥವಾ ನಿವೇಶನ ಖರೀದಿಯ ಆಲೋಚನೆಗಳಿಗೆ ಪೂರಕವಾದ ವಾತಾವರಣ ಸ್ನೇಹಿತರಿಂದ ಸಿಗಲಿದೆ. ನಿಮ್ಮ ಪ್ರವಾಸದ ಕನಸು ನನಸಾಗುವಂತಹ ಲಕ್ಷಣಗಳು ಇವೆ.
ಮಿಥುನ
ವ್ಯವಹಾರದಲ್ಲಿ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳು ವುದು ಉತ್ತಮ. ನಿಜವೆಂದು ತೋರುವ ಕೆಲವು ವಿಷಯಗಳು ಪರಾಮರ್ಶೆಯ ನಂತರ ಹುಸಿ ಎಂದು ಅರಿವಾಗುವುದು.
ಕರ್ಕಾಟಕ
ಉತ್ತಮ ಕಾರ್ಯಕ್ಷೇತ್ರಕ್ಕೆ ಪ್ರವೇಶಿಸಿದ ನಿಮ್ಮನ್ನು ಹಿತೈಷಿಗಳು ಶ್ಲಾಘಿಸುತ್ತಾರೆ. ವೃತ್ತಿ ಜೀವನದಲ್ಲಿ ನಿಮಗೆ ಅನುಭವವೇ ಇರದ ಸವಾಲುಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸುವಿರಿ.
ಸಿಂಹ
ಸಮಸ್ಯೆಗಳಿಗೆ ಹಂತಹಂತವಾಗಿ ಪರಿಹಾರ ದೊರಕಲಿದೆ. ಸ್ನೇಹಿತನಿಂದಾಗಿ ನಡೆದ ಒಂದು ಘಟನೆಯು ನಿಮ್ಮ ಮನಸ್ಸಿನಲ್ಲಿ ಮಹತ್ತರವಾದ ಬದಲಾವಣೆಯನ್ನು ಉಂಟುಮಾಡುತ್ತದೆ.
ಕನ್ಯಾ
ವ್ಯವಹಾರದ ವೇಳೆ ಪ್ರದರ್ಶಿಸಿದ ಬುದ್ಧಿವಂತಿಕೆಯು ಮುಂದೆ ಹೆಚ್ಚಿನ ಲಾಭ ತರಲಿದೆ. ಮಾನಸಿಕವಾಗಿ ನಿಮ್ಮನ್ನು ಕಾಡುತ್ತಿರುವ ಚಿಂತೆಗೆ ಮಗನಿಂದ ಉತ್ತಮ ಪರಿಹಾರ ದೊರಕಲಿದೆ.
ತುಲಾ
ಮಕ್ಕಳ ವಿಚಾರದಲ್ಲಿನ ಸಮಸ್ಯೆಗಳು ಶೀಘ್ರ ಪರಿಹಾರವಾಗುವ ಲಕ್ಷಣಗಳು ತೋರಿಬರುತ್ತವೆ. ತಾತ್ಕಾಲಿಕ ಕೆಲಸಗಾರರಿಗೆ ಹುದ್ದೆ ಕಾಯಂ ಆಗುವ ಸಾಧ್ಯತೆ ಇದೆ. ಹಂತ ಹಂತವಾಗಿ ಪ್ರಗತಿ ಪ್ರಾಪ್ತಿಯಾಗಲಿದೆ.
ವೃಶ್ಚಿಕ
ವಿದ್ಯಾರ್ಥಿಗಳು ಈವರೆಗೆ ನಿತ್ಯದ ಕೆಲಸದಲ್ಲಿ ತೋರಿದ ನಿರ್ಲಕ್ಷ್ಯ ದಿಂದಾಗಿ ಮನರಂಜನೆಗಳನ್ನೆಲ್ಲವನ್ನು ಬದಿಗಿಟ್ಟು ಅಧ್ಯಯನದಲ್ಲಿ ತೊಡಗ ಬೇಕಾಗುತ್ತದೆ. ಯಾರ ಮೇಲೂ ಅಗತ್ಯಕ್ಕಿಂತ ಹೆಚ್ಚಿನ ಕೋಪ ಬೇಡ.
ಧನು
ಕ್ರೀಡಾಪಟುಗಳು ಕ್ರೀಡೆಯಲ್ಲಿ ಉತ್ತಮ ಸಾಧನೆಯಿಂದ ಬಹುಮಾನದ ಜೊತೆಗೆ ಗೌರವ ಸಂಪಾದಿಸುವಿರಿ. ವ್ಯಾವಹಾರಿಕವಾಗಿ ಇರುವ ಹಳೆಯ ಬಾಕಿ ಹಣ ನಿಮ್ಮ ಕೈ ಸೇರಲಿದೆ. ಹೆಚ್ಚಿನ ತಾಳ್ಮೆ ಅಗತ್ಯ.
ಮಕರ
ಸಮಯೋಚಿತ ಕಾರ್ಯ ನೆಡೆಸುವಾಗ ಆಲಸ್ಯ ಕಾಡಲಿದೆ ಹಾಗೂ ಭಿನ್ನಾಭಿಪ್ರಾಯಗಳಿಂದ ಇತರರೊಂದಿಗೆ ವಾದ-ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ವ್ಯವಹಾರವು ಲಾಭದ ಪಥದಲ್ಲಿರಲಿದೆ.
ಕುಂಭ
ಬಂಧು ಮಿತ್ರರ ಸಲಹೆಗಳಿಗೆ ಗಮನ ನೀಡಿದ್ದರಿಂದಾಗಿ ಹೆಚ್ಚಿನ ಲಾಭವಾಗಲಿದೆ. ಸಾಂಸಾರಿಕ ವಿಷಯಗಳತ್ತ ಹೆಚ್ಚು ಗಮನಹರಿಸಿ. ಸಂತಸದ ವಿಚಾರವನ್ನು ಎಲ್ಲರಿಗೂ ತಿಳಿಸುವಿರಿ.
ಮೀನ
ಮುತುವರ್ಜಿ ವಹಿಸಿ ಮಾಡಿದ ಕೆಲಸವು ಸಣ್ಣ ಮಕ್ಕಳಿಂದಾಗಿ ಹಾಳಾಗುವುದು. ನಿಮ್ಮ ಮುಕ್ತ ಮನೋಭಾವದಿಂದಾಗಿ ಹಲವಾರು ಗುಪ್ತ ವಿಷಯಗಳು ಇತರರ ಮುಂದೆ ಬಹಿರಂಗಗೊಳ್ಳಲಿದೆ.