ದಿನ ಭವಿಷ್ಯ: ನೆನಪಿನಲ್ಲಿ ಉಳಿಯುವಂತಹ ಒಂದು ಮಧುರ ಘಟನೆ ನಡೆಯಲಿದೆ
Published 29 ಜನವರಿ 2026, 0:16 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿಯಲ್ಲಿ ಸ್ಥಾನಪಲ್ಲಟ ಬಯಸಿದ ನಿಮಗೆ ಹೊಸ ಕೆಲಸವು ಹಳೆಯ ಕೆಲಸಕ್ಕಿಂತ ಕಳಪೆ ಎನಿಸಬಹುದು. ಹಾಗಾಗಿ, ಔದ್ಯೋಗಿಕವಾಗಿ ಅನುಭವಸ್ಥರಿಂದ ಕೇಳಿ ಪಡೆದ ಸಲಹೆ ಸೂಚನೆಗಳಿಂದಾಗಿ ಅಭಿವೃದ್ಧಿ ಹೊಂದುವಿರಿ.
ವೃಷಭ
ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಒಂದು ಮಧುರ ಘಟನೆ ಈ ದಿನ ನಿಮ್ಮ ಮನೆಯಲ್ಲಿ ನಡೆಯಲಿದೆ. ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ. ತಾಯಿಯ ಕಡೆಯ ನೆಂಟರು ಆಕಸ್ಮಿಕವಾಗಿ ಬರುವರು.
ಮಿಥುನ
ಬದಲಾದ ನಿಮ್ಮ ವೇಳಾಪಟ್ಟಿಗೆ ಸರಿಯಾಗುವಂತೆ ನಿಮ್ಮ ಮನಃಸ್ಥಿತಿಯನ್ನು ತಂದುಕೊಳ್ಳುವಲ್ಲಿ ಕಷ್ಟಪಡಬೇಕಾಗಬಹುದು. ರಾಜರಾಜೇಶ್ವರಿಯನ್ನು ಪ್ರಾರ್ಥಿಸಿ ನಿಮ್ಮ ಅಭೀಷ್ಟಗಳನ್ನು ನೆರವೇರಿಸಿಕೊಳ್ಳಿ.
ಕರ್ಕಾಟಕ
ನಿಮ್ಮ ಕೆಲಸವನ್ನು ಆದಷ್ಟು ನೀವೇ ಮಾಡಿಕೊಳ್ಳುವುದು ಉತ್ತಮ. ಗೃಹ ಉಪಯೋಗಿ ವಸ್ತುಗಳನ್ನು ಕೊಳ್ಳುವ ಬಗ್ಗೆ ಪತ್ನಿ ಮತ್ತು ಮಕ್ಕಳೊಂದಿಗೆ ಚರ್ಚಿಸುವಿರಿ. ಹಾಲು ಮಾರಾಟಗಾರರಿಗೆ ಲಾಭ ಇರುವುದು.
ಸಿಂಹ
ನಿಮ್ಮ ಮಗಳ ಮದುವೆಯ ವಿಷಯದಲ್ಲಿ ಜವಾಬ್ದಾರಿಯ ಹಂಚಿಕೆಗೆ ಸಂಬಂಧಿಸಿದಂತೆ ಮಗನೊಡನೆ ಮುಕ್ತ ಮಾತುಕತೆ ನಡೆಯುವುದು. ನಿಮ್ಮ ಜೊತೆ ಸ್ಪರ್ಧಿಸುತ್ತಿದ್ದವರಿಗೆ ನೀವು ಎಚ್ಚರ ತಪ್ಪಿದಲ್ಲಿ ಜಯ ಸಿಗುವುದು.
ಕನ್ಯಾ
ನಿಮ್ಮ ಹಿರಿಯರ ಕಸುಬನ್ನೇ ಮುಂದುವರಿಸುತ್ತಿರುವವರು ಅವರು ಹಾಕಿ ಕೊಟ್ಟಂತಹ ಪಥದಲ್ಲಿಯೇ ನಡೆಯುವುದರಿಂದ ಶ್ರೇಯಸ್ಸು. ವಾತಾವರಣ ದಿಂದಾಗಿ ಮಂಡಿ ಹಾಗೂ ಸಂದುಗಳಲ್ಲಿ ನೋವು ಕಾಣಿಸುವುದು.
ತುಲಾ
ಇಂದು ವಿದೇಶಿ ಒಪ್ಪಂದಗಳನ್ನು ಮಾಡಿಕೊಳ್ಳದಿರುವುದು ಒಳ್ಳೆಯದು. ಮನೆಯವರ ಅಥವಾ ಹಿರಿಯರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ. ಹೊಸ ವಾಹನ ಖರೀದಿಸುವ ಯೋಗವಿದೆ.
ವೃಶ್ಚಿಕ
ನಿಮ್ಮ ಎದುರು ಸಹೋದರ ಸಹೋದರಿಯರನ್ನು ಹೊಗಳಿದ ಕಾರಣ ನೀವು ಮುನಿಸಿಕೊಳ್ಳುವ ಸಾಧ್ಯತೆ ಇದೆ. ನೂತನ ಮನೆ ಕೊಳ್ಳಲು ಹಣದ ವ್ಯವಸ್ಥೆ ಆಗುವುದು. ಸಾಮಾಜಿಕ ವಲಯದಲ್ಲಿ ನಿಮ್ಮ ವರ್ಚಸ್ಸು ಬೆಳೆಯಲಿದೆ.
ಧನು
ನಿಮ್ಮ ವಿಷಯಗಳನ್ನು ಸೋರಿಕೆ ಮಾಡುತ್ತಿರುವವರು ಕುಟುಂಬದವರೇ ಇರಬಹುದು ಎಂಬ ಅನುಮಾನದಿಂದ ಎಲ್ಲರನ್ನೂ ಪರೀಕ್ಷಿಸುವಿರಿ. ವೃತ್ತಿ ಬದುಕಿನ ಗುರಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯುವಿರಿ.
ಮಕರ
ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಿಸಿಕೊಳ್ಳುವ ಸಲುವಾಗಿ ಕಾರ್ಯಾಗಾರಗಳಲ್ಲಿ ಭಾಗವಹಿಸುವಿರಿ. ಕನ್ನಡ ಅಥವಾ ಮಾತೃಭಾಷೆಯ ಸಾಹಿತ್ಯದಲ್ಲಿ ಸಂಶೋಧನೆ ನಡೆಸುತ್ತಿರುವವರಿಗೆ ಸಮ್ಮಾನವಾಗುವ ಸಾಧ್ಯತೆ ಇದೆ.
ಕುಂಭ
ಇಂದು ಕುಟುಂಬದಲ್ಲಾಗಲಿ ಅಥವಾ ಕಾರ್ಯಕ್ಷೇತ್ರದಲ್ಲಾಗಲಿ ನಿಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ತಿಳಿಸದಿದ್ದರೆ ನಷ್ಟವಾಗುತ್ತದೆ. ಪ್ರವಾಸಕ್ಕಾಗಿ ಹೋದ ಪ್ರದೇಶದಲ್ಲಿ ಕೆಲವು ತೊಂದರೆಗಳಾಗುವಂತಹ ಸಂದರ್ಭಗಳಿವೆ.
ಮೀನ
ಕಾರ್ಯವು ಮಧ್ಯದಲ್ಲಿ ನಿಲ್ಲುವ ಸಾಧ್ಯತೆ ಇರುವುದರಿಂದ ದೃಢವಾದ ನಿರ್ಧಾರದ ನಂತರವಷ್ಟೇ ಹೊಸ ಕೆಲಸ ಮಾಡುವುದು ಉತ್ತಮ. ನಿಮ್ಮ ಜೀವನದ ವಿಶೇಷ ದಿನದ ಪ್ರಯುಕ್ತವಾಗಿ ವೃದ್ಧರ ಸೇವೆಯನ್ನು ಮಾಡಿ.