ಗಾಳಿಯ ಒತ್ತಡ: ರನ್‌ವೇ ಮುಟ್ಟಿ ಮತ್ತೆ ಆಕಾಶಕ್ಕೆ ಹಾರಿದ ವಿಮಾನ

7

ಗಾಳಿಯ ಒತ್ತಡ: ರನ್‌ವೇ ಮುಟ್ಟಿ ಮತ್ತೆ ಆಕಾಶಕ್ಕೆ ಹಾರಿದ ವಿಮಾನ

Published:
Updated:
Prajavani

ಲಂಡನ್‌: ಬ್ರಿಟಿಷ್‌ ಏರ್‌ವೇಸ್‌ಗೆ ಸೇರಿದ ವಿಮಾನವೊಂದು ಹೈದರಬಾದ್‌ನಿಂದ ಹೀತ್ರೂ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದ ರನ್‌ವೇ ಮುಟ್ಟಿದ ಕೆಲವೇ ಸೆಕೆಂಡುಗಳಲ್ಲಿ ಮತ್ತೆ ನಭಕ್ಕೆ ಹಾರಿದ ಪ್ರಸಂಗ ಶುಕ್ರವಾರ ರಾತ್ರಿ ಲಂಡನ್‌ನಲ್ಲಿ ನಡೆದಿದೆ. ವಿಮಾನ ನಿಲ್ದಾಣದಲ್ಲಿ ವಿಪರೀತ ಗಾಳಿಯ ಒತ್ತಡ ಕಂಡುಬಂದ ಕಾರಣ, ತಕ್ಷಣವೇ ಪೈಲಟ್‌ ಈ ನಿರ್ಧಾರ ತೆಗೆದುಕೊಂಡರು ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಹೈದರಬಾದ್‌ನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನವು ಶುಕ್ರವಾರ ಬೆಳಿಗ್ಗೆ ಹೀತ್ರೂ ವಿಮಾನ ನಿಲ್ದಾಣದ ಇಳಿಯುವ ವೇಳೆ ಗಾಳಿಯ ಒತ್ತಡದಿಂದ ಗಾಳಿಯಲ್ಲೇ ವಿಮಾನ ಓಲಾಡಿದೆ. ಹೀಗಿದ್ದರೂ, ರನ್‌ವೇನಲ್ಲಿ ಇಳಿಸುವ ವೇಳೆ ನಿಯಂತ್ರಣಕ್ಕೆ ಬಾರದ ಕಾರಣ, ವಿಮಾನವನ್ನು ಪೈಲಟ್‌ ತಕ್ಷಣವೇ ನಭಕ್ಕೆ ಹಾರಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಪೈಲಟ್‌ ಪ್ರದರ್ಶಿಸಿದ ಚಾಕಚಕ್ಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವಿಮಾನ ಹಾರಾಟಗಳ ನೇರ ಪ್ರಸಾರ ಮಾಡುವ ‘ಬಿಗ್‌ಜೆಟ್‌ ಟಿವಿ’ ಈ ದೃಶ್ಯವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

 

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !