ಸತತ ಎರಡನೇ ದಿನವೂ ಐ.ಟಿ. ದಾಳಿ

ಮಂಗಳವಾರ, ಏಪ್ರಿಲ್ 23, 2019
31 °C
ಕಮಲ್‌ನಾಥ್‌ ಆಪ್ತರ ಮನೆಗಳ ಮೇಲೆ ಕಾರ್ಯಾಚರಣೆ: ಸುಮಾರು ₹10 ಕೋಟಿ ನಗದು, ದಾಖಲೆಗಳು ವಶ

ಸತತ ಎರಡನೇ ದಿನವೂ ಐ.ಟಿ. ದಾಳಿ

Published:
Updated:
Prajavani

ನವದೆಹಲಿ/ಭೋಪಾಲ್‌ :  ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಆಪ್ತರು ಮತ್ತು ಇತರರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ಸೋಮವಾರವೂ ಮುಂದುವರಿಯಿತು.

ಇದುವರೆಗೆ ಸುಮಾರು ₹10 ಕೋಟಿ ನಗದು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಹಣ ವಶಪಡಿಸಿಕೊಂಡಿರುವ ಬಗ್ಗೆ ಅಧಿಕೃತವಾಗಿ ಅಧಿಕಾರಿಗಳು ಹೇಳಿಕೆ ನೀಡಿಲ್ಲ.

ತೆರಿಗೆ ವಂಚನೆ ಮತ್ತು ಚುನಾವಣೆ ಸಂದರ್ಭದಲ್ಲಿ ಹವಾಲಾ ವಹಿವಾಟು ನಡೆಸಿದ ಆರೋಪದ ಮೇರೆಗೆ ಅಧಿಕಾರಿಗಳು ಭೋಪಾಲ್‌, ಇಂದೋರ್‌ ಮತ್ತು ದೆಹಲಿಯಲ್ಲಿ ಶೋಧ ಕಾರ್ಯ ನಡೆಸಿದರು.

ಹವಾಲಾ ಡೀಲರ್‌ ಪರಾಸ್‌ ಮಲ್‌ ಲೋಧಾ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಆರು ಮಂದಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಭಾನುವಾರ ಬೆಳಗಿನ ಜಾವ 3 ಗಂಟೆಗೆ ಕಮಲ್‌ನಾಥ್‌ ಅವರ ಆಪ್ತರಿಗೆ ಸಂಬಂಧಿಸಿದ 52 ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.

ದಾಳಿ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ಹಣವನ್ನು ಚುನಾವಣಾ ಪ್ರಚಾರಕ್ಕೆ ಮತ್ತು ಮತದಾರರಿಗೆ ಹಣ ನೀಡಲು ಬಳಸಲು ಮೀಸಲಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ದಾಳಿಯ ಪ್ರಾಥಮಿಕ ವರದಿಯನ್ನು ಚುನಾವಣಾ ಆಯೋಗಕ್ಕೆ ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ಸಲ್ಲಿಸಲಾಗಿದೆ. 

 ಕಮಲ್‌ನಾಥ್‌ ಅವರ ಮಾಜಿ ವಿಶೇಷ ಕರ್ತವ್ಯ ಅಧಿಕಾರಿಕಾರಿ ಪ್ರವೀಣ್‌ ಕಕ್ಕಡ್‌, ಮಾಜಿ ಸಲಹೆಗಾರ ರಾಜೇಂದ್ರ ಮಿಗ್ಲಾಣಿ, ಆಶ್ವಿನಿ ಶರ್ಮಾ ಮತ್ತು  ಸೋದರ ಸಂಬಂಧಿಯ ಕಂಪನಿಯಾದ ’ಮೊಸೆರ್‌ ಬಯೇರ್’ ಮತ್ತು ಸೋದರಳಿಯ ರಾತುಲ್‌ ಪುರಿ ಅವರ ಕಂಪನಿಯ ಎಕ್ಸಿಕ್ಯೂಟಿವ್ಸ್‌ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !