ಸೋಮವಾರ, ನವೆಂಬರ್ 18, 2019
20 °C
ಪಾಕಿಸ್ತಾನ ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪ

ಮಾಲ್ಡೀವ್ಸ್‌ನಲ್ಲಿ ಭಾರತ- ಪಾಕಿಸ್ತಾನ ಮಾತಿನ ಚಕಮಕಿ

Published:
Updated:

ಮಾಲ್ಡೀವ್ಸ್: ಕಾಶ್ಮೀರ ವಿಷಯವನ್ನು ಪಾಕಿಸ್ತಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತ, ಗಡಿ ಭಾಗದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಬೇಕು, ಆ ಮೂಲಕ ಶಾಂತಿ ಸ್ಥಾಪನೆಗೆ ಮುಂದಾಗಬೇಕು ಎಂದು ಆಗ್ರಹಿಸಿದೆ.

ದಕ್ಷಿಣ ಏಷ್ಯಾ ಸ್ಪೀಕರ್ಸ್ ಸಮಿತಿ ವತಿಯಿಂದ ಮಾಲ್ಡೀವ್ಸ್‌ನಲ್ಲಿ ಏರ್ಪಡಿಸಿರುವ 'ಸುಸ್ಥಿರ ಅಭಿವೃದ್ಧಿ ಗುರಿಗಳು' (ಎಸ್‌ಡಿಜಿ)ಎಂಬ ವಿಷಯದ ಕುರಿತ ಕಾರ್ಯಕ್ರಮದಲ್ಲಿ ಈ ಪ್ರಸಂಗ ನಡೆದಿದೆ. ಆ ಸಮಯದಲ್ಲಿ ಪಾಕಿಸ್ತಾನ ಸಂಸತ್ತಿನ ಉಪ ಸಭಾಪತಿ ಖಾಸಿಂ ಸುರಿ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದರು. ಇದರಿಂದ ಮಧ್ಯಪ್ರವೇಶಿಸಿದ ಭಾರತದ ರಾಜ್ಯಸಭೆ ಉಪ ಸಭಾಪತಿ ಹರಿವಂಶಸಿಂಗ್, ಕಾಶ್ಮೀರ ಭಾರತದ ಆಂತರಿಕ ವಿಷಯ, ಅದನ್ನು ಇಲ್ಲಿ ಪ್ರಸ್ತಾಪಿಸುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. 

ಈ ಸಮಯದಲ್ಲಿ ಎರಡೂ ರಾಷ್ಟ್ರಗಳ ಉಪ ಸಭಾಪತಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. 

ಮತ್ತೆ ಮಾತು ಮುಂದುವರಿಸಿದ ಉಪಸಭಾಪತಿ ಹರಿವಂಶ್ ಸಿಂಗ್ ಅವರು, ಪಾಕಿಸ್ತಾನ ಭಯೋತ್ಪಾದನೆಗೆ ನೀಡುತ್ತಿರುವ ಎಲ್ಲಾ ರೀತಿಯ ನೆರವುಗಳನ್ನು ನಿಲ್ಲಿಸಬೇಕು ಎಂದು ಪ್ರತಿಪಾದಿಸಿದರು.

ಪ್ರತಿಕ್ರಿಯಿಸಿ (+)