ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಲ್ಲಿ 108 ಮಹಿಳಾ ಅಧಿಕಾರಿಗಳಿಗೆ ಕರ್ನಲ್ ಹುದ್ದೆ: ಕೇಂದ್ರ

Last Updated 10 ಫೆಬ್ರುವರಿ 2023, 11:37 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸೇನೆಗೆ ನಡೆಯುತ್ತಿರುವ ನೇಮಕಾತಿಯಲ್ಲಿ ಕರ್ನಲ್ ಹುದ್ದೆಗಳಿಗೆ ಬಡ್ತಿ ಪಡೆದಿರುವ 108 ಮಹಿಳಾ ಅಧಿಕಾರಿಗಳಿಗೆ ಹುದ್ದೆಗಳನ್ನು ನೀಡುವ ಪ್ರಕ್ರಿಯೆ ಸಹ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರವು ಶುಕ್ರವಾರ ಲೋಕಸಭೆಗೆ ತಿಳಿಸಿದೆ.

ಸದ್ಯ, ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳ ಬಡ್ತಿ ಪಟ್ಟಿಯನ್ನು ವಿಶೇಷ ಆಯ್ಕೆ ಮಂಡಳಿ ಸಿದ್ಧಪಡಿಸಿದೆ ಎಂದ ಸರ್ಕಾರ ಹೇಳಿದೆ.

‘ಜನವರಿ 9ರಿಂದ 21ರವರೆಗೆ ಮಹಿಳಾ ಅಧಿಕಾರಿಗಳಿಗಾಗಿಯೇ ಇರುವ ವಿಶೇಷ ಆಯ್ಕೆ ಮಂಡಳಿಯು ಈ ಪ್ರಕ್ರಿಯೆ ನಡೆಸಿದೆ’ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಅಜಯ್ ಭಟ್ ತಿಳಿಸಿದ್ದಾರೆ.

‘ಕರ್ನಲ್ ಹುದ್ದೆಗೆ ಬಡ್ತಿ ನೀಡಲು ಒಟ್ಟು 244 ಅಧಿಕಾರಿಗಳನ್ನು ಪರಿಗಣಿಸಲಾಗಿತ್ತು. ಇದೀಗ, 108 ಮಂದಿ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಅಧಿಕಾರಿಗಳಿಗೆ ಹುದ್ದೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ಎಂದು ಅವರು ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್ ನಿರ್ದೆಶನದ ಅನ್ವಯ ವೃತ್ತಿಯ ಉನ್ನತಿ ಅವಕಾಶ ಸೇರಿದಂತೆ ಮಹಿಳಾ ಅಧಿಕಾರಿಗಳಿಗೆ ಎಲ್ಲ ಸವಲತ್ತು ನೀಡಲಾಗುತ್ತಿದೆ’ಎಂದೂ ಅವರು ಹೇಳಿದರು.

ಇದೇವೇಳೆ, ಪದವಿ ಹಂತದ ಎಲ್ಲ ಹುದ್ದೆಗಳಿಗೂ ಮಹಿಳಾ ಸಿಬ್ಬಂದಿ ನೇಮಕಕ್ಕೆ ನೌಕಾಪಡೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT