ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಭದ್ರತೆ ಅಭೇದ್ಯಗೊಳಿಸಲು ಕ್ರಮ: ಅಮಿತ್‌ ಶಾ

Last Updated 28 ಅಕ್ಟೋಬರ್ 2021, 15:05 IST
ಅಕ್ಷರ ಗಾತ್ರ

ನವದೆಹಲಿ: ತಂತ್ರಜ್ಞಾನ, ಎಲ್ಲಾ ರಾಜ್ಯಗಳು ಮತ್ತು ಇತರರೊಂದಿಗಿನ ಸಮನ್ವಯದಿಂದ ಭಾರತದ ಕರಾವಳಿ ಭದ್ರತೆಯನ್ನು ಅಭೇದ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಶ್ರಮಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಹೇಳಿದ್ದಾರೆ.

ದೇಶದ ಕರಾವಳಿ ಭದ್ರತೆಯ ವಿವಿಧ ಅಂಶಗಳನ್ನು ಪರಿಶೀಲಿಸುವ ಸಂಬಂಧ ನಡೆದ ಗೃಹ ಸಚಿವಾಲಯದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಕರಾವಳಿಯುದ್ದಕ್ಕೂ ಕಣ್ಗಾವಲು ಕೊರತೆಯಿಂದ ಪಾಕಿಸ್ತಾನದಿಂದ 10 ಭಯೋತ್ಪಾದಕರು ಮುಂಬೈಗೆ ಹಡಗಿನಲ್ಲಿ ಬರಲು ಅವಕಾಶವಾಯಿತು. ಇದರಿಂದ 2008ರ ನವೆಂಬರ್‌ 26 ರಂದು ಮುಂಬೈನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದು 166 ಮಂದಿ ಸಾವನ್ನಪ್ಪಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT