ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ– ಸಂಜೀವಿನಿ: 8 ಲಕ್ಷ ಮಂದಿಗೆ ಆರೋಗ್ಯ ಸೇವೆ

Last Updated 20 ನವೆಂಬರ್ 2020, 14:18 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ಸಚಿವಾಲಯ ಆರಂಭಿಸಿರುವ ಇ–ಸಂಜೀವಿನಿ ಯೋಜನೆ‌ ಮೂಲಕ ಒಟ್ಟು ಎಂಟು ಲಕ್ಷ ಮಂದಿ ಮನೆಯಲ್ಲೇ ಕುಳಿತು ವೈದ್ಯರಿಂದ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ತಮಿಳುನಾಡು ರಾಜ್ಯವೊಂದರಲ್ಲೇ 2,59,904 ಮಂದಿ ಇ–ಸಂಜೀವಿನಿ ಒಪಿಡಿ ಆ್ಯಪ್‌ ಮೂಲಕ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶ (2,19,175) ಎರಡನೇ ಸ್ಥಾನದಲ್ಲಿದೆ. ಕೇರಳ (58,000), ಹಿಮಾಚಲ ಪ್ರದೇಶ (46,647) ಮಧ್ಯ ಪ್ರದೇಶ (43,045), ಗುಜರಾತ್‌ (41,765), ಆಂಧ್ರ ಪ್ರದೇಶ (35,217), ಉತ್ತರಾಖಂಡ (26,819), ಕರ್ನಾಟಕ (23,008) ಮತ್ತು ಮಹಾರಾಷ್ಟ್ರದ (9,741) ಮಂದಿ ಈ ಯೋಜನೆಯ ಸೇವೆ ಪಡೆದಿದ್ದಾರೆ ಎಂದು ಸಚಿವಾಲಯ ಹೇಳಿಕೆ ನೀಡಿದೆ.

ಟೆಲಿಮೆಡಿಸಿನ್‌ ಸೇವೆ ಎರಡು ವಿಧದಲ್ಲಿ ಲಭ್ಯವಿದ್ದು, ಮೊದಲನೆಯದ್ದು ವೈದ್ಯರಿಂದ ವೈದ್ಯರಿಗೆ (ಇ–ಸಂಜೀವಿನಿ), ಎರಡನೇಯದ್ದು ರೋಗಿಯಿಂದ ವೈದ್ಯರಿಗೆ (ಇ–ಸಂಜೀವಿನಿ ಒಪಿಡಿ). ಎರಡೂ ವಿಧದ ಬಳಕೆದಾರರ ಪ್ರಮಾಣ ಏರುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT