ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ವಾಯುನೆಲೆಯಲ್ಲಿ ಸ್ಫೋಟ: ಅಧಿಕಾರಿಗಳೊಂದಿಗೆ ರಾಜನಾಥ್‌ ಸಿಂಗ್‌ ಚರ್ಚೆ

Last Updated 27 ಜೂನ್ 2021, 7:19 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮುವಿನಲ್ಲಿರುವ ವಾಯುನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಲಘುತೀವ್ರತೆಯ ಅವಳಿ ಸ್ಫೋಟಗಳಿಗೆ ಸಂಬಂಧಿಸಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ವಾಯುಪಡೆ ಉಪಮುಖ್ಯಸ್ಥ ಏರ್‌ಮಾರ್ಷಲ್‌ ಎಚ್‌.ಎಸ್‌.ಅರೋರಾ ಅವರೊಂದಿಗೆ ಚರ್ಚೆ ನಡೆಸಿ, ಮಾಹಿತಿ ಪಡೆದರು.

‘ಏರ್‌ ಮಾರ್ಷಲ್‌ ವಿಕ್ರಮ್‌ ಸಿಂಗ್‌ ಅವರು ಜಮ್ಮು ತಲುಪಿದ್ದು, ಪರಿಸ್ಥಿತಿ ಅವಲೋಕಿಸುವರು’ ಎಂದು ಭಾರತೀಯ ವಾಯುಪಡೆ ಟ್ವೀಟ್‌ ಮಾಡಿದೆ.

ಈ ಸ್ಫೋಟಗಳು ಭಯೋತ್ಪಾದಕ ದಾಳಿಯ ಭಾಗವಾಗಿವೆಯೇ ಎಂಬ ಬಗ್ಗೆ ವಾಯುಪಡೆ ತನಿಖೆ ನಡೆಸುತ್ತಿದೆ ಎಂದು ರಕ್ಷಣಾ ಇಲಾಖೆಗೆ ನಿಕಟವಾಗಿರುವ ಮೂಲಗಳು ಹೇಳಿವೆ.

ಈ ವಾಯುನೆಲೆಯಲ್ಲಿ ವಾಯುಪಡೆಗೆ ಸೇರಿದ ಹಲವಾರು ಸ್ವತ್ತುಗಳಿವೆ. ಇವುಗಳನ್ನೇ ಗುರಿಯಾಗಿಸಿಕೊಂಡು ಡ್ರೋನ್‌ಗಳನ್ನು ಬಳಸಿ ಸ್ಫೋಟಕಗಳನ್ನು ಹಾಕಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಇವೇ ಮೂಲಗಳು ಹೇಳಿವೆ.

‘ಜಮ್ಮುವಿನಲ್ಲಿರುವ ವಾಯುನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಲಘು ತೀವ್ರತೆಯ ಎರಡು ಸ್ಫೋಟಗಳು ಸಂಭವಿಸಿವೆ. ಕಟ್ಟಡದ ಚಾವಣಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ’ ಎಂದು ವಾಯುಪಡೆ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT