ಸೋಮವಾರ, ಸೆಪ್ಟೆಂಬರ್ 27, 2021
25 °C

ಜಪಾನಿನಲ್ಲಿ ಭೂಕಂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೋ: ಜಪಾನಿನಲ್ಲಿ ಶುಕ್ರವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಇಲ್ಲಿನ ದಕ್ಷಿಣ ಕರಾವಳಿಯಲ್ಲಿ ಭೂಮಿ ಕಂಪಿಸಿದ್ದು, ಈ ಘಟನೆಯಿಂದಾಗಿ ತೀರಪ್ರದೇಶದ ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಸ್ಥಳೀಯ ಕಾಲಮಾನ 8.48ರ ಸಮಯದಲ್ಲಿ ಭೂಕಂಪ ಸಂಭವಿಸಿದೆ. ಕರಾವಳಿ ಪ್ರದೇಶದಲ್ಲಿ ಭೂಕಂಪಿಸಿರುವುದರಿಂದ ಸುನಾಮಿ ಭಯ ಇಲ್ಲಿನ ಜನರನ್ನು ಕಾಡುತ್ತಿದೆ. ಆದರೆ, ಸುನಾಮಿಯ ಭೀತಿ ಇಲ್ಲ ಎಂದು ಜಪಾನಿನ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ರಷ್ಟಿತ್ತು ಎಂದು ಇಲಾಖೆ ತಿಳಿಸಿದೆ. ಅಮೆರಿಕಾ ಭೌಗೋಳಿಕ ಸಮೀಕ್ಷ ಸಂಸ್ಥೆಯ ಪ್ರಕಾರ ಭೂಕಂಪನ ತೀವ್ರತೆ 6.4ರಷ್ಟು ದಾಖಲಾಗಿದೆ ಎಂದು ತಿಳಿಸಲಾಗಿದೆ. ಭೂ ಕಂಪನದಿಂದಾಗಿ ಯಾವುದೇ ಪ್ರಾಣ ಹಾನಿ, ಇತರೆ ಯಾವುದೇ ನಷ್ಟ ಸಂಭವಿಸಿಲ್ಲ ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಪಾನಿನ ಕರಾವಳಿ ಪ್ರದೇಶದ ಕ್ಯುಶು ಎಂಬ ದ್ವೀಪದಲ್ಲಿ ಈ ಭೂಕಂಪನವಾಗಿದ್ದು, ಸ್ಥಳೀಯ ಹವಾಮಾನ ಇಲಾಖೆ ಜನರಿಗೆ ತುರ್ತು ಎಚ್ಚರಿಕೆ ನೀಡಿದೆ. ಅಲ್ಲದೆ, ಭೂಕಂಪನದಿಂದ ಉಂಟಾಗುವ ಹಾನಿಯ ಕುರಿತು ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಜಪಾನ್ ಸರ್ಕಾರ ಸಜ್ಜಾಗಿದೆ. ಕ್ಯುಶು ಪ್ರದೇಶದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರವಿದ್ದು, ಇಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು