ಬೆಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಜೆಡಿಎಸ್

ಶುಕ್ರವಾರ, ಏಪ್ರಿಲ್ 26, 2019
31 °C

ಬೆಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಜೆಡಿಎಸ್

Published:
Updated:

ಬೆಂಗಳೂರು: ರಾಜ್ಯ ಮೈತ್ರಿ ರಾಜಕಾರಣದ ಮತ್ತೊಂದು ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಭಾನುವಾರ ಮಧ್ಯರಾತ್ರಿ ಈ ಸಂಬಂಧ ಟ್ವೀಟ್ ಮಾಡಿದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೆಡಿಎಸ್‌ ನಡೆಯನ್ನು ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.

‘ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವ ಎಚ್‌.ಡಿ.ದೇವೇಗೌಡ ಮತ್ತು ಜೆಡಿಎಸ್‌ಗೆ ಕಾಂಗ್ರೆಸ್‌ ಧನ್ಯವಾದ ಹೇಳಲು ಬಯಸುತ್ತದೆ. ನಾವು ಒಗ್ಗೂಡಿ ಪ್ರಜಾಪ್ರಭುತ್ವ ಮರುಸ್ಥಾಪಿಸಲು ಪ್ರಯತ್ನಿಸೋಣ’ ಎಂದು ವೇಣುಗೋಪಾಲ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಎಚ್.ಡಿ.ದೇವೇಗೌಡರು ಬಯಸಿದ್ದರು. ಸಾಕಷ್ಟು ಚರ್ಚೆ, ವಾದವಿವಾದಗಳ ಬಳಿಕ ತುಮಕೂರಿನಿಂದ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡರು. ಹೀಗಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲು ಜೆಡಿಎಸ್‌ನಲ್ಲಿ ಸೂಕ್ತ ಅಭ್ಯರ್ಥಿಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಬೇರೆ ಮಾರ್ಗ ಕಾಣದೆ ಜೆಡಿಎಸ್‌ ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ ಎನ್ನಲಾಗಿದೆ.

ಸುದೀರ್ಘ ಮಾತುಕತೆ, ಸಂಧಾನಗಳ ನಂತರ ಎರಡೂ ಪಕ್ಷಗಳು 20:8 ಅನುಪಾತದ ಕ್ಷೇತ್ರ ಹಂಚಿಕೆಗೆ ಸಮ್ಮತಿಸಿದ್ದವು. ಕಾಂಗ್ರೆಸ್‌ಗೆ 20, ಜೆಡಿಎಸ್‌ಗೆ 8 ಕ್ಷೇತ್ರಗಳು ಎನ್ನುವ ಈ ಸೂತ್ರಕ್ಕೂ ಆರಂಭದಲ್ಲಿ ಅಪಸ್ವರಗಳು ಕೇಳಿಬಂದಿದ್ದವು. 12 ಸ್ಥಾನ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿತ್ತು. 

ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಹಾಲಿ ಸಂಸದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಗೆ ಮತ್ತೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !