ಭಾನುವಾರ, ಮಾರ್ಚ್ 29, 2020
19 °C

‘ಮೇರೆ ಪ್ಯಾರೆ ಪ್ರೈಮ್ ಮಿನಿಸ್ಟರ್’ ರಾಜಕೀಯ ಚಿತ್ರ ಅಲ್ಲ: ಮೆಹ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಮೇರೆ ಪ್ಯಾರೆ ಪ್ರೈಮ್ ಮಿನಿಸ್ಟರ್’ ರಾಜಕೀಯ ಆಯಾಮವುಳ್ಳ ಚಿತ್ರ ಅಲ್ಲ ಎಂದು ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಸ್ಪಷ್ಟಪಡಿಸಿದ್ದು, ಇದು ನಿಜವಾಗಿಯೂ ಸಾಮಾಜಿಕವಾಗಿ ಪ್ರಸ್ತುತವಾಗಿರುವ ಚಿತ್ರ ಎಂದು ಹೇಳಿದ್ದಾರೆ. 

ಕೊಳೆಗೇರಿಯ ಬಾಲಕನೊಬ್ಬನ ತಾಯಿ ಅತ್ಯಾಚಾರಕ್ಕೊಳಗಾಗಿರುತ್ತಾಳೆ. ಈ ಕುರಿತು ಪ್ರಧಾನಿಗೆ ದೂರು ನೀಡಲು ತನ್ನ ಸ್ನೇಹಿತರೊಂದಿಗೆ ಆತ ದೆಹಲಿಗೆ ಪ್ರಯಾಣಿಸುತ್ತಾನೆ. ಇದು ಚಿತ್ರದ ಕಥಾಹಂದರ. 

‘ಶೀರ್ಷಿಕೆಯಿಂದಾಗಿ ರಾಜಕೀಯ ಚಿತ್ರದ ರೀತಿ ಎನಿಸುತ್ತದೆ ಅಷ್ಟೆ’ ಎಂದು ಅವರು ತಿಳಿಸಿದ್ದಾರೆ. 

‘ವಿಷಯ ಹೆಚ್ಚು ಸೂಕ್ಷ್ಮವಾಗಿದ್ದು, ಇದನ್ನು ಸಂತ್ರಸ್ತರ ದೃಷ್ಟಿಕೋನದಿಂದ ನೋಡುವ ಯತ್ನ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)