ನಟ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಬಾಲಿವುಡ್ನ ಸುಂದರ ಜೋಡಿಗಳಲ್ಲೊಂದು. ಈಗ ಮೀರಾ ರಜಪೂತ್ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂಬ ಸಂಗತಿಯನ್ನು ಶಾಹಿದ್ ಕಪೂರ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ದಂಪತಿಗೆ ಎರಡು ವರ್ಷದ ಮಿಶಾ ಎಂಬ ಹೆಣ್ಣುಮಗುವಿದೆ. ‘ಮಿಶಾ ಶೀಘ್ರದಲ್ಲೇ ದೊಡ್ಡ ಅಕ್ಕ ಆಗುತ್ತಿದ್ದಾಳೆ’ ಎಂಬ ಬರಹ ಹಾಗೂ 5 ಬಲೂನುಗಳ ಚಿತ್ರ ಬಿಡಿಸಿ, ಅದರ ಪಕ್ಕದಲ್ಲಿ ಮಿಶಾ ಇರುವ ಚಿತ್ರವನ್ನು ಶಾಹಿದ್ ಹಂಚಿಕೊಂಡಿದ್ದಾರೆ.