ಮೋದಿ ಮೈಸೂರು ರ‍್ಯಾಲಿಗೆ ಚಾಮರಾಜನಗರ ಜಿಲ್ಲೆಯಿಂದ 6 ಸಾವಿರ ಜನ: ಮಲ್ಲಿಕಾರ್ಜುನಪ್ಪ

ಗುರುವಾರ , ಏಪ್ರಿಲ್ 25, 2019
21 °C

ಮೋದಿ ಮೈಸೂರು ರ‍್ಯಾಲಿಗೆ ಚಾಮರಾಜನಗರ ಜಿಲ್ಲೆಯಿಂದ 6 ಸಾವಿರ ಜನ: ಮಲ್ಲಿಕಾರ್ಜುನಪ್ಪ

Published:
Updated:
Prajavani

ಚಾಮರಾಜನಗರ: ಮಂಗಳವಾರ ಮೈಸೂರಿನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಜಿಲ್ಲೆಯಿಂದ 5,000ದಿಂದ 6,000 ಜನರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರು ಸೋಮವಾರ ತಿಳಿಸಿದರು. 

‘ಮೋದಿ ಅವರು ಮಂಗಳವಾರದಿಂದ (ಏಪ್ರಿಲ್‌ 9) ರಾಜ್ಯದಲ್ಲಿ ಚುನಾವಣಾ ರ‍್ಯಾಲಿ ಮೂಲಕ ಪ್ರಚಾರ ನಡೆಸಲಿದ್ದಾರೆ. ಚಿತ್ರದುರ್ಗದಲ್ಲಿ ನಡೆಯುವ ಸಭೆಯ ಬಳಿಕ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ಅವರು ಭಾಷಣ ಮಾಡಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

‘ಪಕ್ಷದ ಕೊಡಗು–ಮೈಸೂರು ಅಭ್ಯರ್ಥಿ ಪ್ರತಾಪ ಸಿಂಹ ಹಾಗೂ ಚಾಮರಾಜನಗರ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕಿರಣ್‌ ಮಹೇಶ್ವರಿ ಸೇರಿದಂತೆ ಪ್ರಮುಖ ರಾಷ್ಟ್ರ ಹಾಗೂ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ’ ಎಂದರು.

‘ಅಭ್ಯರ್ಥಿ ಆಯ್ಕೆ ಮೊದಲು ಆಕಾಂಕ್ಷಿಗಳು ಪ್ರಚಾರದಲ್ಲಿ ನಿರತರಾಗಿದ್ದರು. ಟಿಕೆಟ್‌ ಘೋಷಣೆಯ ನಂತರ ಕೆಲವು ಆಕಾಂಕ್ಷಿಗಳಿಗೆ ಬೇಸರವಾಗಿರಬಹುದು. ಮುಂದೆ ಎಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾನಸಿಕ ಆರೋಗ್ಯ ಮುಖ್ಯ: ‘ದೇಹದ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯವಾಗುತ್ತದೆ. ಶ್ರೀನಿವಾಸ ಪ್ರಸಾದ್ ಅವರು ಈಗಲೂ ಮೈಕ್‌ ಹಿಡಿದರೆ ನಿರರ್ಗಳವಾಗಿ ಭಾಷಣ ಮಾಡುತ್ತಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ ತಮ್ಮ ಅನುಭವದಿಂದ ಕೆಲಸ ಮಾಡಿಸುವ ಚಾಣಾಕ್ಷತನ ಅವರಿಗೆ ಇದೆ. ದಿನದಿಂದ ದಿನಕ್ಕೆ ಅಭ್ಯರ್ಥಿ ಪರ ಹೆಚ್ಚಿನ ವಿಶ್ವಾಸ ಮೂಡುತ್ತಿದೆ. ಮೋದಿ ಅವರು ಶ್ರೀಸಾಮಾನ್ಯನ ಮನಸ್ಸಿನಲ್ಲಿದ್ದಾರೆ. ಇಲ್ಲಿ 1.5 ಲಕ್ಷ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಕನಿಷ್ಠ 22 ಸ್ಥಾನ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ನೂರೊಂದು ಶೆಟ್ಟಿ, ಬಾಲಸುಬ್ರಹ್ಮಣ್ಯ, ಎಚ್.ಎಂ.ಬಸವಣ್ಣ, ಸುಂದರರಾಜು ಇದ್ದರು.

ಜಿಲ್ಲೆಗೆ ಯಡಿಯೂರಪ್ಪ ಭೇಟಿ

‘ಏಪ್ರಿಲ್‌ 11ರಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಯಡಿಯೂರಪ್ಪ ಭೇಟಿಯ ಸಮಯ ನಿಗದಿಯಾಗಿಲ್ಲ. ಪ್ರವಾಸದ ಪಟ್ಟಿ ಬಂದ ನಂತರ ವೇಳೆ ನಿಗದಿ ಮಾಡಲಾಗುವುದು. ಪ್ರಚಾರಕ್ಕಾಗಿ ಪಕ್ಷದ ಹಿರಿಯ ನಾಯಕ ನಿತಿನ್‌ ಗಡ್ಕರಿ ಅವರು ಬರುವುದಿಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬರುವುದು ಇನ್ನೂ ದೃಢಪಟ್ಟಿಲ್ಲ’ ಎಂದು ಮಲ್ಲಿಕಾರ್ಜುನಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !