‘ಸೋಲಾರ್‌ ಪ್ರೋಬ್‌’ ಉಡಾವಣೆಗೆ ಕ್ಷಣಗಣನೆ

7

‘ಸೋಲಾರ್‌ ಪ್ರೋಬ್‌’ ಉಡಾವಣೆಗೆ ಕ್ಷಣಗಣನೆ

Published:
Updated:

ತಂಪಾ, ಅಮೆರಿಕ : ಸೂರ್ಯನ ಹೊರಗಿನ ಮೇಲ್ಮೈ ಪ್ರದೇಶದ ಅಧ್ಯಯನಕ್ಕೆ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಮಹತ್ವಾಕಾಂಕ್ಷೆಯ ‘ಪಾರ್ಕರ್‌ ಸೋಲಾರ್‌ ಪ್ರೋಬ್‌ (ಪಿಎಸ್‌ಪಿ)’ ಬಾಹ್ಯಾಕಾಶ ರೋಬೊ ನೌಕೆಯ ಉಡಾವಣೆಗೆ ಕ್ಷಣಗಣನೆ ಶುಕ್ರವಾರದಿಂದ (ಆ.10) ಆರಂಭವಾಗಿತ್ತು.

ಫ್ಲಾರಿಡಾದ ಕೇಪ್‌ ಕೆನವರಾಲ್‌ನಿಂದ ನೌಕೆಯನ್ನು ಹೊತ್ತು ಡೆಲ್ಟಾ –4 ಉಡಾವಣಾ ವಾಹನ ಆಗಸಕ್ಕೆ ಚಿಮ್ಮಲಿದೆ.

‘ಶನಿವಾರ ಬೆಳಿಗ್ಗೆ 3.33ಕ್ಕೆ (ಸ್ಥಳೀಯ ಕಾಲಮಾನ) ಆಗಸಕ್ಕೆ ಉಡಾವಣೆಯಾಗಲಿದೆ. ಇದಕ್ಕೆ ಹವಾಮಾನ ಶೇ 70ರಷ್ಟು ಪೂರಕವಾಗಿದೆ’ ಎಂದು ನಾಸಾ ತಿಳಿಸಿದೆ.

ಸುಮಾರು 62 ಲಕ್ಷ ಕಿಲೋ ಮೀಟರ್‌ ದೂರದ ಸೂರ್ಯನ ಹೊರಭಾಗ (ಕರೋನ) ಪ್ರವೇಶಿಸಿ ಅಧ್ಯಯನ ನಡೆಸುವ ಪ್ರಯತ್ನಇದಾಗಿದೆ. 60 ವರ್ಷಗಳ ಹಿಂದೆ ಸೌರಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳ ವಿಜ್ಞಾನಿ ‘ಯುಗೀನ್‌ ಪಾರ್ಕರ್‌’ ಗೌರವಾರ್ಥ ಅವರ ಹೆಸರನ್ನೇ ನೌಕೆಗೆ ಇಡಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !