ಸ್ವರ ಮಾಂತ್ರಿಕನಿಗೆ ಕಾವ್ಯ, ನಾಟ್ಯ ಭಾವಾಂಜಲಿ

ಮಂಗಳವಾರ, ಜೂನ್ 18, 2019
25 °C
ಹವ್ಯಕ ಭವನದಲ್ಲಿ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ

ಸ್ವರ ಮಾಂತ್ರಿಕನಿಗೆ ಕಾವ್ಯ, ನಾಟ್ಯ ಭಾವಾಂಜಲಿ

Published:
Updated:
Prajavani

ಬೆಂಗಳೂರು: ತಮ್ಮ ಅನನ್ಯ ಭಾಗವತಿಕೆಯ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನೆಬ್ಬೂರು ನಾರಾಯಣ ಭಾಗವತರನ್ನು ನೆನಪಿಸಿ
ಕೊಂಡು ಅವರಿಗೆ ಕಾವ್ಯಾಂಜಲಿ, ನಾಟ್ಯಾಂಜಲಿ ಮತ್ತು ಭಾವಾಂಜಲಿ ಅರ್ಪಿಸುವ  ಕಾರ್ಯಕ್ರಮ ಹವ್ಯಕ ಭವನದಲ್ಲಿ ನಡೆಯಿತು. 

ಅಖಿಲ ಹವ್ಯಕ ಮಹಾಸಭಾದ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಾರಾಯಣ ಭಾಗವತರ ಆಪ್ತ ಒಡನಾಡಿಗಳು ನೆಬ್ಬೂರರೊಡನೆ ತಾವು ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತ, ಯಕ್ಷಗಾನ ಕ್ಷೇತ್ರದ ಸ್ಥಿತಿಗತಿ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡರು.

ನೆಬ್ಬೂರರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ‘ಪ್ರಸ್ತುತ ಯಕ್ಷಗಾನದಲ್ಲಿ ಶಾಸ್ತ್ರೀಯ ಸಂಗೀತ ಜ್ಞಾನ ಇರುವವರು ಹೆಚ್ಚಾಗಿದ್ದಾರೆ. ತಾಳಗತಿಯಲ್ಲಿ ಹೆಚ್ಚು ಸುಧಾರಣೆ ಆಗಿದೆ ಎಂದೂ ಹೇಳಬಹುದು. ಆದರೆ, ಯಕ್ಷಗಾನೀಯತೆ ಮಾತ್ರ ಮರೆಯಾಗಿದೆ. ಆದರೆ, ನೆಬ್ಬೂರರು ಧ್ವನಿ ಎತ್ತಿದ ತಕ್ಷಣ ಅಲ್ಲೊಂದು ಯಕ್ಷಗಾನದ ಗುಂಗು ಸೃಷ್ಟಿಯಾಗುತ್ತಿತ್ತು’ ಎಂದು ಹೇಳಿದರು. ‌

ಹವ್ಯಕರಿಗೂ ಯಕ್ಷಗಾನಕ್ಕೂ ಅವಿನಾಭಾವ ಸಂಬಂಧವಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳನ್ನು ಗಮನಿಸಿದರೆ ಯಕ್ಷಗಾನ ಕ್ಷೇತ್ರದಲ್ಲಿ ಹವ್ಯಕರೇ ಹೆಚ್ಚು ಗುರುತಿಸಿಕೊಂಡಿದ್ದನ್ನು ಕಾಣಬಹುದು ಎಂದರು. 

ಕಲಾವಿದರಾದ ಪ್ರವೀಣ, ಪ್ರಸನ್ನ, ಪ್ರದೀಪ ‘ಸುಧನ್ವಾರ್ಜುನ’ ಪ್ರಸಂಗದ ನಾಟ್ಯ ಪ್ರದರ್ಶಿಸಿದರು. ಅನಂತಪದ್ಮನಾಭ ಪಾಠಕ್‌ ಅವರು ನೆಬ್ಬೂರರ ಹಾಡುಗಳನ್ನು ಹಾಡಿ ಗಾನಾಂಜಲಿ ಅರ್ಪಿಸಿದರೆ, ದತ್ತಾತ್ರೇಯ ಭಟ್‌ ಮತ್ತು ಸುಧಾಕಿರಣ್‌ ಕಾವ್ಯಾಂಜಲಿ ಅರ್ಪಿಸಿದರು.

ಲೇಖಕಿ ಭಾರತಿ ಹೆಗಡೆ, ಸೆಲ್ಕೋದ ಮೋಹನ ಭಾಸ್ಕರ ಹೆಗಡೆ, ಡಾ. ಶ್ರೀಪಾದ ಹೆಗಡೆ ನೆನಪುಗಳನ್ನು ಹಂಚಿಕೊಂಡರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !