ಕೊಳಚೆ ನೀರು ಬಡಾವಣೆಗಳಿಗೆ

ಮಂಗಳವಾರ, ಜೂನ್ 18, 2019
29 °C
ರಾಜಕಾಲುವೆ ಒತ್ತುವರಿ ಆರೋಪ : ಸಾಂಕ್ರಾಮಿಕ ರೋಗ ಹರಡುವ ಭೀತಿ

ಕೊಳಚೆ ನೀರು ಬಡಾವಣೆಗಳಿಗೆ

Published:
Updated:
Prajavani

ನೆಲಮಂಗಲ: ಮಳೆ ಬಂದಾಗಲೆಲ್ಲ ಕೊಳಚೆನೀರು ಮನೆಯ ಮುಂದೆಯೇ ಹರಿಯುತ್ತದೆ. ಕೆಲವೊಮ್ಮೆ ಮನೆಯೊಳಗೂ ನುಗ್ಗುತ್ತದೆ. ನೀರಿನ ಸಂಪುಗಳು ಕೊಳಚೆ ನೀರಿನಿಂದ ತುಂಬಿ ಶುದ್ಧ ನೀರಿಗಾಗಿ ಪರದಾಡಬೇಕಾಗುತ್ತದೆ. 

ನೆಲಮಂಗಲ ನಗರಸಭೆಗೆ ಒಳಪಟ್ಟ ಕೆಇಬಿ ಎದುರಿನ ರಾಜಪ್ಪ ಬಡಾವಣೆಯ ಮನೆಗಳ ದುಸ್ಥಿತಿ ಇದು.

ಕೆಇಬಿ ಎದುರು ರಾಜಕಾಲುವೆ ಹಾದು ಹೋಗಿದೆ. ಪಟ್ಟಣದ ಚರಂಡಿ ನೀರನ್ನು ಅದಕ್ಕೆ ಬಿಡಲಾಗುತ್ತಿದೆ. ಇದರ ಮೂಲಕ ಬಿನ್ನಮಂಗಲ ಕೆರೆಗೆ ಕೊಳಚೆ ನೀರು ಹರಿಯುತ್ತದೆ. ನೆಲಮಂಗಲ ಕೆರೆಗೂ ಕೊಳಚೆ ನೀರು ಬಿಡಲಾಗುತ್ತಿದೆ. 

‘ಒತ್ತುವರಿ ಮತ್ತು ಹೂಳಿನಿಂದಾಗಿ ರಾಜಕಾಲುವೆಗಳ ನೀರು ಹೊರಕ್ಕೆ ಬರುತ್ತಿದೆ. ಮಳೆಗಾಲದಲ್ಲಿ ಕೊಳಚೆ ನೀರು ಬಡಾವಣೆಗಳಿಗೆ ನುಗ್ಗುತ್ತದೆ’ ಎಂದು ಸ್ಥಳೀಯರಾದ ನಾಗರಾಜ್‌ ತಿಳಿಸಿದರು.

‘ಮನೆಗಳ ಮುಂದೆ ಮತ್ತು ಹಿಂದೆ ಕೊಳಚೆ ನೀರು ಸಂಗ್ರಹವಾಗುತ್ತದೆ. ನೀರು ಬುನಾದಿಗೆ ಇಂಗಿ ಕಟ್ಟಡಗಳು ಕುಸಿಯುವ ಭೀತಿಯಲ್ಲಿ ನಾವಿದ್ದೇವೆ’ ಎಂದು ಸ್ಥಳೀಯರಾದ ಷಣ್ಮುಖಪ್ಪ ಆತಂಕ ವ್ಯಕ್ತಪಡಿಸಿದರು. 

‘ನಿಲ್ಲುವ ನೀರಿನಿಂದ ದುರ್ನಾತ ಬರುತ್ತದೆ. ಸೊಳ್ಳೆಗಳ ಕಾಟ ಹೆಚ್ಚುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭಯದಲ್ಲಿ ನಾವಿದ್ದೇವೆ’ ಎಂದರು ಸ್ಥಳೀಯ ನಿವಾಸಿ ಹನುಮಂತರಾಜು. 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !