ಶನಿವಾರ, ಜೂಲೈ 4, 2020
24 °C

ಇಂಡೊನೇಷ್ಯಾ ವಿಮಾನ ಪತನ 12 ಸಾವು

ಎಪಿ Updated:

ಅಕ್ಷರ ಗಾತ್ರ : | |

ಜಕಾರ್ತ: ಇಂಡೋನೇಷ್ಯಾ ಪೊಲೀಸ್‌ ಇಲಾಖೆಗೆ ಸೇರಿದ ವಿಮಾನವೊಂದು   ಇಲ್ಲಿನ ರಿಯಾವು ದ್ವೀಪದ ಸಮೀಪ ಶನಿವಾರ  ಪತನಗೊಂಡು 12 ಮಂದಿ ಮೃತಪಟ್ಟಿದ್ದಾರೆ.

‘ಬಂಕಾ ದ್ವೀಪದ ಪ್ಯಾಂಗಲ್‌ ಪಿನಾಂಗ್‌ನಿಂದ  ರಿಯಾವು ದ್ವೀಪದ ಬಟಂಗೆ ಹೊರಟಿದ್ದ ವಿಮಾನ ಸಾಗರದಲ್ಲಿ ಪತನಗೊಂಡಿದೆ. ವಿಮಾನ ಹಾರಾಟ ಆರಂಭಿಸಿದ 50 ನಿಮಿಷಗಳ ನಂತರ ಸಂಪರ್ಕ ಕಡಿದುಕೊಂಡಿತ್ತು.’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವಿಮಾನ ಪತನಗೊಳ್ಳುವ ಮೊದಲು ಸ್ಫೋಟದ ಸದ್ದು ಕೇಳಿಸಿದೆ. ವಿಮಾನದ ಆಸನದ ಚೂರುಗಳು ಹಾಗೂ ಮೃತದೇಹದ ಅವಶೇಷಗಳು ಪತ್ತೆಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ’ ಎಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಯುದ್ಧ ನೌಕೆ ಹಾಗೂ ಮೂರು ದೋಣಿಗಳನ್ನು ಬಳಸಿ ಶೋಧ  ನಡೆಸಲಾಗುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.