158 ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ

7
ಕೃಷ್ಣಯ್ಯ, ವಸುಂಧರಾ ಭೂಪತಿ, ಮುದ್ದುಮೋಹನ, ಗುರುಕಿರಣ್‌ಗೆ ಗೌರವ: ಇಂದು ಪ್ರದಾನ

158 ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ

Published:
Updated:
158 ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ

ಬೆಂಗಳೂರು: ಹಿರಿಯ ವಿದ್ವಾಂಸ ಪ್ರೊ.ಎಂ.ಎಚ್‌. ಕೃಷ್ಣಯ್ಯ, ಲೇಖಕಿ ವಸುಂಧರಾ ಭೂಪತಿ, ಗಾಯಕ ಮುದ್ದುಮೋಹನ ಸೇರಿದಂತೆ 158 ಸಾಧಕರನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಈ ಸಲದ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

 

ಬಿಬಿಎಂಪಿ ಪ್ರಧಾನ ಕಚೇರಿ ಆವರಣದ ಗಾಜಿನಮನೆಯಲ್ಲಿ ಮಂಗಳವಾರ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ 

ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

 

ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಮೇಯರ್‌ ಜಿ.ಪದ್ಮಾವತಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ಸಮಾಜ ಸೇವಾ ಕ್ಷೇತ್ರದಲ್ಲಿ 40, ಕ್ರೀಡಾ ಕ್ಷೇತ್ರದಲ್ಲಿ 28, ಮಾಧ್ಯಮ ಕ್ಷೇತ್ರದಲ್ಲಿ 20, ರಂಗಭೂಮಿ ಕ್ಷೇತ್ರದಲ್ಲಿ 14 ಜನರಿಗೆ ಪ್ರಶಸ್ತಿ ನೀಡಲಾಗಿದೆ.

 

ಆಯ್ಕೆಯಲ್ಲಿ ಗೊಂದಲ: ಗಣ್ಯರಿಂದ ಶಿಫಾರಸು ಪತ್ರಗಳು ಭಾರಿ ಪ್ರಮಾಣದಲ್ಲಿ ಬಂದಿದ್ದರಿಂದ ಯಾರನ್ನೆಲ್ಲ ಪ್ರಶಸ್ತಿಗೆ ಆಯ್ಕೆ ಮಾಡಬೇಕು ಎನ್ನುವ ಗೊಂದಲದಲ್ಲಿ ಮುಳುಗಿದ್ದ ಆಯ್ಕೆ ಸಮಿತಿ, ಪ್ರತಿಯೊಂದು ಕ್ಷೇತ್ರದಲ್ಲೂ ಸಂಜೆವರೆಗೆ ಹೆಸರುಗಳನ್ನು ಸೇರಿಸುತ್ತಲೇ ಹೋಯಿತು. ಮಧ್ಯಾಹ್ನವಾದರೂ ಅಂತಿಮ ಪಟ್ಟಿ ಸಿದ್ಧಗೊಳ್ಳದ ಕಾರಣ ಪತ್ರಿಕಾಗೋಷ್ಠಿಯನ್ನು ಸಂಜೆಗೆ ನಿಗದಿ ಮಾಡಲಾಯಿತು.

 

‘ಸದ್ಯ 158 ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಂಗಳವಾರ ಸಂಜೆಯ ಹೊತ್ತಿಗೆ ಈ ಪಟ್ಟಿ ಇನ್ನೂ ಬೆಳೆಯಬಹುದು’ ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳಿದರು. ಪುರಸ್ಕೃತರ ಪಟ್ಟಿ ಬೆಳೆಯುತ್ತಾ ಹೊರಟಿರುವ ಕಾರಣ ಪ್ರಶಸ್ತಿ ಮೊತ್ತವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದರು. 

ಕಳೆದ ವರ್ಷ ಸಾಧಕರಿಗೆ ಪ್ರಶಸ್ತಿ ಜತೆಗೆ ₹ 25 ಸಾವಿರ ನಗದು ನೀಡಿ ಸತ್ಕರಿಸಲಾಗಿತ್ತು.

 

ಪ್ರಶಸ್ತಿ ಪುರಸ್ಕೃತರು: 

ಸಾಹಿತ್ಯ: ಪ್ರೊ.ಎಂ.ಎಚ್‌.ಕೃಷ್ಣಯ್ಯ, ವಸುಂಧರಾ ಭೂಪತಿ, ಕೆ.ವಿ.ರಾಜೇಶ್ವರಿ, ಬಿ.ಸತ್ಯನಾರಾಯಣಾಚಾರ್‌, ಮಾಹಿರ್‌ ಮನ್ಸೂರ್‌, ಡಿ.ರಾಮಯ್ಯ; ಸಂಗೀತ: ಮುದ್ದುಮೋಹನ, ಗುರುಕಿರಣ್‌, ದೇವೇಂದ್ರಕುಮಾರ್‌ ಪತ್ತಾರ್‌, ಪಿ.ರಾಮಯ್ಯ, ಪದ್ಮಿನಿ ಎಲ್‌. ಓಕ್‌, ಗುರುರಾಜ ಹೊಸಕೋಟೆ, ಎಸ್‌.ಇಂದಿರಾಕೃಷ್ಣ, ಬಿ.ಆರ್‌.ಗೀತಾ, ನಾಗೇಂದ್ರ, ಚಿಂತಲಪಲ್ಲಿ ಕೆ.ರಮೇಶ್‌, ಎಂ.ಜನಾರ್ದನ.

 

ರಂಗಭೂಮಿ: ವಾಸು ಬೇಗೂರು, ಸುಲೋಚನಾ ರೈ, ಬಿ.ಆರ್‌.ಕವಿತಾ ಶೆಟ್ಟಿ, ಆನಂದ ಕಳಸ, ಶಶಿಕಾಂತ್‌ ಯಡಳ್ಳಿ, ಮಲ್ಲಿಕಾರ್ಜುನ ಸಾವಳಗಿ, ವಿ.ನಾಗರಾಜ್‌, ಜೂನಿಯರ್‌ ನರಸಿಂಹರಾಜು, ಸಿ.ರಾಮಚಂದ್ರಪ್ಪ, ಚ.ತ್ಯಾಗರಾಜು, ಎಂ.ಕೃಷ್ಣಪ್ಪ, ಕಾಳಾಚಾರ್‌ ಎನ್‌.ವೆಂಕಟರಾವ್‌, ಶಿವಣ್ಣ, ಡಾ.ಮುನಿನಾರಾಯಣ.

 

ಮಾಧ್ಯಮ: ರವಿ ಹೆಗಡೆ, ಎಂ.ಆರ್‌.ಸುರೇಶ್‌, ಸುಧೀಂದ್ರಕುಮಾರ್‌, ಮುನೀರ್‌ ಅಹ್ಮದ್‌ ಅಜಾದ್‌, ಎನ್‌.ಜಹಿರ್‌ ಅನ್ಸರ್‌, ಎ.ಪಿ. ಸಿದ್ದರಾಜು, ಶ್ಯಾಮ್‌ ಹೆಬ್ಬಾರ್‌, ವಿಜಯಕುಮಾರ್‌, ರಾ.ಸೋಮನಾಥ, ಗಂಗಾಧರ ಕುಷ್ಟಗಿ, ತ್ಯಾಗರಾಜ್, ಎಂ.ವಜ್ರಮೂರ್ತಿ, ಆರ್‌.ಶ್ರೀನಾಥ್‌, ಕೆ.ಎಸ್‌.ನಾಗರಾಜ್‌, ಶಿವಣ್ಣ, ಎಚ್‌.ಮೋಹನ್‌ಕುಮಾರ್‌, ಜಿ.ಕೆ.ಕಿರಣ್‌ಕುಮಾರ್‌, ಹಮೀದ್‌ ಪಾಳ್ಯ, ಅಬ್ಬೂರು ರಾಜಶೇಖರ್‌, ರಕ್ಷಾ.

 

ಚಲನಚಿತ್ರ: ಬಿ.ಕೆ.ಪ್ರಕಾಶ್‌, ಎ.ಚಿನ್ನೇಗೌಡ, ಆರ್‌.ದೇವರಾಜು, ಆದಿತ್ಯ ಚಿಕ್ಕಣ್ಣ, ಸಿ.ಚಂದ್ರಶೇಖರ್‌, ಕೆ.ಎಸ್‌.ರವೀಂದ್ರನಾಥ್‌; ವೈದ್ಯಕೀಯ: ಡಾ.ಕೆ.ಪಿ.ಆರ್‌. ಪ್ರಮೋದ್‌, ಡಾ.ಎಚ್‌.ಎಸ್‌.ನಾಗರಾಜ್‌ ಶೆಟ್ಟಿ, ಡಾ.ಅಂಬುಜಾಕ್ಷಿ ಕುಂಬಾರ; ನೃತ್ಯ: ಅಸ್ಮಿತಾ ಗಣೇಶ್‌, ಕಾವ್ಯಶ್ರೀ ನಾಗರಾಜ್‌, ಟಿ.ಜೆ.ನಿವೇದಿತಾ, ಬಿ.ಕೆ. ದಿನಕರ, ನಾಗಭೂಷಣ್‌, ಓ.ಎಲ್‌. ಚಿರಂಜೀವಿ, ರೂಪಾ ರಾಜೇಶ್‌, ಪದ್ಮಜಾ ಜಯರಾಂ; 

 

ಶಿಕ್ಷಣ: ಸುಭಾನ್‌ ಷರೀಫ್‌, ವಿ.ಪ್ರೇಮರಾಜ್‌ ಜೈನ್‌, ಡಾ.ನರಹರಿರಾವ್‌, ಎನ್‌.ನಾಗರತ್ನಮ್ಮ, ಎನ್‌.ಲೀಲಾವತಿ, ದೀಕ್ಷಿತ್‌, ಟಿ.ಬಾಲಕೃಷ್ಣ, ಎಸ್‌.ಆರ್‌. ಮೈಲಾರಯ್ಯ, ಡಾ.ಎಸ್‌.ಮಂಜುನಾಥ್‌.

 

ಕ್ರೀಡೆ: ಎಂ.ಎಸ್‌.ನಾಗರಾಜ್‌, ಜೆ.ಅರುಣಕುಮಾರ್‌, ನಿತ್ಯ ರಮೇಶ್‌ಕುಮಾರ್‌, ಎಂ.ಬಿ. ಅಯ್ಯಪ್ಪ, ಎ.ಎಸ್‌.ರಾಜಶೇಖರ್‌, ಎಸ್‌.ಲಿಖಿತ್‌, ಜಿ.ಹೇಮಾವತಿ, ಕೆ.ಎಸ್‌. ವಿಶ್ವಾಸ್‌, ಎಚ್‌.ಎನ್‌.ಕೃಷ್ಣಮೂರ್ತಿ, ಚಾರ್ಲ್ಸ್‌, ಎ.ಎನ್‌.ಸೋಮಯ್ಯ, ಕೆ.ಎಂ.ಮೀನಾ, ರಮಿತ್‌ ಆರ್‌, ಸ್ವಾಮಿನಾಥನ್‌, ಮಯೂರ್‌ ಡಿ.ಬಾನು, ಪ್ರಜ್ವಲ್‌, ಎಚ್‌.ಎಸ್‌.ಆನಂದೇಗೌಡ, ಎಚ್‌.ಎಲ್‌.ಶಾಮಣ್ಣಗೌಡ, ಡಿ.ನಿಶ್ಚಲ್‌, ಎಂ.ಪ್ರದೀಪ್‌ಕುಮಾರ್‌, ಕೆ.ಶಿವಲಿಂಗಯ್ಯ, ಕೆ.ಆರ್‌.ಅಶೋಕಕುಮಾರ್‌, ಅರ್ಚನಾ ಪೈ, ಜಗದೀಶ್‌, ಎಸ್‌.ಹರೀಶ್‌, ವಿನೋದ್‌ ಕುಮಾರ್‌, ದಾಮಿನಿ ಗೌಡ, ಸುಜನ್‌ ಆರ್‌.ಭಾರದ್ವಾಜ್‌.

 

ಯೋಗ: ವಿಜಯ್‌ ರಘುನಾಥ್‌, ಲಕ್ಷ್ಮೀಕಾಂತಮ್ಮ, ವರ್ಧಮಾನ್‌ ಕಳಸೂರು, ಶಿವಬಸವಯ್ಯ; 

 

ಸಮಾಜ ಸೇವೆ: ಪದ್ಮಾ, ಬೈರಪ್ಪ, ಲಲಿತಾ ಮೇರಿ, ಮಹಾಂತೇಶ್‌, ಹರ್ಷದ್‌ ಕುಮಾರ್‌ ಷಾ, ಶಂಕರಪ್ಪ, ಎಚ್‌.ಪಿ.ರಾಜಗೋಪಾಲರೆಡ್ಡಿ, ಮೊಹಮ್ಮದ್‌ ಹನೀಫ್‌ ಹಜರತ್‌, ವಿಷ್ಣುಭರತ್‌, ವೆಂಕಟರಮಣಪ್ಪ, ಡಾ.ಎಚ್‌.ಸಿ.ಸತ್ಯನ್‌, ಎಸ್‌.ಎಸ್‌.ಇಂದಿರಾ, ಚೂಡಾಮಣಿ, ಎಂ.ನಾಗರಾಜಯ್ಯ, ಎ.ಪದ್ಮನಾಭ, ಬಿ.ನಂಜುಂಡಪ್ಪ, ಜಯರಾಮಯ್ಯ, ಎಸ್‌.ಪಿ. ಶ್ರೀಧರ್‌, ಸಿ.ನಾರಾಯಣಗೌಡ, ವೈ.ರಾಜಾರೆಡ್ಡಿ, ಶಿವರಾಮೇಗೌಡ, ಬಿ.ಎನ್‌.ಜಗದೀಶ್‌, ಆರ್‌.ಚೇತನ್‌, ಪಿ.ಅಹಮದ್‌, ಮುನಿರಾಜಗೌಡ, ಕೃಷ್ಣೇಗೌಡ, ದ್ವಾರಕಾನಾಥ, ಕೇಶವಲು ನಾಯ್ಡು, ರೇವಣ್ಣ, ಎಚ್‌.ಬಿ. ಪುಟ್ಟೇಗೌಡ, ಎ.ನರಸಿಂಹನ್‌, ಅರ್ಷದ್‌, ಸಲ್ಮಾ ತಾಜ್‌, ಸಿ.ರಾಮು, ಎಂ.ಶ್ರೀನಿವಾಸ್‌, ವನಿತಾ ಅಶೋಕ್‌, ಎಚ್‌.ಎಂ.ಕೃಷ್ಣಮೂರ್ತಿ, ಗಣೇಶ್‌ ಆಚಾರ್‌, ರೀತಾ ರಾಣಿ.

 

ಸರ್ಕಾರಿ ಸೇವೆ:  ಕಲ್ಲಪ್ಪ ಖರಾತ, ಎಚ್‌.ಎ.ಮಂಜು, ಎಚ್‌.ಮೀನಾಕ್ಷಿ, ಶಾರದಾ ಸಿದ್ದಿ; ಸಾಂಸ್ಕೃತಿಕ: ಬ್ರಹ್ಮತೇಜ ವೆಂಕಟರಾಮಯ್ಯ, ಕೆ.ಜಯರಾಂ, ಶೋಭಾ ನಾಯ್ಡು, ಎಂ.ರಾಮಾಂಜನೇಯಲು, ಲಲಿತಮ್ಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry