7

ಬಿಸಿ ಬಿಸಿ ರಾಗಿ ಮುದ್ದೆಗೆ ‘ಉಪ್ಪೆಸರು’

Published:
Updated:
ಬಿಸಿ ಬಿಸಿ ರಾಗಿ ಮುದ್ದೆಗೆ ‘ಉಪ್ಪೆಸರು’

ಉಪ್ಪೆಸರಿನೊಂದಿಗೆ ಬಿಸಿ ಬಿಸಿ ರಾಗಿ ಮುದ್ದೆಯನ್ನು ಸವಿದರೆ ಆ ರುಚಿಯೇ ಬೇರೆ! ದಿನವೂ ಅನ್ನ, ಚಪಾತಿ ಊಟ ಮಾಡಿ ಬೋರಾಗಿದ್ದಾರೆ ಒಮ್ಮೆ ರಾಗಿ ಮುದ್ದೆಯೊಂದಿಗೆ ಉಪ್ಪೆಸರಿನ ರುಚಿ ನೋಡಿ. ಉಪ್ಪೆಸರು ಮಾಡುವ ವಿಧಾನಕ್ಕೆ ‘ಪ್ರಜಾವಾಣಿ ರೆಸಿಪಿ’ಯ ವಿಡಿಯೊ ವೀಕ್ಷಿಸಿ.

ಸಾಮಗ್ರಿಗಳು

1. ಅಲಸಂಡೆ ಕಾಳು -             01 ಕಪ್

2. ನುಗ್ಗೆ ಸೊಪ್ಪು -                  4 ಕಪ್

3. ಅರಿಶಿನ -                        ಸ್ವಲ್ಪ

4. ಉಪ್ಪು -                          ಸ್ವಲ್ಪ

5. ಎಣ್ಣೆ -                             ಸ್ವಲ್ಪ

6. ನೀರು -                           3 ಕಪ್ ಸೇರಿಸಿ ಒಂದು ವಿಶಲ್ ಕೂಗಿಸಿ ಬಿಸಿ ಇರುವಾಗಲೇ ಬಸಿಯಿರಿ.

ಚಟ್ನಿಗೆ :

1. ಹಸಿಮೆಣಸಿನ ಕಾಯಿ -          20

2. ಬೆಳ್ಳುಳ್ಳಿ ಎಸಳು -                20

3. ಕೊತ್ತಂಬರಿ ಸೊಪ್ಪು -           ಒಂದು ಕಪ್

4. ಹುರಿದ ಜೀರಿಗೆ -                ಒಂದು ಚಮಚ

5. ಕರಿ ಮೆಣಸು -                   ಒಂದು ಚಮಚ

6. ಹುಣಸೇಹಣ್ಣು -                   ನಿಂಬೆ ಗಾತ್ರ

ಒಗ್ಗರಣೆಗೆ:

1. ಎಣ್ಣೆ -                             02 ಚಮಚ

2. ಈರುಳ್ಳಿ -                         02

3. ಹಸಿಮೆಣಸಿನ ಕಾಯಿ -         02

4. ಕರಿಬೇವು -                      ಸ್ವಲ್ಪ

5. ಒಣಮೆಣಸಿನ ಕಾಯಿ -         02

ಮಾಡುವ ವಿಧಾನ: ಅಲಸಂಡೆ ಕಾಳು, ನುಗ್ಗೆ ಸೊಪ್ಪು, ಅರಶಿನ, ಉಪ್ಪು ಹಾಕಿ ಕುಕ್ಕರ್ ನಲ್ಲಿ ಬೇಯಿಸಬೇಕು. ಎರಡು ಸೀಟಿ ಆದ ಮೇಲೆ ಆಫ್ ಮಾಡಿ, ನೀರನ್ನು ಬಸಿದಿಟ್ಟುಕೊಳ್ಳಬೇಕು. ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿಗಳನ್ನು ಸೇರಿಸಬೇಕು. ಅದಕ್ಕೆ  ನುಗ್ಗೇಸೊಪ್ಪು, ಅಲಸಂಡೆ ಮಿಶ್ರಣವನ್ನು ಸೇರಿಸಿದರೆ ಉಪ್ಪೆಸರು ತಯಾರಾಗುತ್ತದೆ.

ಖಾರ ಚಟ್ನಿ ಮಾಡುವ ವಿಧಾನ: ಹಸಿಮೆಣಸುಗಳನ್ನು ಕೊಂಚ ಬಾಡಿಸಬೇಕು. ಜೀರಿಗೆಯನ್ನು ಸ್ವಲ್ಪ ಹುರಿದುಕೊಳ್ಳಬೇಕು. ಇದಕ್ಕೆ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಕರಿಮೆಣಸು. ಹುಣಸೇ ಹಣ್ಣು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನೂ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry