ಬ್ರಿಟನ್‌ ಸಂಸತ್‌ ಚುನಾವಣೆ ವೀಕ್ಷಕರಾಗಿ ಶೋಭಾ ಕರಂದ್ಲಾಜೆ

7

ಬ್ರಿಟನ್‌ ಸಂಸತ್‌ ಚುನಾವಣೆ ವೀಕ್ಷಕರಾಗಿ ಶೋಭಾ ಕರಂದ್ಲಾಜೆ

Published:
Updated:
ಬ್ರಿಟನ್‌ ಸಂಸತ್‌ ಚುನಾವಣೆ ವೀಕ್ಷಕರಾಗಿ ಶೋಭಾ ಕರಂದ್ಲಾಜೆ

ಬೆಂಗಳೂರು :  ಚಿಕ್ಕಮಗಳೂರು–ಉಡುಪಿ ಸಂಸದೆ ಶೋಭಾ ಕರಂ ದ್ಲಾಜೆ ಬ್ರಿಟನ್‌ ಸಂಸತ್‌ ಚುನಾ ವಣೆಯ ಅಧಿಕೃತ ಸಂಸದೀಯ ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಬ್ರಿಟನ್‌ನಲ್ಲಿ ಇದೇ 3ರಿಂದ 10ರವರೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅಲ್ಲಿನ ಸಂಸದೀಯ ಸಮಿ ತಿಯು ಭಾರತದ ಸಂಸದರನ್ನು ವೀಕ್ಷಕರಾಗಿ ಕಳುಹಿಸುವಂತೆ  ಲೋಕಸಭಾಧ್ಯಕ್ಷರಿಗೆ ಪತ್ರ ಬರೆದಿದೆ.

‘ಬ್ರಿಟನ್‌ ಸಂಸತ್‌ ಚುನಾವಣೆಯ ಪ್ರಕ್ರಿಯೆಯನ್ನು ವೀಕ್ಷಿಸುವ ಸದವಕಾಶ ಸಿಕ್ಕಿದೆ.  ನನ್ನ ಮಟ್ಟಿಗೆ ಇದು ಹೊಸ ಅನು ಭವ. ಕುತೂಹಲದಿಂದ ಪಾಲ್ಗೊಳ್ಳು ತ್ತಿದ್ದೇನೆ’ ಎಂದು ಶೋಭಾ ಕರಂದ್ಲಾಜೆ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry