ಮಂಗಳ ಗ್ರಹದಲ್ಲಿ ಸರೋವರ!

7
ಸೂಕ್ಷ್ಮಾಣು ಜೀವಿಗಳ ಅಸ್ತಿತ್ವದ ಸಾಧ್ಯತೆ ಕುರಿತು ವಿಶ್ಲೇಷಣೆ

ಮಂಗಳ ಗ್ರಹದಲ್ಲಿ ಸರೋವರ!

Published:
Updated:
ಮಂಗಳ ಗ್ರಹದಲ್ಲಿ ಸರೋವರ!

ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿ ಇರಬಹುದಾದ ಸರೋವರದಿಂದಾಗಿಯೇ ವೈವಿಧ್ಯಮಯ ಸೂಕ್ಷ್ಮಾಣು ಜೀವಿಗಳ ಅಸ್ತಿತ್ವ ಸಾಧ್ಯವಾಗಿದೆ ಎನ್ನುವ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಮೂರು ಶತಕೋಟಿ ಹೆಚ್ಚು ವರ್ಷಗಳಿಂದಲೂ ಈ ಜೀವಿಗಳು ವಾಸಿಸಲು ಸೂಕ್ತವ ವಾತಾವರಣವನ್ನು ಮಂಗಳ ಗ್ರಹ ಕಲ್ಪಿಸಿದೆ ಎನ್ನುವುದನ್ನು ‘ನಾಸಾ’ದ  ಬಾಹ್ಯಾಕಾಶ ನೌಕೆ ‘ಕ್ಯೂರಿಯಾಸಿಟಿ ರೋವರ್‌’ ಪತ್ತೆ ಮಾಡಿದೆ. ಇದರಿಂದಾಗಿ ಮಂಗಳ ಗ್ರಹದಲ್ಲಿ ಜಲಮೂಲಗಳು ಮತ್ತು ಜೀವಿಗಳ ಅಸ್ತಿತ್ವದ ಕುರಿತು ಮೂಡಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮತ್ತಷ್ಟು  ಅವಕಾಶ ದೊರೆತಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

‘ಈಗ ಸದ್ಯ ದೊರೆತಿರುವ ನೀರಿನ ಅಂಶದಲ್ಲಿ ಆಕ್ಸಿಡಂಟ್ಸ್‌ ಹೆಚ್ಚಿರುವುದು ಗೊತ್ತಾಗಿದೆ. ಇದೊಂದು ವಿಭಿನ್ನ ವಾತಾವರಣ’ ಎಂದು ಅಮೆರಿಕದ ಸ್ಟೊನಿ ಬ್ರೂಕ್‌ ವಿಶ್ವವಿದ್ಯಾಲಯದ ಜೋಯಲ್‌ ಹುರೊವಿಟ್ಜ್‌ ತಿಳಿಸಿದ್ದಾರೆ.

‘ಈ ರೀತಿಯ ಆಕ್ಸಿಡಂಟ್ಸ್‌ಗಳು ಭೂಮಿಯಲ್ಲಿನ ಸರೋವರಗಳಲ್ಲಿ ಸಾಮಾನ್ಯ. ಈಗ ನಾವು ಮಂಗಳ ಗ್ರಹದಲ್ಲಿ ಪತ್ತೆ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

‘ಮಂಗಳ ಗ್ರಹದಲ್ಲಿ ಜೀವಿಗಳಿದ್ದವು ಎನ್ನುವ ಬಗ್ಗೆ ಖಚಿತವಾದ ಮಾಹಿತಿ ದೊರೆತಿಲ್ಲ. ಆದರೆ, ಜೀವಿಗಳು ವಾಸಿಸಲು ಸೂಕ್ತ ವಾತಾವರಣ  ಸಹ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸದ್ಯ ದೊರೆತಿರುವ ಮಾಹಿತಿಗಳು ಮುಖ್ಯವಾಗಿವೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry