ಪ್ರೀ ಕ್ವಾರ್ಟರ್‌ಫೈನಲ್‌ಗೆ ಮರ್ರೆ

7
ಫ್ರೆಂಚ್ ಓಪನ್: ವಾವ್ರಿಂಕಾ, ಕ್ಯಾರೊಲಿನಾ ವೋಜ್ನಿಯಾಕಿಗೆ ಗೆಲುವು

ಪ್ರೀ ಕ್ವಾರ್ಟರ್‌ಫೈನಲ್‌ಗೆ ಮರ್ರೆ

Published:
Updated:
ಪ್ರೀ ಕ್ವಾರ್ಟರ್‌ಫೈನಲ್‌ಗೆ ಮರ್ರೆ

ಪ್ಯಾರಿಸ್: ಬ್ರಿಟನ್‌ನ ಆ್ಯಂಡಿ ಮರ್ರೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ಹದಿನಾರರ ಘಟ್ಟ ತಲುಪಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ಮರ್ರೆ 7–6, 7–5, 6–0ರಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೆಟ್ರೊ ಅವರನ್ನು ಮಣಿಸಿದರು.

ಸ್ಟಾನಿಸ್ಲಾಸ್‌ ವಾವ್ರಿಂಕಾ 7–6, 6–0, 6–2ರಲ್ಲಿ ಫ್ಯಾಬಿಯೊ ಫೋಗ್ನಿನಿ ವಿರುದ್ಧವೂ, ಕೆವಿನ್ ಆ್ಯಂಡರ್ಸನ್‌ 6–7, 7–6, 5–7, 6–1, 6–4ರಲ್ಲಿ ಕೆಲೆ ಎಡ್ಮಂಡ್ ಮೇಲೂ, ಮರಿನ್ ಸಿಲಿಕ್ 6–1, 6–3ರಲ್ಲಿ ಫೆಲಿಸಿಯಾನೊ ಲೊಪೆಜ್ ಎದುರೂ ಗೆದ್ದರು.

ಮಹಿಳೆಯರ ವಿಭಾಗದಲ್ಲಿ ಡೆನ್ಮಾ ರ್ಕ್‌ನ ಕ್ಯಾರೊಲಿನಾ ವೋಜ್ನಿಯಾಕಿ 6–2, 2–6, 6–3ರಲ್ಲಿ ಕ್ಯಾಥರಿನ್ ಬೆಲ್ಲೀಸ್ ಮೇಲೆ ಗೆದ್ದರು.

ಕಾರ್ಲಾ ಸುರೆಜ್ ನವಾರೊ 6–4, 6–4ರಲ್ಲಿ ಎಲೆನಾ ವೆಸನಿನಾ ಮೇಲೂ, ಸಿಮೊನಾ ಹಲೆಪ್ 6–0, 7–5ರಲ್ಲಿ ಡರಿಯಾ ಕಸಾಟ್ಕಿನಾ ವಿರುದ್ಧವೂ, ಕರೊಲಿನಾ ಗ್ರೇಸಿಯಾ 6–4, 4–6, 9–7ರಲ್ಲಿ ಸಿ ಸು ವೀ ಮೇಲೂ, ಫ್ರಾನ್ಸ್‌ನ ಅಲೈಜ್ ಕಾರ್ನೆಟ್ 6–2, 6–1ರಲ್ಲಿ ಅಗ್ನಿಸ್ಕಾ ರಾಂಡ್ವಾಸ್ಕಾ ವಿರುದ್ಧವೂ ಜಯದಾಖಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry