ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮೊಕದ್ದಮೆ‌ ದಾಖಲಿಸಿ ಜೈಲಿಗೆ ಕಳುಹಿಸಿ: ಸಚಿವ ರಮಾನಾಥ ರೈ

7

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮೊಕದ್ದಮೆ‌ ದಾಖಲಿಸಿ ಜೈಲಿಗೆ ಕಳುಹಿಸಿ: ಸಚಿವ ರಮಾನಾಥ ರೈ

Published:
Updated:
ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮೊಕದ್ದಮೆ‌ ದಾಖಲಿಸಿ ಜೈಲಿಗೆ ಕಳುಹಿಸಿ: ಸಚಿವ ರಮಾನಾಥ ರೈ

ಮಂಗಳೂರು: ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮೊಕದ್ದಮೆ‌ ದಾಖಲಿಸಿ ಜೈಲಿಗೆ ಕಳುಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲೆಯ ಎಸ್‌ಪಿ ಭೂಷಣ್ ಜಿ. ಬೊರಸೆ ಅವರಿಗೆ ತಾಕೀತು ಮಾಡುತ್ತಿರುವ ವಿಡಿಯೊ ದೃಶ್ಯಾವಳಿ ಭಾನುವಾರ ಬೆಳಿಗ್ಗೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಒಂದು ನಿಮಿಷ ಏಳು ಸೆಕೆಂಡ್ ಅವಧಿಯ ಈ ವಿಡಿಯೊದಲ್ಲಿ ರೈ, ಎಸ್‌ಪಿ ಮತ್ತು ಕೆಲವರು ಇದ್ದಾರೆ. ಪ್ರಭಾಕರ ಭಟ್ ವಿರುದ್ಧ ತೀವ್ರ ಟೀಕೆ ಮಾಡಿರುವ ಸಚಿವರು, ' ಭಾಷಣ ಮಾಡಿದರೆ ಕೇಸು ಹಾಕಿ. 307 ಕೇಸ್ ಹಾಕಿ. ಅವ‌ ಪುಕ್ಕಲ. ಹೆದರಿ ಓಡುತ್ತಾನೆ. ಅವನನ್ನು ಜೈಲಿಗೆ ಕಳುಹಿಸಿದರೆ ಹೊರಗೆ ಬರುವುದಿಲ್ಲ. ಅವನ ಹಿಂದೆ ಯಾರೂ ಬರುವುದಿಲ್ಲ. ಹೆದರಿ ಓಡುತ್ತಾರೆ' ಎಂದು ರೈ ಅವರು ಎಸ್‌ಪಿ ಅವರಿಗೆ ಹೇಳುತ್ತಿರುವುದು ವಿಡಿಯೊದಲ್ಲಿದೆ.

'ನಾನು ‌ಮೊದಲ ಬಾರಿ ಶಾಸಕ ಆದಾಗ ಬಿ.ಸಿ.ರೋಡ್‌ನಲ್ಲಿ ಗಲಾಟೆ ಆಗಿತ್ತು. ಆಗ ನಾನು ಬಹಳ ಜೋರಾಗಿದ್ದೆ. ಅವನನ್ನು ಓಡಿಸಿದ್ದೆ' ಎಂದು ರೈ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry