ಸೋಮವಾರ, ಡಿಸೆಂಬರ್ 16, 2019
18 °C

‘ನಾಯಕತ್ವದಿಂದ ರೂಟ್ ಆಟವೂ ಪರಿಪಕ್ವ’

ಪಿಟಿಐ Updated:

ಅಕ್ಷರ ಗಾತ್ರ : | |

‘ನಾಯಕತ್ವದಿಂದ ರೂಟ್ ಆಟವೂ ಪರಿಪಕ್ವ’

ಲಂಡನ್ :  ಇಂಗ್ಲೆಂಡ್ ಟೆಸ್ಟ್‌ ಕ್ರಿಕೆಟ್ ತಂಡದ ನೂತನ ನಾಯಕ ರಾಗಿರುವ ಜೋ ರೂಟ್ ಅವರ ಬ್ಯಾಟಿಂಗ್ ಮತ್ತು ತಂಡದ ಸಾಧನೆಯು ಹೊಸ ಉತ್ತುಂಗಕ್ಕೆ ಏರಲಿವೆ ಎಂದು ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ.

ಅಲಸ್ಟೇರ್ ಕುಕ್ ಅವರು  ಫೆಬ್ರುವರಿಯಲ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ರೂಟ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿತ್ತು.   ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಲಾರ್ಡ್ಸ್‌ ನಲ್ಲಿ ಆರಂಭವಾಗಲಿರುವ ಟೆಸ್ಟ್‌ ಅವರು ನಾಯಕತ್ವಕ್ಕೆ ಪದಾರ್ಪಣೆ ಮಾಡುವರು.

‘ಆಕ್ರಮಣಕಾರಿ  ಬ್ಯಾಟ್ಸ್‌ಮನ್ ಆಗಿರು ವ ರೂಟ್ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ನಾಯ ಕತ್ವದ ಜವಾಬ್ದಾರಿಯು ಅವರಿಗೆ ಒತ್ತಡವಲ್ಲ. ಆದರ ಬದಲಿಗೆ ಅವರ ಆಟವನ್ನು ಮತ್ತಷ್ಟು ಪರಿಪಕ್ವ ಗೊಳಿಸಲಿದೆ’ ಎಂದು ಬ್ರಾಡ್  ಮಂಗಳವಾರ  ಸ್ಕೈ ಸ್ಪೋರ್ಟ್ಸ್‌ ನ್ಯೂಸ್‌ ವಾಹಿನಿಯ ಸಂದರ್ಶನದಲ್ಲಿ ಹೇಳಿದರು.

26 ವರ್ಷದ ರೂಟ್ ಅವರು ಸದ್ಯ ವಿಶ್ವದ ಅಗ್ರಗಣ್ಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಭಾರತದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರೊಂದಿಗೆ ಐಸಿಸಿ ಅಗ್ರಶ್ರೇಯಾಂಕದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೂಟ್ ಕೂಡ ಇದ್ದಾರೆ.

ಪ್ರತಿಕ್ರಿಯಿಸಿ (+)