ಭಾನುವಾರ, ಡಿಸೆಂಬರ್ 8, 2019
19 °C

ಏಕೈಕ ಟಿ–20 ಪಂದ್ಯದಲ್ಲಿ ಭಾರತದ ವಿರುದ್ಧ ಬೌಲಿಂಗ್‌ ಆಯ್ಕೆ ಸೂಕ್ತ: ಕ್ರಿಸ್ ಗೇಲ್‌

Published:
Updated:
ಏಕೈಕ ಟಿ–20 ಪಂದ್ಯದಲ್ಲಿ ಭಾರತದ ವಿರುದ್ಧ ಬೌಲಿಂಗ್‌ ಆಯ್ಕೆ ಸೂಕ್ತ: ಕ್ರಿಸ್ ಗೇಲ್‌

ಕಿಂಗ್ಸ್‌ಟನ್‌(ಜಮೈಕಾ): ವೆಸ್ಟ್‌ ಇಂಡೀಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್‌ ಜುಲೈ 9ರಂದು ಭಾರತದ ವಿರುದ್ಧದ ಏಕೈಕ ಟಿ–20 ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಚುಟುಕು ಕ್ರಿಕೆಟ್‌ನಲ್ಲಿ ಯಶಸ್ವಿ ಆಟಗಾರರಾಗಿರುವ ಗೇಲ್‌ ಈವರೆಗೂ ಆಡಿರುವ 50 ಅಂತರರಾಷ್ಟ್ರೀಯ ಪಂ‌ದ್ಯಗಳಲ್ಲಿ 1519 ರನ್‌ ಗಳಿಸಿದ್ದು, ಸರಾಸರಿ 35.32 ದಾಖಲಾಗಿದೆ.

2016ರಲ್ಲಿ ಈಡನ್‌ ಗಾರ್ಡನ್‌ನಲ್ಲಿ ನಡೆದ  ಟಿ–20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಆಡಿದ್ದರು. ಇದೇ ಮೊದಲ ಬಾರಿಗೆ ತವರಿನಲ್ಲಿ ಭಾರತದ ವಿರುದ್ಧ  ಪಂದ್ಯದಲ್ಲಿ ಆಡಲಿದ್ದು, ಟಾಸ್‌ ಗೆದ್ದರೆ ಬೌಲಿಂಗ್‌ ಆಯ್ಕೆ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರೀಸ್‌ ಗೇಲ್‌ ಟಿ–20 ತಂಡಕ್ಕೆ ಮರಳಿರುವುದು ತಂಡದ ಬಲವನ್ನು ಹೆಚ್ಚಿಸಿದೆ' ಎಂದು ವೆಸ್ಟ್‌ ಇಂಡೀಸ್‌ ತಂಡದ ಆಯ್ಕೆ ಸಮತಿಯ ಅಧ್ಯಕ್ಷ ಕೋರ್ಟ್‌ನಿ ಬ್ರೌನೆ ಅಭಿಪ್ರಾಯಪಟ್ಟಿದ್ದಾರೆ.

5 ಪಂದ್ಯಗಳ ಏಕದಿನ ಸರಣಿಯಲ್ಲಿ 1–2 ಮುನ್ನಡೆ ಸಾಧಿಸಿರುವ ಭಾರತ ತಂಡಕ್ಕೆ ಸರಣಿ ಜಯ ಸಾಧಿಸಲು ಗುರುವಾರ ನಡೆಯುವ ಕೊನೆಯ ಪಂದ್ಯ ಮಹತ್ವದಾಗಿದೆ.

ಜುಲೈ 9ರಂದು ಭಾರತ– ವೆಸ್ಟ್‌ ಇಂಡೀಸ್ ನಡುವೆ ಏಕೈಕ ಟಿ–20 ಪಂದ್ಯ ನಡೆಯಲಿದೆ.

ಪ್ರತಿಕ್ರಿಯಿಸಿ (+)