ಬುಧವಾರ, ಡಿಸೆಂಬರ್ 11, 2019
20 °C

ಪಾಕಿಸ್ತಾನದ ಕ್ಯಾನ್ಸರ್‌ ಪೀಡಿತ ಮಹಿಳೆಯಿಂದ ವೈದ್ಯಕೀಯ ವೀಸಾಕ್ಕೆ ಸುಷ್ಮಾಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕಿಸ್ತಾನದ ಕ್ಯಾನ್ಸರ್‌ ಪೀಡಿತ ಮಹಿಳೆಯಿಂದ ವೈದ್ಯಕೀಯ ವೀಸಾಕ್ಕೆ ಸುಷ್ಮಾಗೆ ಮನವಿ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಯೊಬ್ಬರ ವೈದ್ಯಕೀಯ ವೀಸಾ ಅರ್ಜಿಯನ್ನು ಭಾರತೀಯ ರಾಯಭಾರ ಕಚೇರಿ ತಿರಸ್ಕರಿಸಿದ್ದು, ತಾನು ಚಿಕಿತ್ಸೆಗಾಗಿ ಭಾರತಕ್ಕೆ ಬರಬೇಕಿದ್ದು, ತಾವು ನೆರವು ನೀಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮನವಿ ಮಾಡಿದ್ದಾರೆ.

25 ವರ್ಷದ ಫೈಜಾ ತನ್ವೀರ್‌ ಅಮೀಲೋಬ್ಲಾಸ್ಟೋಮಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದೊಂದು ಬಗೆಯ ಗಡ್ಡೆಯಾಗಿದೆ.

ಗಾಜಿಯಾಬಾದ್‌ನಲ್ಲಿನ ಇಂದ್ರಪ್ರಸ್ಥ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ(ಐಡಿಸಿಎಚ್‌) ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕೆಂದು ನಿರ್ಧರಿಸಿದ್ದಾರೆ. ಈ ಸಂಬಂಧ ಆಸ್ಪತ್ರೆಗೆ ₹10 ಲಕ್ಷ ಪಾವತಿ ಮಾಡಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿವೆ.

ಆದರೆ. ಇಸ್ಲಾಮಾಬಾದ್‌ನಲ್ಲಿನ ಭಾರತೀಯ ಹೈಕಮಿಷನ್ ವೈದ್ಯಕೀಯ ವೀಸಾ ಅರ್ಜಿಯನ್ನು ತಿರಸ್ಕರಿಸಿದೆ ಎಂದು ವರದಿ ಹೇಳಿದೆ.

ಎರಡು ದೇಶಗಳ ನಡುವೆ ಹದಗೆಡುತ್ತಿರುವ ಸಂಬಂಧಗಳ ಕಾರಣ ನಮ್ಮ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತನ್ವೀರ್ ಅವರ ತಾಯಿ ಹೇಳಿದ್ದಾರೆ.

ಈ ಸಂಬಂಧ ಭಾರತೀಯ ಅಧಿಕಾರಿಗಳ ಗಮನ ಸೆಳೆಯಲು ತನ್ವೀರ್‌ ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಿದ್ದು, ಕೆಲ ದಿನಗಳಲ್ಲಿ ಹಲವು ಬಾರಿ ಸುಷ್ಮಾ ಸ್ವರಾಜ್‌ ಅವರಿಗೆ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ. ಜತೆಗೆ, ತಮ್ಮ ಆರೋಗ್ಯ ಸಮಸ್ಯೆಯ ಬಗೆಗಿನ ಫೋಟೊ ಮತ್ತು ವಿಡಿಯೊಗಳನ್ನು ಸುಷ್ಮಾ ಅವರಿಗೆ ಪೋಸ್ಟ್‌ ಮಾಡಿದ್ದಾರೆ.

‘ದಯಮಾಡಿ ನನ್ನ ಜೀವನವನ್ನು ಉಳಿಸಲು ಸಹಾಯ ಮಾಡಿ’ ಎಂದು ಟ್ವೀಟ್‌ ಮಾಡಿರುವ ತನ್ವೀರ್‌, ಮತ್ತೊಂದು ಟ್ವೀಟ್‌ನಲ್ಲಿ ‘ಸುಷ್ಮಾ ಜೀ ನನಗೆ ದಯಮಾಡಿ ಸಹಾಯ ಮಾಡಿ’ ಎಂದು ಬೇಡಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)