ಶನಿವಾರ, ಡಿಸೆಂಬರ್ 7, 2019
24 °C

ಮೀಸಾ ಭಾರತಿಗೆ ಇ.ಡಿ ಸಮನ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮೀಸಾ ಭಾರತಿಗೆ ಇ.ಡಿ ಸಮನ್ಸ್‌

ನವದೆಹಲಿ: ₹8 ಸಾವಿರ ಕೋಟಿ ಮೊತ್ತದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಮಗಳು, ಸಂಸದೆ ಮೀಸಾ ಭಾರತಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ನೀಡಿದೆ.

ವೈಯಕ್ತಿಕ ಹಣಕಾಸು ವ್ಯವಹಾರಗಳ ದಾಖಲೆಗಳು ಸೇರಿದಂತೆ ಇತರ ಕೆಲವು ದಾಖಲೆಗಳೊಂದಿಗೆ ಮಂಗಳವಾರ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತಿ ಅವರ ಪತಿ ಶೈಲೇಶ್‌ ಕುಮಾರ್‌ ಅವರಿಗೂ ಸಮನ್ಸ್‌ ನೀಡುವ ಸಾಧ್ಯತೆ ಇದೆ. ಇ.ಡಿ ಅಧಿಕಾರಿಗಳು ಜುಲೈ 8ರಂದು ಮೀಸಾ ದಂಪತಿ ಮಾಲೀಕತ್ವದ ಮೂರು ತೋಟದ ಮನೆಗಳು ಮತ್ತು ಅವರು ನಿರ್ದೇಶಕರಾಗಿದ್ದರು ಎಂದು ಹೇಳಲಾದ ಸಂಸ್ಥೆಯ ಮೇಲೆ ದಾಳಿ ಮಾಡಿದ್ದರು.

 

ಪ್ರತಿಕ್ರಿಯಿಸಿ (+)