ಮಂಗಳವಾರ, ಡಿಸೆಂಬರ್ 10, 2019
17 °C

ಹಳೇ ಮದ್ರಾಸ್‌ ರಸ್ತೆ ಹೆಚ್ಚು ಅಪಾಯಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೇ ಮದ್ರಾಸ್‌ ರಸ್ತೆ ಹೆಚ್ಚು ಅಪಾಯಕಾರಿ

ಬೆಂಗಳೂರು: ನಗರದಲ್ಲಿ 2014ರಿಂದ 2017ರ ಜೂನ್‌ವರೆಗೆ ಸಂಭವಿಸಿದ ಅಪಘಾತಗಳ ಬಗ್ಗೆ ಅಧ್ಯಯನ ನಡೆಸಿರುವ ಸಂಚಾರ ಪೊಲೀಸರು, 17 ಅಪಘಾತ ವಲಯಗಳನ್ನು ಗುರುತಿಸಿದ್ದಾರೆ.

ಕೆ.ಆರ್.ಪುರ ಬಳಿಯ ಬೆನ್ನಿಗಾನಹಳ್ಳಿಯಿಂದ ಮೇಡಹಳ್ಳಿ ಜಂಕ್ಷನ್‌ವರೆಗಿನ 7 ಕಿ.ಮೀ ಅಂತರದ ಹಳೇ ಮದ್ರಾಸ್‌ ರಸ್ತೆಯಲ್ಲಿ ಅತ್ಯಧಿಕ (208) ಅಪಘಾತಗಳು ಸಂಭವಿಸಿದ್ದು, ಈ ರಸ್ತೆಯು ವಲಯಗಳಲ್ಲಿ ಮೊದಲ ಸ್ಥಾನದಲ್ಲಿದೆ.

ಬಳ್ಳಾರಿ ರಸ್ತೆಯ ಹೆಬ್ಬಾಳ–ಕೊಲಂಬಿಯಾ ಏಷಿಯಾ ಆಸ್ಪತ್ರೆ ರಸ್ತೆಯಲ್ಲಿ 60 ಅಪಘಾತಗಳು ನಡೆದಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಹೆಬ್ಬಾಳ ಕೆರೆ–ಬಿಗ್‌

ಬಜಾರ್‌ ರಸ್ತೆಯಲ್ಲಿ 44 ಅಪಘಾತ ಸಂಭವಿಸಿ, 9 ಮಂದಿ ತೀವ್ರ ಗಾಯಗೊಂಡಿದ್ದಾರೆ. ಈ ರಸ್ತೆಗಳು ನಂತರದ ಸ್ಥಾನದಲ್ಲಿವೆ.

ಲುಂಬಿನಿ ಗಾರ್ಡನ್‌ನ ಹೊರವರ್ತುಲ ರಸ್ತೆಯಲ್ಲಿ 30 ಅಪಘಾತ ಸಂಭವಿಸಿ, 12 ಮಂದಿ ಗಾಯಗೊಂಡಿದ್ದಾರೆ. ಯಲಹಂಕ ಹಾಗೂ ಚಿಕ್ಕಜಾಲ ಠಾಣೆ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ 165 ಅಪಘಾತವಾಗಿದ್ದು, ಇವುಗಳು ಸಹ ಪಟ್ಟಿಯಲ್ಲಿವೆ.

ಈ ಬಗ್ಗೆ ಮಾತನಾಡಿದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ, ‘ಈ ಹಿಂದೆ ರಸ್ತೆಯಲ್ಲಿ ವಾಹನಗಳ ಓಡಾಟದ ವೇಗ ಹೆಚ್ಚಿದ್ದ

ರಿಂದ ಅಪಘಾತಗಳೂ ಹೆಚ್ಚುತ್ತಿದ್ದವು. ಈಗ ನಗರದಲ್ಲಿ ದಟ್ಟಣೆ ಹೆಚ್ಚಾಗಿ ಹಗಲಿನಲ್ಲೇ ಪ್ರತಿ ಗಂಟೆಗೆ 8.5 ಕಿ.ಮೀ ವೇಗದಲ್ಲಿ ವಾಹನಗಳು ಓಡಾಡುತ್ತಿವೆ. ಬೆಳಿಗ್ಗೆ ಹೊತ್ತು ಅಪಘಾತ ಕಡಿಮೆಯಾಗಿದ್ದು, ರಾತ್ರಿ ಅವುಗಳ ಪ್ರಮಾಣದಲ್ಲಿ ಏರಿಕೆಯಾಗಿದೆ’ ಎಂದರು.

‘ನಗರದಲ್ಲಿ ಸದ್ಯ 70 ಲಕ್ಷ ವಾಹನಗಳಿವೆ. 15ರಿಂದ 20 ಲಕ್ಷ ವಾಹನಗಳ ಸಂಚಾರ ಇದ್ದೇ ಇರುತ್ತದೆ. ಈ ವೇಳೆ ರಸ್ತೆ ಪಾದಚಾರಿ ರಸ್ತೆ ದಾಟುವಾಗ ಹಾಗೂ ವಾಹನಗಳು ಅಡ್ಡಬಂದಾಗ  ಅಪಘಾತಗಳು ಸಂಭವಿಸುತ್ತಿವೆ’.

‘ಬಳ್ಳಾರಿ ರಸ್ತೆಯ ಹೆಬ್ಬಾಳ–ಕೆಂಪಾಪುರ–ಕೊಲಂಬಿಯಾ ಏಷಿಯಾ ಆಸ್ಪತ್ರೆ ರಸ್ತೆಯಲ್ಲಿ 60 ಅಪಘಾತ  ನಡೆದಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಭದ್ರಪ್ಪ ಲೇಔಟ್‌–ಹೆಬ್ಬಾಳ ಕೆರೆ ಪ್ರವೇಶ–ಬಿಗ್‌ಬಜಾರ್‌ ರಸ್ತೆಯಲ್ಲಿ 44 ಅಪಘಾತ ಸಂಭವಿಸಿ 9 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇವುಗಳನ್ನು ಸಹ ಅಪಘಾತ ವಲಯಗಳನ್ನಾಗಿ ಘೋಷಿಸಿದ್ದೇವೆ’ ಎಂದರು.  

2015ರಲ್ಲಿ ಮಡಿವಾಳ ಜಂಕ್ಷನ್‌ನಲ್ಲಿ 931 ಅಪಘಾತಗಳು ಸಂಭವಿಸಿದ್ದವು.  ಅದರ ತಡೆಗೆ ಕ್ರಮ ಕೈಗೊಂಡಿದ್ದರಿಂದ 2016ರ ಜೂನ್‌ವರೆಗೆ ಕೇವಲ 12 ಅಪಘಾತಗಳು ಸಂಭವಿಸಿವೆ. ಅದೇ ರೀತಿಯಲ್ಲಿ ಇನ್ನುಳಿದ ರಸ್ತೆಯಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಅಪಘಾತ ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಲು  ಆಯಾ ವಿಭಾಗದ ಡಿಸಿಪಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕೆಲವೆಡೆ ರಸ್ತೆಯ ವಿಸ್ತರಣೆ ಮಾಡಲು ಬಿಬಿಎಂಪಿಗೂ ಮನವಿ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)