ತಿಂಗಳಿಂದ ನಿಂತಲ್ಲೇ ನಿಂತ ಆಂಬುಲೆನ್ಸ್‌

ಸೋಮವಾರ, ಜೂನ್ 24, 2019
26 °C

ತಿಂಗಳಿಂದ ನಿಂತಲ್ಲೇ ನಿಂತ ಆಂಬುಲೆನ್ಸ್‌

Published:
Updated:

ರಾಮನಗರ: ವಾಹನದ ಕ್ಷಮತೆ ಪ್ರಮಾಣಪತ್ರ (ಎಫ್‌ಸಿ) ನೀಡದ ಕಾರಣಕ್ಕೆ ಕಳೆದೊಂದು ತಿಂಗಳಿನಿಂದ ನಗರದ 108 ಆಂಬುಲೆನ್ಸ್‌ವೊಂದರ ಸೇವೆ ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವಂತೆ ಆಗಿದೆ.

ಜಿಲ್ಲಾ ಆಸ್ಪತ್ರೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ವಾಹನದ (ಕೆಎ–40, ಜಿ–234) ಎಫ್‌ಸಿ ಅವಧಿ ಕಳೆದ ತಿಂಗಳು ಮುಗಿದಿತ್ತು. ಸದ್ಯ ವಾಹನವು ಉತ್ತಮ ಸ್ಥಿತಿಯಲ್ಲಿ ಓಡುತ್ತಿರುವ ಕಾರಣ ಅದಕ್ಕೆ ಮತ್ತೆ ಕ್ಷಮತೆ ಪ್ರಮಾಣಪತ್ರ ಪಡೆದು ಮುಂದುವರಿಸಲು ನಿರ್ಧರಿಸಲಾಗಿತ್ತು. ಆದರೆ ಈ ಪ್ರಕ್ರಿಯೆಯು ನನೆಗುದಿಗೆ ಬಿದ್ದಿರುವುದರಿಂದ ಆಂಬುಲೆನ್ಸ್ ಅನ್ನು ಸದ್ಯ ಹಾಗೆಯೇ ನಿಲ್ಲಿಸಲಾಗಿದೆ.

ರಾಮನಗರ ಗ್ರಾಮೀಣ ಠಾಣೆಯ ಹಿಂಭಾಗ ಖಾಲಿ ಜಾಗದಲ್ಲಿ ಆಂಬುಲೆನ್ಸ್ ಹಾಗೆಯೇ ನಿಂತಿದೆ. ವಾಹನವನ್ನು ಒಂದು ತಿಂಗಳಿನಿಂದ ಮುಟ್ಟದ ಕಾರಣ ದೂಳು ಹಿಡಿಯುತ್ತಿದೆ. ವಾಹನದ ನಿರ್ವಹಣೆ ಮತ್ತು ತುರ್ತು ಸೇವೆಗಾಗಿ ಸರ್ಕಾರವು ಏಜೆನ್ಸಿ ಮೂಲಕ ತಲಾ ಇಬ್ಬರು ವಾಹನ ಚಾಲಕರು, ನರ್ಸ್‌ಗಳನ್ನು ನೇಮಿಸಿಕೊಂಡಿದ್ದು, ಈಗ ಅವರಿಗೆ ಕೆಲಸವಿಲ್ಲದಂತೆ ಆಗಿದೆ.

ಜಿಲ್ಲೆಯಲ್ಲಿ ಒಟ್ಟು 12 ಆಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ರಾಮನಗರ ತಾಲ್ಲೂಕಿಗೆ ಮೂರು ವಾಹನಗಳನ್ನು ನೀಡಲಾಗಿದೆ. ಈ ಮೂರರಲ್ಲಿ ಇದೀಗ ಒಂದು ವಾಹನ ಕೆಟ್ಟಿದ್ದು, ಉಳಿದ ಎರಡರಲ್ಲಿ ಒಂದು ಕೈಕೊಟ್ಟರೂ ರೋಗಿಗಳು ಪರದಾಡುವುದು ಸಾಮಾನ್ಯವಾಗಿದೆ.

‘ತುರ್ತು ಸಂದರ್ಭಗಳಿಗೆಂದು ಸರ್ಕಾರ ಆಂಬುಲೆನ್ಸ್‌ಗಳ ಸೇವೆಯನ್ನು ಒದಗಿಸುತ್ತಿದೆ. ಆದರೆ ವಾಹನಗಳ ನಿರ್ವಹಣೆ ಸಮರ್ಪಕವಾಗಿ ಇಲ್ಲ. ಕೆಲವೊಮ್ಮೆ ಅಲ್ಲಲ್ಲಿ ಕೆಟ್ಟು ನಿಲ್ಲುತ್ತವೆ. ಇದೀಗ ಒಂದು ತಿಂಗಳಾದರೂ ವಾಹನವನ್ನು ಒಂದೇ ಕಡೆ ನಿಲ್ಲಿಸಲಾಗಿದೆ.

ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ಸ್ಥಳೀಯ ನಿವಾಸಿ ರವಿಶಂಕರ್ ಆರೋಪಿಸಿದರು. ಆದಷ್ಟು ಶೀಘ್ರ ವಾಹನದ ಎಫ್‌ಸಿ ನವೀಕರಣ ಮಾಡಿಸಿ ಸಾರ್ವಜನಿಕರ ಸೇವೆಗೆ ಒದಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry