ವಿಚಾರಣೆ ನೆಪದಲ್ಲಿ ತೊಂದರೆ: ದೇವರಾಜ್

ಬುಧವಾರ, ಜೂನ್ 19, 2019
32 °C

ವಿಚಾರಣೆ ನೆಪದಲ್ಲಿ ತೊಂದರೆ: ದೇವರಾಜ್

Published:
Updated:
ವಿಚಾರಣೆ ನೆಪದಲ್ಲಿ ತೊಂದರೆ: ದೇವರಾಜ್

ಬೆಂಗಳೂರು: ಸಿಸಿಬಿ ಜಂಟಿ ಕಮಿಷನರ್ ಸತೀಶ್ ಕುಮಾರ್ ಅವರನ್ನು ಶನಿವಾರ ಭೇಟಿಯಾದ ನಟ ದೇವರಾಜ್, ‘ವಿಚಾರಣೆ ನೆಪದಲ್ಲಿ ಪೊಲೀಸರು ನನ್ನ ಕಿರಿಯ ಮಗನಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಗರ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್ ಅವರನ್ನು ಭೇಟಿಯಾಗುವ ಉದ್ದೇಶದಿಂದ ಮಧ್ಯಾಹ್ನ ಕಮಿನಷನರ್ ಕಚೇರಿಗೆ ಬಂದಿದ್ದ ದೇವರಾಜ್, ಅವರು ಸಿಗದ ಕಾರಣಕ್ಕೆ ಸತೀಶ್ ಅವರನ್ನು ಭೇಟಿಯಾದರು.

‘ಗೀತಾವಿಷ್ಣು ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಮಗ ಪ್ರಣವ್‌ನನ್ನು ಪೊಲೀಸರು ಪದೇ ಪದೇ ವಿಚಾರಣೆಗೆ ಕರೆಯುತ್ತಿದ್ದಾರೆ. ಆ ದಿನ ಗೀತಾವಿಷ್ಣುವಿನ ಕಾರಿನಲ್ಲಿ ಪ್ರಣವ್ ಇರಲಿಲ್ಲ. ಗೆಳೆಯನಿಗೆ ಅಪಘಾತವಾದ ವಿಚಾರ ತಿಳಿದು ಸ್ಥಳಕ್ಕೆ ಹೋಗಿದ್ದ ಅಷ್ಟೆ. ಈ ಸಂಗತಿ ಪೊಲೀಸರಿಗೂ ಗೊತ್ತಾಗಿದೆ. ಆದರೂ ಏಕೆ ವಿಚಾರಣೆ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ’ ಎಂದು ಸತೀಶ್ ಬಳಿ ಅಳಲು ತೋಡಿಕೊಂಡಿದ್ದಾರೆ.

‘ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನೂ ವಿಚಾರಣೆ ಮಾಡುತ್ತಿದ್ದೇವೆ. ಅಂತೆಯೇ ಪ್ರಕರಣದ ಮಾಹಿತಿ ಪಡೆಯಲು ಪ್ರಣವ್ ಅವರನ್ನೂ ಕರೆದಿದ್ದೇವೆ. ಅವರು ಆರೋಪಿಯಲ್ಲ. ನೀವು ಆತಂಕಪಡುವ ಅಗತ್ಯವಿಲ್ಲ. ನಿಶ್ಚಿಂತೆಯಿಂದ ಇರಿ’ ಎಂದು ಸತೀಶ್ ದೇವರಾಜ್‌ ಅವರಿಗೆ ಸಮಾಧಾನಪಡಿಸಿ ಕಳುಹಿಸಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಗೀತಾವಿಷ್ಣು, ಆತನ ಸ್ನೇಹಿತರಾದ ವಿನೋದ್, ಫೈಸಲ್‌ ಹಾಗೂ ಪ್ರಣವ್ ಅವರ ವಿಚಾರಣೆ ಶನಿವಾರವೂ ಮುಂದುವರಿಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry