ಅಶ್ಲೀಲ ಚಿತ್ರ ಅಪ್‌ಲೋಡ್‌: ಆರೋಪಿ ಸೆರೆ

ಶುಕ್ರವಾರ, ಜೂನ್ 21, 2019
22 °C

ಅಶ್ಲೀಲ ಚಿತ್ರ ಅಪ್‌ಲೋಡ್‌: ಆರೋಪಿ ಸೆರೆ

Published:
Updated:

ಬೆಂಗಳೂರು: ತೆಲುಗು ನಟಿಯರನ್ನು ಅಶ್ಲೀಲವಾಗಿ ಚಿತ್ರಿಸಿ, ಅದರ ಛಾಯಾಚಿತ್ರ ಹಾಗೂ ವಿಡಿಯೊಗಳನ್ನು ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ಆರೋಪಿ ದಾಸರಿ ಪ್ರದೀಪ್‌ (29) ಎಂಬಾತನನ್ನು ಹೈದರಾಬಾದ್‌ ಪೊಲೀಸರು ನಗರದಲ್ಲಿ ಬಂಧಿಸಿದ್ದಾರೆ.

ಹಲವು ನಕಲಿ ಫೇಸ್‌ಬುಕ್‌, ಟ್ವಿಟರ್‌ ಖಾತೆ ಹೊಂದಿದ್ದ ಆರೋಪಿ 30 ವೆಬ್‌ಸೈಟ್‌ಗಳ ನಿರ್ವಹಣೆ ಮಾಡುತ್ತಿದ್ದ. ಆ ಸಾಮಾಜಿಕ ಜಾಲತಾಣಗಳನ್ನು ನಟಿಯರ ಅಶ್ಲೀಲ ಚಿತ್ರ ಹಾಗೂ ವಿಡಿಯೊ ಪ್ರಕಟಿಸಲು ಬಳಸುತ್ತಿದ್ದ. ಜತೆಗೆ ನಟಿಯರ ಘನತೆಗೆ ಧಕ್ಕೆ ತರುವ ಬರಹಗಳನ್ನು ಪ್ರಕಟಿಸುತ್ತಿದ್ದ.

ಈ ಬಗ್ಗೆ ನಟಿ ನೀಡಿದ್ದ ದೂರಿನನ್ವಯ ಹೈದರಾಬಾದ್‌ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಕಂಪ್ಯೂಟರ್‌ ಐಡಿ ಮೂಲಕ ಪ್ರದೀಪ್‌

ಬೆಂಗಳೂರಿನಲ್ಲಿರುವುದನ್ನು ಪತ್ತೆ ಹಚ್ಚಿದ ವಿಶೇಷ ತಂಡ, ಆರೋಪಿಯನ್ನು ಶನಿವಾರ ಬಂಧಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry