ಸೋಮವಾರ, ಸೆಪ್ಟೆಂಬರ್ 16, 2019
24 °C

‘ಮಾತನಾಡುವ ಪ್ರಧಾನಿ ಕೊಟ್ಟಿದ್ದೇವೆ’

Published:
Updated:
‘ಮಾತನಾಡುವ ಪ್ರಧಾನಿ ಕೊಟ್ಟಿದ್ದೇವೆ’

ಅಮೇಠಿ (ಉತ್ತರ ಪ್ರದೇಶ) : ಮೂರು ವರ್ಷಗಳ ಆಡಳಿತದಲ್ಲಿ ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಪಕ್ಷವು ಈ ದೇಶಕ್ಕೆ ಮಾತನಾಡುವ ಪ್ರಧಾನಿಯನ್ನು ನೀಡಿದೆ ಎಂದು ಹೇಳಿದ್ದಾರೆ.

ಗುಜರಾತ್‌ನ ಅಭಿವೃದ್ಧಿಯ ಬಗ್ಗೆ ವ್ಯಂಗ್ಯವಾಡಿರುವ ರಾಹುಲ್‌ ವಿರುದ್ಧ ಹಾರಿಹಾಯ್ದಿರುವ ಷಾ, ಅಮೇಠಿ ಜನತೆಗೆ ನೆಹರೂ ಕುಟುಂಬದ ಮೂರು ತಲೆಮಾರು ಏನು ಮಾಡಿದೆ ಎಂದುಪ್ರಶ್ನಿಸಿದ್ದಾರೆ.

ರಾಹುಲ್‌ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಅಮೇಠಿಯಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಷಾ, ‘ನೀವು ನಮ್ಮ ಮೂರು ವರ್ಷಗಳ ಲೆಕ್ಕ ಕೇಳುತ್ತಿದ್ದೀರಿ. ಆದರೆ, ಅಮೇಠಿಯ ಜನ ನಿಮ್ಮ ಮೂರು ಪೀಳಿಗೆ ಮಾಡಿದ ಕೆಲಸವನ್ನು ಲೆಕ್ಕಹಾಕುತ್ತಿದ್ದಾರೆ’ ಎಂದು ಗೇಲಿ ಮಾಡಿದ್ದಾರೆ.

‘ಕಾಂಗ್ರೆಸ್‌ ಈ ದೇಶವನ್ನು 70 ವರ್ಷಗಳ ಕಾಲ ಆಳಿದೆ. ನೀವು (ರಾಹುಲ್‌) ದೀರ್ಘ ಸಮಯದಿಂದ ಇಲ್ಲಿನ ಸಂಸದರಾಗಿದ್ದೀರಿ. ಆದರೆ, ಇಲ್ಲಿ ಜಿಲ್ಲಾಧಿಕಾರಿ ಕಚೇರಿ, ಕ್ಷಯ ಆಸ್ಪತ್ರೆ, ಆಕಾಶವಾಣಿಯ ಎಫ್‌ಎಂ ಕೇಂದ್ರಗಳು ಯಾಕಿಲ್ಲ?’ ಎಂದು ಷಾ ಪ್ರಶ್ನಿಸಿದ್ದಾರೆ.

Post Comments (+)