ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನಡೆ ಸಾಧಿಸಿದ ಕಾಂಗ್ರೆಸ್; ರಾಹುಲ್ ಗಾಂಧಿಗೆ ಇದು ದೀಪಾವಳಿ ಗಿಫ್ಟ್: ಸಿಧು

Last Updated 15 ಅಕ್ಟೋಬರ್ 2017, 7:12 IST
ಅಕ್ಷರ ಗಾತ್ರ

ಗುರುದಾಸ್‍ಪುರ: ಪಂಜಾಬ್‍ನ ಗುರುದಾಸ್‍ಪುರ ಲೋಕಸಭಾ ಉಪಚುನಾವಣೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದೆ. ಆರಂಭಿಕ ಹಂತದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಖರ್ 1 ಲಕ್ಷದಷ್ಟು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿಯ ಆಧಿಪತ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿರುವುದು ಬಿಜೆಪಿಗೆ ಹೊಡೆತ ನೀಡಿದೆ. ಬಾಲಿವುಡ್ ನಟ ಹಾಗೂ ಬಿಜೆಪಿ ನೇತಾರರಾಗಿದ್ದ ವಿನೋದ್ ಖನ್ನಾ ಅವರ ನಿಧನದಿಂದಾಗಿ  ತೆರವಾಗಿದ್ದ ಸ್ಥಾನಕ್ಕೆ ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿದೆ.

ಬಿಜೆಪಿಯ ಅಭ್ಯರ್ಥಿ ಸ್ವರಣ್ ಸಿಂಗ್ ಸಲೇರಿಯಾ ವಿರುದ್ಧ ಕಾಂಗ್ರೆಸ್ ಪಿಸಿಸಿ ಅಧ್ಯಕ್ಷ ಸುನೀಲ್ ಜಖರ್‍‍ನ್ನು ಕಣಕ್ಕಿಳಿಸಿತ್ತು. ಆಮ್ ಆದ್ಮಿ ಪಕ್ಷ ಮೂರನೇ ಸ್ಥಾನದಲ್ಲಿದೆ.

ಅಕ್ಟೋಬರ್ 11 ಕ್ಕೆ ನಡೆದ ಚುನಾವಣೆಯಲ್ಲಿ ಶೇ.56ರಷ್ಟು ಮತದಾನವಾಗಿತ್ತು.

ಗುರುದಾಸ್‍ಪುರ ಲೋಕಸಭಾ ಕ್ಷೇತ್ರದಲ್ಲಿ ಭೋವಾ, ಪಠಾಣ್‍‌ಕೋಟ್, ಗುರುದಾಸ್‍ಪುರ್, ದೀನಾನಗರ್, ಖಾದಿಯಾನ್, ಫತೇಗಢ್ ಚುರಿಯಾನ್, ದೇರಾ ಬಾಬಾ ನಾನಕ್, ಸುಜನ್‍ಪುರ್ ಮತ್ತು ಬಟಾಲ - ಒಟ್ಟು 9 ವಿಧಾನಕ್ಷೇತ್ರಗಳಿವೆ.

ಕ್ಷಣ ಕ್ಷಣದ ಮಾಹಿತಿ
* ಇದು ನಮ್ಮ ಪಕ್ಷದ ಭಾವೀ ಅಧ್ಯಕ್ಷ ರಾಹುಲ್ ಗಾಂಧಿಯವರಿಗಿರುವ ದೀಪಾವಳಿ ಉಡುಗೊರೆ- ನವಜೋತ್  ಸಿಂಗ್ ಸಿಧು ಹೇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT