‘ರಾಮಮಂದಿರ ಬರುವ ದೀಪಾವಳಿ ಒಳಗೆ ಪೂರ್ಣ’

ಭಾನುವಾರ, ಜೂನ್ 16, 2019
30 °C

‘ರಾಮಮಂದಿರ ಬರುವ ದೀಪಾವಳಿ ಒಳಗೆ ಪೂರ್ಣ’

Published:
Updated:

ಪಟ್ನಾ: ಅಯೋಧ್ಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ರಾಮಮಂದಿರವು ಬರುವ ದೀಪಾವಳಿ ಒಳಗೆ ಪೂರ್ತಿಗೊಳಿಸಲಾಗುವುದು’ ಎಂದು ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಭಾನುವಾರ ಹೇಳಿದರು.

‘ಇದರ ಆರಂಭ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಈ ಮಂದಿರದ ಸ್ಥಾಪನೆಗೆ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗುವುದು’ ಎಂದ ಅವರು ಈ ಬಗ್ಗೆ ಹೆಚ್ಚಿಗೆ ಏನೂ ವಿವರಿಸಲಿಲ್ಲ.ವಿರಾಟ್‌  ಹಿಂದೂಸ್ತಾನ್‌ ಸಂಗಮ್‌ನ ಬಿಹಾರದ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸೀತೆಯ ಜನ್ಮಸ್ಥಳ ಎನ್ನಲಾಗುವ ಉತ್ತರ ಬಿಹಾರದ ಸೀತಾಮಡಿಯಲ್ಲಿ ಸೀತೆಯ ದೇವಾಲಯವನ್ನೂ ಸ್ಥಾಪಿಸಲಾಗುವುದು’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry