ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಪೀಳಿಗೆಗೆ ಶುದ್ಧಗಾಳಿ ಉಳಿಸಿ

Last Updated 20 ಅಕ್ಟೋಬರ್ 2017, 5:54 IST
ಅಕ್ಷರ ಗಾತ್ರ

ಯಳಂದೂರು: ಹೆಚ್ಚು ಗಿಡ ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಶುದ್ಧ ಪ್ರಾಣವಾಯು ದೊರೆಯುವಂತೆ ಆಸ್ಥೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಉಮಾವತಿ ಸಿದ್ದರಾಜು ಸಲಹೆ ನೀಡಿದರು.

ತಾಲ್ಲೂಕಿನ ವಡೆಗೆರೆ ಬಳಿ ಈಚೆಗೆ ಸಾಮಾಜಿಕ ಅರಣ್ಯ ವಲಯ ಹಾಗೂ ವಿವಿಧ ಸರ್ಕಾರೇತರ ಸಂಸ್ಥೆಗಳು ಹಮ್ಮಿಕೊಂಡಿದ್ದ ‘ವೃಕ್ಷಕ್ರಾಂತಿ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಬೆಟ್ಟ ಮತ್ತು ಸಮತಟ್ಟು ಪ್ರದೇಶಗಳಲ್ಲಿ ಸಸಿ ಹಾಕುವ ಮೂಲಕ ಹಸಿರು ಕಾಣುವಂತೆ ಮಾಡಬೇಕು. ಇದರಿಂದ ಮನುಕುಲಕ್ಕೆ ಅಗತ್ಯವಾದ ತಂಪು ಹವೆ ಹಾಗೂ ಜೀವ ವೈವಿಧ್ಯ ನಶಿಸುವುದನ್ನು ತಡೆಗಟ್ಟಬಹುದು. ಮಣ್ಣಿನ ಸವಕಳಿ ತಪ್ಪಿಸಿ ಅನಗತ್ಯ ನೀರು ಪೋಲಾಗುವುದನ್ನು ತಪ್ಪಿಸಬಹುದು ಎಂದರು.

ಮೈಸೂರು ಓಡಿಪಿ ಸಂಸ್ಥೆಯ ನಿರ್ದೇಶಕ ಫಾದರ್‌ ಸ್ಟ್ಯಾನಿ ಡಿ ಆಲ್ಮೆಡಾ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಮನುಕುಲದ ಉಳಿವಿಗಾಗಿ ಸಸ್ಯ ಸಂರಕ್ಷಣೆ ಅನಿವಾರ್ಯ. ರೈತರು ಸಹ ತಮ್ಮ ಜಮೀನಿನ ಬದುಗಳಲ್ಲಿ ಸಸಿಗಳನ್ನು ನೆಟ್ಟು ವೈಯಕ್ತಿಕ ಆದಾಯ ಗಳಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ವಲಯ ಅರಣ್ಯಾಧಿಕಾರಿ ರಾಜೇಂದ್ರಸಾಮಿ, ಇಲಾಖೆಯ ಅನಂತರಾಮು, ರೋಟರಿ ಸಂಸ್ಥೆ ಅಧ್ಯಕ್ಷ ವೈ.ಸಿ ಕೃಷ್ಣಮೂರ್ತಿ, ಕಾರ್ಯದರ್ಶಿ ಮಾದೇಶ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಮಹದೇವಪ್ಪ, ಗೌಡಹಳ್ಳಿ ಗ್ರಾಪಂ ಅಧ್ಯಕ್ಷ ರವಿ. ತಾಪಂ ಸದಸ್ಯೆ ಶಾರದಾಂಬ, ಬಸವಣ್ಣ, ಗ್ರಾ.ಪಂ ಸದಸ್ಯೆ ಅನಿತಾ ಜಯಪಾಲ್, ಪಿಡಿಒ ಪುಟ್ಟಬುದ್ದಿ, ಪ.ಪಂ ಸದಸ್ಯ ರವಿ, ಎಚ್.ಜಿ. ಸಂತೋಷ್, ಬಸವರಾಜಪ್ಪ, ಒಡಿಪಿ ಸಂಯೋಜಕರಾದ ಸುನೀತಾ, ಅಣ್ಣಮ್ಮ, ರಮೇಶ್, ನಾಗಸುಂದ್ರ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT