ಮಂಗಳವಾರ, ಸೆಪ್ಟೆಂಬರ್ 17, 2019
24 °C

ಹಿಂದೂಪುರ- ಬೆಂಗಳೂರು ಪ್ಯಾಸೆಂಜರ್‌ ಬೋಗಿ ಕಡಿತ, ಪ್ರಯಾಣಿಕರ ಪ್ರತಿಭಟನೆ

Published:
Updated:
ಹಿಂದೂಪುರ- ಬೆಂಗಳೂರು ಪ್ಯಾಸೆಂಜರ್‌ ಬೋಗಿ ಕಡಿತ, ಪ್ರಯಾಣಿಕರ ಪ್ರತಿಭಟನೆ

ಬೆಂಗಳೂರು: ಹಿಂದೂಪುರ- ಬೆಂಗಳೂರು ಪ್ಯಾಸೆಂಜರ್‌ ರೈಲಿನ ಬೋಗಿ ಸಂಖ್ಯೆಯಲ್ಲಿ ಕಡಿತ ಖಂಡಿಸಿ ಪ್ರಯಾಣಿಕರು ಸೋಮವಾರ ಅರ್ಧಗಂಟೆಗೂ ಹೆಚ್ಚುಕಾಲ ರೈಲುತಡೆ ನಡೆಸಿದರು.

‘ಎಲೆಕ್ಟ್ರಿಕ್ ಎಂಜಿನ್‌ ಇದ್ದ ಹಿಂದೂಪುರ- ಬೆಂಗಳೂರು ಪ್ಯಾಸೆಂಜರ್‌ ರೈಲಿಗೆ ಈ ಹಿಂದೆ 16 ಬೋಗಿಗಳು ಇರುತ್ತಿದ್ದವು. ಕಳೆದ ಶುಕ್ರವಾರದಿಂದ ರೈಲನ್ನು ಮೆಮು ಆಗಿ ಪರಿವರ್ತಿಸಲಾಗಿದ್ದು ಕೇವಲ ಬೋಗಿಗಳ ಸಂಖ್ಯೆಯನ್ನು 10ಕ್ಕೆ ಇಳಿಸಲಾಗಿದೆ. ರೈಲಿನೊಳಗೆ ಹೆಜ್ಜೆ ಇಡಲೂ ಸಾಧ್ಯವಾಗದಷ್ಟು ಜನರು ತುಂಬಿರುತ್ತಾರೆ’ ಎಂದು ಪ್ರಯಾಣಿಕರು ಹರಿಹಾಯ್ದರು.

‘ಹಿಂದೂಪುರ ಪ್ಯಾಸೆಂಜರ್ ಬೆಳಿಗ್ಗೆ 9:30ಕ್ಕೆ ನಗರ ರೈಲು ನಿಲ್ದಾಣ ತಲುಪಬೇಕು. ಆದರೆ ಈಚೆಗೆ ಇದು 10 ಗಂಟೆಗೆ ಮೊದಲು ಬರುವುದೇ ಅಪರೂಪ ಎಂಬಂತೆ ಆಗಿದೆ. ಕೆಲವೊಮ್ಮೆ 11 ಗಂಟೆಗೆ ಬಂದ ನಿದರ್ಶನಗಳೂ ಇವೆ. ಕಚೇರಿ ಕೆಲಸಕ್ಕೆ ಹೋಗುವವರಿಗೆ ಇದರಿಂದ ತೊಂದರೆಯಾಗಿದೆ’ ಎಂದು ಅನೇಕರು ಅಲವತ್ತುಕೊಂಡರು.

Post Comments (+)