ಮಂಗಳವಾರ, ಮಾರ್ಚ್ 9, 2021
18 °C

ಲ್ಯಾಂಬ್ರೆಟಾ 2019ಕ್ಕೆ ಭಾರತದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲ್ಯಾಂಬ್ರೆಟಾ 2019ಕ್ಕೆ ಭಾರತದಲ್ಲಿ...

ಸ್ವಿಡ್ಜರ್ಲೆಂಡ್ ಮೂಲದ ಐಕಾನಿಕ್ ಸ್ಕೂಟರ್ ಬ್ರ್ಯಾಂಡ್ ಲ್ಯಾಂಬ್ರೆಟಾ, ಮತ್ತೆ ಕಾಣಿಸಿಕೊಳ್ಳಲು ಸಜ್ಜಾಗಿದೆ. ಇಟಲಿಯ ಮಿಲಾನ್ ಶೋ (ಇಐಸಿಎಂಎ)ನಲ್ಲಿ ಈ ಹೊಸ ಲ್ಯಾಂಬ್ರೆಟಾಗಳು ಕಾಣಿಸಿಕೊಂಡಿದ್ದು, 2019ಕ್ಕೆ ಭಾರತಕ್ಕೆ ಬರುವ ವಿಷಯ ಪ್ರಸ್ತಾಪವಾಗಿದೆ. ಎರಡು ದಶಕಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಮಾಯವಾಗಿದ್ದ ಈ ಸ್ಕೂಟರ್‌ಗಳು ಮತ್ತೆ ತಮ್ಮ ಛಾಪು ಮೂಡಿಸಲು ಬರುತ್ತಿವೆ.

ವಿ50 ಸ್ಪೆಶಲ್, ವಿ125 ಸ್ಪೆಶಲ್ ಮತ್ತು ವಿ 200 ಸ್ಪೆಶಲ್ ಈ ಮೂರೂ ಸ್ಕೂಟರ್‌ ಸದ್ಯಕ್ಕೆ ಸಾಲಿನಲ್ಲಿವೆ. ಫಿಕ್ಸಡ್ ಫೆಂಡರ್ ಹಾಗೂ ಫ್ಲೆಕ್ಸ್ ಫೆಂಡರ್ ಎಂಬ ಎರಡು ಆಯಾಮಗಳಲ್ಲಿ ಸ್ಕೂಟರ್‌ ಲಭ್ಯ. ಹೊಸ ಶ್ರೇಣಿಯ ಈ ಲ್ಯಾಂಬ್ರೆಟಾವನ್ನು ಥೈವಾನ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಈ ಮೂರೂ ವಾಹನಗಳದ್ದೂ ಸ್ಟೀಲ್ ದೇಹವಾಗಿದ್ದು, ವಿ 50 ಸ್ಪೆಶಲ್‌, 49.5 ಸಿಸಿ ಏರ್‌ ಕೂಲ್ಡ್ ಕಾರ್ಬುರೇಟೆಡ್ ಸಿಂಗಲ್ ಸಿಲಿಂಡರ್ ಮೋಟಾರು ಹೊಂದಿದೆ. ಇದು 3.5 ಎಚ್‌ಪಿ–7,500 ಆರ್‌ಪಿಎಂ ಹಾಗೂ 3.4ಎನ್‌ಎಂ ಟಾರ್ಕ್–6,500ಆರ್‌ಪಿಎಂ ಶಕ್ತಿ ಉತ್ಪಾದಿಸಲಿದೆ. ಸಿವಿಟಿ ಮತ್ತು ಕಾನ್ಫಿಗರೇಷನ್ ಎಲ್ಲಾ ವಾಹನಗಳಿಗೂ ಒಂದೇ ಇರಲಿದೆ.

ವಿ125 ಸ್ಪೆಶಲ್‌ಗೆ 124.7ಸಿಸಿ ಫ್ಯುಯೆಲ್ ಇಂಜೆಕ್ಟೆಡ್ ಮೋಟಾರು ಇದ್ದು, 10.1ಎಚ್‌ಪಿ–8,500ಆರ್‌ಪಿಎಂ ಮತ್ತು 9.2ಎನ್‌ಎಂ ಟಾರ್ಕ್– 7,000 ಆರ್‌ಪಿಎಂ ಶಕ್ತಿ ಉತ್ಪಾದಿಸುತ್ತದೆ. ವಿ200 ಸ್ಪೆಶಲ್ ಮೋಟಾರು ಕೂಡ ಫ್ಯುಯೆಲ್ ಇಂಜೆಕ್ಟೆಟ್ 168.9ಸಿಸಿ ಮತ್ತು 12.1ಎಚ್‌ಪಿ-7,500ಆರ್‌ಪಿಎಂ, 12.5 ಎನ್‌ಎಂ ಟಾರ್ಕ್‌-5,500ಆರ್‌ಪಿಎಂ ಶಕ್ತಿ ಉತ್ಪಾದಿಸಲಿದೆ. ಮೂರೂ ಸ್ಕೂಟರ್‌ಗಳಿಗೆ 6.5 ಲೀಟರ್ ಫ್ಯುಯೆಲ್ ಟ್ಯಾಂಕ್ ನೀಡಲಾಗಿದೆ.

ಈ ‘ವಿ’ ಸ್ಪೆಶಲ್‌ ವಾಹನಗಳಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು ಹಾಗೂ ಸ್ಟಾಂಡರ್ಡ್ ಫಿಟ್‌ಮೆಂಟ್ ಇರಲಿದೆ. ಟೇಲ್ ಲೈಟ್ ಹಾಗೂ ಟರ್ನ್ ಸಿಗ್ನಲ್ ಇಂಡಿಕೇಟರ್‌ಗಳೂ ಇದ್ದು, ಅವೂ ಎಲ್‌ಇಡಿ ಯುನಿಟ್‌ಗಳಾಗಿವೆ. 220ಎಂಎಂ ಹೈಡ್ರಾಲಿಕ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಫೋರ್ಕ್, ಎಲ್ಲಾ ಮಾಡೆಲ್‌ಗಳಲ್ಲೂ ಇವೆ.

ಮುಂಭಾಗದಲ್ಲಿ 220 ಎಂಎಂ ಡಿಸ್ಕ್‌ ಬ್ರೇಕ್ ಹಾಗೂ 110 ಎಂಎಂ ರಿಯರ್ ಡ್ರಂ ಬ್ರೇಕ್‌ಗಳಿವೆ. ವಿ125ಗೆ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್‌ ಇದ್ದು, ವಿ200 ಮಾತ್ರ ಬಾಶ್ ಎಬಿಎಸ್ ಯುನಿಟ್ ಹೊಂದಿದೆ. 12-ವೋಲ್ಟ್ ಚಾರ್ಜಿಂಗ್ ಸಾಕೆಟ್ ಅನ್ನು ಎಲ್ಲಾ ಸ್ಕೂಟರ್‌ಗಳಲ್ಲೂ ನೀಡಲಾಗಿದೆ. ಬೆಲೆಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಯುರೋಪಿನಲ್ಲಿ 2018ರ ಆರಂಭದಲ್ಲಿ ಮಾರಾಟಕ್ಕೆ ಇಳಿಯಲಿದೆ. ಭಾರತಕ್ಕೆ ಇದು 2019ಕ್ಕೆ ಬರುವ ನಿರೀಕ್ಷೆಯಿದೆ.

*ಬಿಎಂಡಬ್ಲುಯಿಂದ ಅತಿ ವೇಗದ ಎಂ 3 ಸಿಎಸ್

ಬಿಎಂಡಬ್ಲು ತನ್ನ ಎಂ3 ಸಿಎಸ್ ಸೆಡಾನ್ ಅನ್ನು ಪರಿಚಯಿಸಿದ್ದು, ಇದನ್ನು ಅತಿ ವೇಗಿ ಹಾಗೂ ಅತಿ ಶಕ್ತಿಶಾಲಿ ಎಂ3 ಮಾದರಿ ಎಂದು ಕರೆದುಕೊಂಡಿದೆ.

ರೇಸ್ ಸ್ಪೆಕ್ ಟೈರ್‌ಗಳು ಹಾಗೂ ಸಸ್ಪೆನ್ಷನ್‌ಗಳಿಗೆ ‘ಎಂ’ ವಿಭಾಗ ಹೆಸರುವಾಸಿ. ಅದೇ ನಿರ್ದೇಶನದಲ್ಲಿ, ಕಂಪನಿ ಇತ್ತೀಚೆಗೆ ಎಂ3 ಸಿಎಸ್ (ಕ್ಲಬ್ ಸ್ಪೋರ್ಟ್) ಹೊರತರುವುದಾಗಿ ಘೋಷಿಸಿದೆ.

ಅತ್ಯುತ್ಕೃಷ್ಟ ಎಂಜಿನ್‌ ನೀಡುವುದರೊಂದಿಗೆ ಕೆಲವು ಉನ್ನತ ಪರಿಷ್ಕರಣೆಗಳನ್ನು ಮಾಡಲಾಗಿದೆ. ಈ ಎಂ3 ಸಿಎಸ್‌ ಅನ್ನು ‘ಸೀಮಿತ ಆವೃತ್ತಿ’ಯಡಿಯಲ್ಲಿ ಹೊರತರಲಿದ್ದು, ಕೇವಲ 1,200 ಮಾದರಿಗಳನ್ನು ತಯಾರು ಮಾಡುವ ಯೋಜನೆ ಹೊಂದಿರುವುದಾಗಿ ಕಂಪನಿ ತಿಳಿಸಿದೆ. ಮಾರ್ಚ್ 2018ರ ನಂತರ ವಿತರಣೆ ಕಾರ್ಯ ಆರಂಭ.

ಇದಕ್ಕೆ 3.0 ಲೀಟರ್, ಟ್ವಿನ್ ಟರ್ಬೊ, ಇನ್‌ಲೈನ್ ಸಿಕ್ಸ್ ಎಂಜಿನ್ ಇದ್ದು, 454 ಬಿಎಚ್‌ಪಿ ಶಕ್ತಿ ಉತ್ಪಾದಿಸಲಿದೆ. ಇದು ಸ್ಟಾಂಡರ್ಡ್ ಎಂ3ಗಿಂತ 30 ಬಿಎಚ್‌ಪಿ ಹೆಚ್ಚು ಶಕ್ತಿ. 0–100 ಕಿ.ಮೀ ವೇಗ ತಲುಪಲು ಕೇವಲ 3.9ಸೆಕೆಂಡ್ ತೆಗೆದುಕೊಳ್ಳುತ್ತದೆ.

ಎಂಜಿನ್‌ನೊಂದಿಗೆ 7 ಸ್ಪೀಡ್ ಎಂ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಯುನಿಟ್ ನೀಡಲಾಗಿದೆ. ಎಂಜಿನ್‌ಗೆ ಎರಡು ಮೋನೊ ಸ್ಕ್ರೋಲ್ ಟರ್ಬೊಗಳು, ವಾಲ್ವ್‌ಟ್ರಾನಿಕ್ ವೇರಿಯಬಲ್ ಟೈಮಿಂಗ್, ಕ್ಯಾಮ್‌ಶಾಫ್ಟ್ ಟೈಮಿಂಗ್ ಇದೆ. ಇಂಧನ ಕ್ಷಮತೆಯೂ ಆಗಿದ್ದು, ಲೀಟರ್‌ಗೆ 12.04 ಕಿ.ಮೀ ನೀಡಲಿದೆ.

ಅಲ್ಯುಮಿನಿಯಂ ಆಕ್ಸೆಲ್‌ಗಳು ಹಾಗೂ ಅಡಾಪ್ಟಿವ್ ಎಂ ಸಸ್ಪೆನ್ಷನ್‌ಗಳು, ಲೈಟ್ ಅಲಾಯ್ ಚಕ್ರಗಳಿದ್ದು, ಆಯ್ಕೆಯಾಗಿ ಮೈಕೆಲಿನ್ ಸ್ಪೋರ್ಟ್‌ ರೋಡ್‌ ಟೈರ್‌ಗಳಿದೆ.

ಒಳಾಂಗಣವನ್ನು ಆಕರ್ಷಕಗೊಳಿಸಲು ಎರಡು ಟೋನ್‌ಗಳ ಲೆದರ್‌ ಸೀಟ್‌ಗಳಿವೆ. ಹರ್ಮಾನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್, ಆಟೊ ಕ್ಲೈಮೇಟ್ ಕಂಟ್ರೋಲ್ ಸೌಲಭ್ಯಗಳಿವೆ. ಏರೊಡೈನಮಿಕ್ ಬಿಟ್ಸ್ ಕಾರ್ಬನ್ ಫೈಬರ್ ರಿ ಇನ್‌ಫೋರ್ಸ್ಡ್ ಪ್ಲಾಸ್ಟಿಕ್‌ನಿಂದ ನಿರ್ಮಿತಗೊಂಡಿದೆ.

ಕಾರ್ಬನ್ ಫೈಬರ್ ಎನ್‌ಹಾನ್ಸಡ್ ಪ್ಲಾಸ್ಟಿಕ್ ರೂಫ್ ಹಾಗೂ ಬ್ಯಾನೆಟ್, ಫ್ರಂಟ್ ಸ್ಪ್ಲಿಟರ್, ಬೂಟ್ ಮೌಂಟೆಡ್ ಗರ್ನಿ ಸ್ಪಾಯ್ಲರ್ ಮತ್ತು

ದೊಡ್ಡ ಡಿಫ್ಯೂಸರ್‌ಗಳನ್ನು ಒಳಗೊಂಡಿದೆ. ಸ್ಪೋರ್ಟ್ ಸ್ಟೀರಿಂಗ್ ವೀಲ್, ವಿನ್ಯಾಸಕ್ಕೆ ಮತ್ತೊಂದು ಸೇರ್ಪಡೆ. ಕ್ಯಾಬಿನ್‌ನಲ್ಲಿ ಲೆದರ್ ಅಕ್ಸೆಂಟ್‌ಗಳನ್ನು ಆಯ್ಕೆಯಾಗಿ ನೀಡಲಾಗಿದೆ. ಆದರೆ ಎಂ3 ಸಿಎಸ್‌ನ ನಿಖರ ಬೆಲೆಯ ಕುರಿತು ಕಂಪನಿ ಮಾಹಿತಿ ಬಹಿರಂಗಪಡಿಸಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.