ಶನಿವಾರ, ಫೆಬ್ರವರಿ 27, 2021
19 °C

ಗ್ರಾಹಕರಿಗೆ ಬಿಸಿ; ರೈತರಿಗೆ ಕೊಂಚ ನೆಮ್ಮದಿ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

ಗ್ರಾಹಕರಿಗೆ ಬಿಸಿ; ರೈತರಿಗೆ ಕೊಂಚ ನೆಮ್ಮದಿ

ಚಿಂತಾಮಣಿ: ಇಲ್ಲಿನ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಬೆಲೆ ಹೆಚ್ಚಳ ಗ್ರಾಹಕರಿಗೆ ಬಿಸಿಯಾಗಿ ಪರಿಣಮಿಸಿದ್ದರೆ ರೈತರಿಗೆ ಕೊಂಚ ಬೆಲೆ ತಂದುಕೊಟ್ಟ ನೆಮ್ಮದಿ ಇದೆ.

ಈರುಳ್ಳಿ ಬೆಲೆ 1 ಕೆ.ಜಿ.ಗೆ ₹ 60 ಗಡಿ ದಾಟಿದೆ. ಕ್ಯಾರೆಟ್‌ ಹಾಗೂ ಕೋಳಿ ಮೊಟ್ಟೆ ಬೆಲೆ ತೀವ್ರವಾಗಿ ಏರಿಕೆಯಾಗಿದೆ. 1 ವರ್ಷದಿಂದ ಸ್ಥಿರವಾಗಿದ್ದ ಈರುಳ್ಳಿ ಬೆಲೆ ಹೆಚ್ಚಿರುವುದರಿಂದ ರೈತರಿಗೆ ಖುಷಿ ತಂದಿದೆ. ‘ಈರುಳ್ಳಿ ಆವಕ ಕಡಿಮೆಯಾಗಿದ್ದು ಇನ್ನೂ ಏರಿಕೆಯಾಗುವ ಸಂಭವವಿದೆ’ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿಗಳು.

‘ಉತ್ಪಾದನೆ ಕಡಿಮೆ ಇರುವುದರಿಂದ ಬೆಲೆ ಹೆಚ್ಚಾಗಿದೆ. ಆರಂಭದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಈರುಳ್ಳಿ ಬಿತ್ತನೆ ತಡವಾಯಿತು. ಬಿತ್ತನೆಯಾಗಿದ್ದ ಈರುಳ್ಳಿ

ಗಡ್ಡೆಯಾಗುವ ಹಂತದಲ್ಲಿ ಮಜ್ಜೆಗೆ ರೋಗಕ್ಕೆ ತುತ್ತಾಗಿ ಇಳುವರಿ ಕಡಿಮೆಯಾಯಿತು’‌ ಎಂದು ವ್ಯಾಪಾರಿ ಅಶ್ವತ್ಥನಾರಾಯಣಪ್ಪ ತಿಳಿಸಿದರು.

ನವೆಂಬರ್‌ ಪ್ರಾರಂಭದಲ್ಲಿ ಪ್ರತಿ ಕ್ವಿಂಟಲ್‌ಗೆ ₹ 2700 ರಿಂದ 2900 ರ ವರೆಗೆ ಇದ್ದ ಈರುಳ್ಳಿ ಬೆಲೆ ಕೊನೆಯ ವಾರದಲ್ಲಿ ₹ 3600 ರಿಂದ ₹ 5250ರವರೆಗೆ ತಲುಪಿದೆ. ಕ್ಯಾರೆಟ್‌ ಬೆಲೆ ಸಹ ಅಧಿಕವಾಗಿದೆ. ಕೆ.ಜಿ.ಗೆ ₹ 80 ರಿಂದ 90 ರವರೆಗೆ ಮಾರಾಟವಾಗುತ್ತಿದೆ. ಅಧಿಕ ಮಳೆಯಾಗಿದ್ದರಿಂದ ಕ್ಯಾರೆಟ್‌ ಭೂಮಿಯಲ್ಲಿಯೇ ಕೊಳೆಯಿತು. ಫಸಲು ಕಡಿಮೆ ಆಯಿತು. ಇದರಿಂದ ಬೆಲೆ ಹೆಚ್ಚಳವಾಗಿದೆ’ ಎನ್ನುವರು ವ್ಯಾಪಾರಿಗಳು.

ಕೋಳಿ ಮೊಟ್ಟೆಯ ದರ ವರ್ಷದಲ್ಲೇ ಅತ್ಯಂತ ಹೆಚ್ಚಿನ ದರ ದಾಖಲಿಸಿದೆ. ಚಳಿಗಾಲ ಆರಂಭವಾಗುತ್ತಿರುವುದರಿಂದ ಕೋಳಿ ಮೊಟ್ಟ ಉತ್ಪಾದನೆ ಕಡಿಮೆಯಾಗಿದೆ. ಜತೆಗೆ ಕೋಳಿ ಮೊಟ್ಟೆಯನ್ನು ಚಳಿಗಾಲದಲ್ಲಿ ಅಧಿಕವಾಗಿ ಬಳಸುತ್ತಾರೆ. ಹೀಗಾಗಿ ದರ ಗಗನಕ್ಕೆ ಏರಿದೆ. ಈ ವಾರ ಒಂದು ಮೊಟ್ಟೆ ಬೆಲೆ ₹ 6 ಇತ್ತು.

ಬೆಲೆ ಇಳಿಕೆ: ಒಂದು ಕಡೆ ತರಕಾರಿ ಬೆಲೆಗಳು ಹೆಚ್ಚುತ್ತಿದ್ದರೆ ಸೊಪ್ಪಿನ ಬೆಲೆ ಇಳಿಯುತ್ತಿದೆ. ನವೆಂಬರ್ ಆರಂಭದಲ್ಲಿ ಒಂದು ಕಟ್ಟಿಗೆ 40 ರಿಂದ 50 ಇದ್ದ ಕೊತ್ತೊಂಬರಿ ಸೊಪ್ಪು ₹ 10ಕ್ಕೆ ‌ಇಳಿದಿದೆ. ದಂಟು, ಮೆಂತ್ಯ, ಸಬ್ಬಕ್ಸಿ, ಪಾಲಕ್‌ ಸೊಪ್ಪುಗಳು ಕಟ್ಟಿಗೆ ₹ 10 ರಿಂದ 15 ರೂಗೆ ಮಾರಾಟ ಮಾಡುತ್ತಿದ್ದೇವೆ ಎಂದು ಸೊಪ್ಪಿನ ವ್ಯಾಪಾರಿ

ಸರೋಜಮ್ಮ ಹೇಳಿದರು. ಅವರೆಕಾಯಿ ಮಾರುಕಟ್ಟೆಗೆ ಬರುತ್ತಿದೆ. ಆದ್ದರಿಂದ ತರಕಾರಿ ಬೆಲೆಗಳು ಸ್ವಲ್ಪ ಮಟ್ಟಿಗೆ ಇಳಿಯುತ್ತವೆ ಎಂದು ಬಹುತೇಕ ಗ್ರಾಹಕರು ನಂಬಿದ್ದಾರೆ.

₹ 5250 ಕ್ವಿಂಟಲ್ ಈರುಳ್ಳಿಯ ಗರಿಷ್ಠ ಬೆಲೆ

₹ 90 ಒಂದು ಕೆ.ಜಿ.ಕ್ಯಾರೆಟ್ ಬೆಲೆ

₹ 6 1 ಮೊಟ್ಟೆ ಬೆಲೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.