7

ಆಸ್ಟ್ರೇಲಿಯಾ: ಸಲಿಂಗಿಗಳ ವಿವಾಹಕ್ಕೆ ಅವಕಾಶ

Published:
Updated:
ಆಸ್ಟ್ರೇಲಿಯಾ: ಸಲಿಂಗಿಗಳ ವಿವಾಹಕ್ಕೆ ಅವಕಾಶ

ಸಿಡ್ನಿ: ಸಲಿಂಗಿಗಳ ವಿವಾಹ ಕಾನೂನುಬದ್ಧಗೊಳಿಸುವ ಮಸೂದೆಯನ್ನು ಆಸ್ಟ್ರೇಲಿಯಾ ಸಂಸತ್ತು ಅಂಗೀಕರಿಸಿದ್ದು, ಈ ಮೂಲಕ ಹಲವು ವರ್ಷಗಳಿಂದ ಇದ್ದ ರಾಜಕೀಯ ತಿಕ್ಕಾಟ ಅಂತ್ಯಗೊಂಡಿದೆ.

‘ಇದು ಪ್ರೀತಿ, ಸಮಾನತೆ ಹಾಗೂ ಪರಸ್ಪರ ಗೌರವ ಹಂಚಿಕೊಳ್ಳುವ ದಿನ, ಆಸ್ಟ್ರೇಲಿಯಾ ಕೊನೆಗೂ ಇದನ್ನು ಸಾಧಿಸಿದೆ’ ಎಂದು ಪ್ರಧಾನಿ ಮಾಲ್ಕಂ ಟರ್ನ್‌ಬುಲ್ ಸಂಸತ್ತಿನಲ್ಲಿ ಹೇಳಿದರು. ಮಸೂದೆ ಅಂಗೀಕಾರದಿಂದಾಗಿ, ಸಲಿಂಗಿಗಳ ವಿವಾಹ ಕಾನೂನು ಬದ್ಧವಾಗಿಸಿದ 20 ದೇಶಗಳ ಸಾಲಿಗೆ ಆಸ್ಟ್ರೇಲಿಯಾ ಸೇರಿದೆ.  ಮಸೂದೆಗೆ ಒಪ್ಪಿಗೆ ದೊರೆತ ಬಳಿಕ ಸಲಿಂಗಿ ಜೋಡಿಗಳು ಸಂಭ್ರಮಿಸಿದರು. 

ಅಂಚೆಮತದ ಮೂಲಕ ಜನರ ಅಭಿಪ್ರಾಯ ವನ್ನು ಸರ್ಕಾರ ಸಂಗ್ರಹಿಸಿತ್ತು. ಶೇ80 ಮತದಾರರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 1.2 ಕೋಟಿ ಮತದಾರರಲ್ಲಿ ಶೇ 62ರಷ್ಟು ಮಂದಿ ಸಂಲಿಂಗಿಗಳ ವಿವಾಹವನ್ನು ಬೆಂಬಲಿಸಿ ಮತ ಚಲಾಯಿಸಿದ್ದರೆ, 50 ಲಕ್ಷ ಮತದಾರರು ಇದನ್ನು ವಿರೋಧಿಸಿ ಮತ ಚಲಾಯಿಸಿದ್ದರು. ಶನಿವಾರದಿಂದ ಈ ನೂತನ ಕಾನೂನು ಜಾರಿಗೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry