ಬಲೋಚಿಸ್ತಾನದಲ್ಲಿ ಸ್ಫೋಟ :ಎಂಟು ಮಂದಿಗೆ ಗಾಯ

7

ಬಲೋಚಿಸ್ತಾನದಲ್ಲಿ ಸ್ಫೋಟ :ಎಂಟು ಮಂದಿಗೆ ಗಾಯ

Published:
Updated:

ಕರಾಚಿ: ಎರಡು ಪ್ರತ್ಯೇಕ ಸ್ಫೋಟಗಳಲ್ಲಿ ಮೂವರು ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ ಎಂಟು ಮಂದಿ ಗಾಯಗೊಂಡಿರುವ ಘಟನೆ ಬಲೋಚಿಸ್ತಾನದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ಗಡಿಯಲ್ಲಿರುವ ಚಮಾನ್‌ ನಗರದ ಮಾಲ್‌ ರಸ್ತೆಯ ಮಾರುಕಟ್ಟೆಯ ಸಮೀಪ ನಿರ್ಮಾಣಗೊಳ್ಳುತ್ತಿರುವ ಕಟ್ಟಡದಲ್ಲಿ ಸುಧಾರಿತ ಸ್ಫೋಟಕ ಸಾಧನದಿಂದ ನಡೆದ ಮೊದಲ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಅದೇ ಪ್ರದೇಶದ ಪೊಲೀಸ್‌ ಚೆಕ್‌ಪೋಸ್ಟ್‌ ಸಮೀಪ ಸಂಭವಿಸಿದ ಎರಡನೇ ಸ್ಫೋಟದಲ್ಲಿ ಮೂವರು ಭದ್ರತಾ ಸಿಬ್ಬಂದಿ ಸೇರಿದಂತೆ ಆರು ಜನ ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry