‘ರಂಗೋಲಿಯಲ್ಲಿ ಅರಳಿದ ಹೃದಯ, ಕಿಡ್ನಿ, ಮೆದುಳು’

7

‘ರಂಗೋಲಿಯಲ್ಲಿ ಅರಳಿದ ಹೃದಯ, ಕಿಡ್ನಿ, ಮೆದುಳು’

Published:
Updated:

ಮೂಡಲಗಿ: ‘ಮಾನವ ದೇಹ ರಚನೆ, ಪಚನಕ್ರಿಯೆ, ಹೃದಯ ಮತ್ತು ರಕ್ತಚಲನೆ, ಕಿಡ್ನಿ, ಮಿದುಳು, ಕಣ್ಣಿನ ಭಾಗಗಳು, ಮೀನು, ಸಸ್ಯ ಸೇರಿದಂತೆ ವಿಜ್ಞಾನಕ್ಕೆ ಸಂಬಂಧಿಸಿದ ಮತ್ತು ಗಣಿತ, ಸಮಾಜ ವಿಜ್ಞಾನ ವಿಷಯಕ್ಕೆ ಪೂರಕವಾದ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಿ ಇಲ್ಲಿಯ ಎಸ್ಎಸ್‌ಆರ್ ಪ್ರೌಢ ಶಾಲಾ ಮಕ್ಕಳು ಹೊಸ ವರ್ಷವನ್ನು ವಿನೂತನವಾಗಿ ಆಚರಿಸಿದರು.

ಶಾಲಾ ಮಕ್ಕಳಲ್ಲಿ ರಂಗೋಲಿ ಮತ್ತು ಚಿತ್ರಕಲೆಯ ವಿಷಯ ಜ್ಞಾನದಲ್ಲಿ ಕರಗತ ಮಾಡಿಸುವ ಶಾಲೆಯ ಚಿತ್ರಕಲಾ ಶಿಕ್ಷಕ ಸುಭಾಷ ಕುರಣಿ ಅವರ ಕಾರ್ಯವು ಎಲ್ಲರ ಗಮನಸೆಳೆಯಿತು.

‘ವಿದ್ಯಾರ್ಥಿಗಳು ರಂಗೋಲಿಯಲ್ಲಿ ವಿಜ್ಞಾನದ ಚಿತ್ರಗಳನ್ನು ಬಿಡಿಸುವಲ್ಲಿ, ವಿಜ್ಞಾನಕ್ಕೆ ಸಂಬಂಧಿಸಿದ ಕೆಲವು ಚಿತ್ರಗಳನ್ನು ಮನನ ಮಾಡಿಕೊಳ್ಳಲು ಅನುಕೂಲವಾಗುವುದು. ಇದು ಪರೀಕ್ಷೆಯಲ್ಲಿ ಚಿತ್ರಗಳನ್ನು ಬಿಡಿಸಲು ಸಹ ಉಪಯುಕ್ತವಾಗುವುದು’ ಎಂದು ಶಾಲೆಯ ಉಪಪ್ರಾಂಶುಪಾಲ ಯು.ಬಿ. ದಳವಾಯಿ ಹೇಳಿದರು.

30ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ರಂಗೋಲಿ ಚಿತ್ತಾರ ಗಳನ್ನು ಬಿಡಿಸುವ ಮೂಲಕ ರಂಗೋಲಿ ಕಲೆಯ ಬಗ್ಗೆ ಇರುವ ಅಭಿರುಚಿಯನ್ನು ತೋರಿಸಿದರು. ವಿಜ್ಞಾನ ಶಿಕ್ಷಕ ಆರ್.ಟಿ. ಲಂಕೆಪ್ಪನವರ, ಎ.ಆರ್. ಶೇಗುಣಶಿ, ಆರ್.ಕೆ. ಕಳಸನ್ನವರ ಭಾಗವಹಿಸಿದ್ದರು.

ವಿಜೇತರು: 8ನೇ ತರಗತಿ: ವೈಷ್ಣವಿ ಕೊಡಗಾನೂರ (ಪ್ರಥಮ), ತ್ರಿವೇಣಿ ಪುನೇದ (ದ್ವಿತೀಯ), ರೂಪಾ ಉಪ್ಪಾರ, ಕಾವ್ಯಾ ಬಿಜಗುಪ್ಪಿ, ಮಹಮ್ಮದ ನದಾಪ (ತೃತೀಯ). 9ನೇ ತರಗತಿ: ಶಮೀನಾ ಪಠಾಣ (ಪ್ರಥಮ), ಕವಿತಾ ಕೌಜಲಗಿ (ದ್ವಿತೀಯ), ಸವಿತಾ ಗೋಡಿ (ತೃತೀಯ), 10ನೇ ತರಗತಿ: ವಿದ್ಯಾಶ್ರೀ ಜೋಡಟ್ಟಿ (ಪ್ರಥಮ), ಅಶ್ವಿನಿ ಉಪ್ಪಾರ (ದ್ವಿತೀಯ), ವಿನಾಯಕ ಮರಿಯಲ್ಲಪ್ಪನರ, ಭೂಮಿಕಾ ಮಗದುಮ್‌ (ತೃತೀಯ)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry