ಭಾರತದ ಎದುರು ದಕ್ಷಿಣ ಆಫ್ರಿಕಾಗೆ 135 ರನ್‌ ಭರ್ಜರಿ ಜಯ

7

ಭಾರತದ ಎದುರು ದಕ್ಷಿಣ ಆಫ್ರಿಕಾಗೆ 135 ರನ್‌ ಭರ್ಜರಿ ಜಯ

Published:
Updated:
ಭಾರತದ ಎದುರು ದಕ್ಷಿಣ ಆಫ್ರಿಕಾಗೆ 135 ರನ್‌ ಭರ್ಜರಿ ಜಯ

ಸೆಂಚೂರಿಯನ್ (ದಕ್ಷಿಣ ಆಫ್ರಿಕಾ): ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಭಾರತ– ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಎದುರು ದಕ್ಷಿಣ ಆಫ್ರಿಕಾ 135 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 335 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಮೊತ್ತವನ್ನು ಬೆನ್ನತ್ತಿದ ಭಾರತ 307 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದರಿಂದ ಭಾರತ 28 ರನ್‌ ಹಿನ್ನಡೆ ಅನುಭವಿಸಿತ್ತು.

ಮಂಗಳವಾರ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 258 ರನ್‌ ಗಳಿಸಿ ಆಲೌಟ್‌ ಆಯಿತ್ತು. 286 ರನ್‌ ಗೆಲುವಿನ ಗುರಿ ಬೆನ್ನತ್ತಿದ ಭಾರತ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ 50.2 ಓವರ್‌ಗಳಲ್ಲಿ 151 ರನ್‌ ಗಳಿಸಿ ಆಲೌಟ್‌ ಆಗಿದೆ.  

ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2–0 ರಲ್ಲಿ ಮುನ್ನಡೆ ಸಾಧಿಸಿದ್ದು, ಸರಣಿ ವಶಪಡಿಸಿಕೊಂಡಿದೆ. 

ದಕ್ಷಿಣ ಆಫ್ರಿಕಾದ ವೇಗಿ ಲಂಗಿ ಗಿಡಿ ಪದಾರ್ಪಣೆ ಪಂದ್ಯದಲ್ಲಿ ಆರು ವಿಕೆಟ್‌ ಪಡೆದು ಪಂದ್ಯ ಶ್ರೇ‌ಷ್ಠ ಗೌರವಕ್ಕೆ ಭಾಜನರಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry