ಏಷ್ಯನ್ ಬ್ಯಾಡ್ಮಿಂಟನ್‌: ಕಣದಲ್ಲಿ ಸಿಂಧು, ಶ್ರೀಕಾಂತ್‌

7
ಫೆಬ್ರುವರಿ 6ರಿಂದ ಏಷ್ಯನ್ ಬ್ಯಾಡ್ಮಿಂಟನ್‌ ತಂಡ ಚಾಂಪಿಯನ್‌ಷಿಪ್‌

ಏಷ್ಯನ್ ಬ್ಯಾಡ್ಮಿಂಟನ್‌: ಕಣದಲ್ಲಿ ಸಿಂಧು, ಶ್ರೀಕಾಂತ್‌

Published:
Updated:
ಏಷ್ಯನ್ ಬ್ಯಾಡ್ಮಿಂಟನ್‌: ಕಣದಲ್ಲಿ ಸಿಂಧು, ಶ್ರೀಕಾಂತ್‌

ನವದೆಹಲಿ: ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಕಿದಂಬಿ ಶ್ರೀಕಾಂತ್ ಹಾಗೂ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ಪಿ.ವಿ ಸಿಂಧು ಅವರು ಮಲೇಷ್ಯಾದಲ್ಲಿ ಫೆಬ್ರುವರಿ 6ರಿಂದ 11ರವರೆಗೆ ನಡೆಯುವ ಬ್ಯಾಡ್ಮಿಂಟನ್ ಏಷ್ಯನ್ ತಂಡ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.

2016ರಲ್ಲಿ ಹೈದರಾಬಾದ್‌ನಲ್ಲಿ ಟೂರ್ನಿ ಆಯೋಜನೆಗೊಂಡಿತ್ತು. ಆಗ ಭಾರತ ಪುರುಷರ ತಂಡ ಸೆಮಿಫೈನಲ್‌ನಲ್ಲಿ ಇಂಡೊನೇಷ್ಯಾ ಎದುರು ಸೋತಿತ್ತು. ಮಹಿಳೆಯರ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು.

ಶ್ರೀಕಾಂತ್ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಎಚ್‌.ಎಸ್‌.ಪ್ರಣಯ್‌, ಸಾಯಿ ಪ್ರಣೀತ್‌, ಸಮೀರ್ ವರ್ಮಾ ಕೂಡ ಕಣದಲ್ಲಿ ಇದ್ದಾರೆ. ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸಿಂಧು ಆಡಲಿದ್ದಾರೆ. ಅವರೊಂದಿಗೆ ಸೈನಾ ನೆಹ್ವಾಲ್‌, ಕೃಷ್ಣ ಪ್ರಿಯಾ ಕುದರವಳ್ಳಿ, ರುತ್ವಿಕಾ ಶಿವಾನಿ ಗಾದ್ದೆ ಕಣದಲ್ಲಿ ಇದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿರೆಡ್ಡಿ, ಪ್ರಜಕ್ತಾ ಸಾವಂತ್‌ ಮತ್ತು ಸಂಯೋಗಿತಾ, ರಿತುಪರ್ಣಾ ದಾಸ್ ಹಾಗೂ ಯು.ಕೆ ಮಿತಿಲಿಯಾ ಸವಾಲು ಒಡ್ಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry