ಷೇರುಪೇಟೆಯಲ್ಲಿ ಹ್ಯಾಟ್ರಿಕ್‌ ದಾಖಲೆ

7

ಷೇರುಪೇಟೆಯಲ್ಲಿ ಹ್ಯಾಟ್ರಿಕ್‌ ದಾಖಲೆ

Published:
Updated:
ಷೇರುಪೇಟೆಯಲ್ಲಿ ಹ್ಯಾಟ್ರಿಕ್‌ ದಾಖಲೆ

ಮುಂಬೈ: ಷೇರುಪೇಟೆ ಸೂಚ್ಯಂಕಗಳು ಸತತ ಮೂರನೇ ದಿನವೂ ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸಿದವು.

ಸರಕು ಮತ್ತು ಸೇವೆಗಳ ತೆರಿಗೆ ದರ ತಗ್ಗಿಸಿರುವುದರಿಂದ ಶುಕ್ರವಾರ ಉತ್ತಮ ವಹಿವಾಟು ನಡೆಯಿತು. ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಟಿಸಿಯ ಆರ್ಥಿಕ ಸಾಧನೆ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಪ್ರಕಟವಾಗಿದ್ದು ಸಹ ಸಕಾರಾತ್ಮಕ ವಹಿವಾಟಿಗೆ ಉತ್ತೇಜನ ನೀಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸಾರ್ವಕಾಲಿಕ ಗರಿಷ್ಠ ಮಟ್ಟವಾದ 35,542 ಅಂಶಗಳಿಗೆ ಏರಿಕೆ ಕಂಡಿತ್ತು. ದಿನದ ವಹಿವಾಟಿನ ಅಂತ್ಯದ ವೇಳೆಗೆ 251 ಅಂಶಗಳ ಏರಿಕೆಯೊಂದಿಗೆ 35,511 ಅಂಶಗಳ ಹೊಸ ಎತ್ತರದಲ್ಲಿ ವಹಿವಾಟು ಅಂತ್ಯವಾಯಿತು. ಗುರುವಾರ 35,260 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 78 ಅಂಶ ಹೆಚ್ಚಾಗಿ 10,894 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಗುರುವಾರ 10,816ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು. ವಿದೇಶಿ ಹೂಡಿಕೆದಾರರು ಗುರುವಾರ ₹ 1,895 ಕೋಟಿ ಮೌಲ್ಯದ ಷೇರು ಖರೀದಿಸಿದ್ದಾರೆ. ಆದರೆ, ದೇಶಿ ಹೂಡಿಕೆದಾರರು ₹ 657 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry